ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನಸಾಗಿಯೇ ಉಳಿದ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರವರ ಕನಸು

ಕಲಬುರಗಿ/
ಕಾಳಗಿ: ಗಂಡೋರಿ ನಾಲಾ ಮತ್ತು ಬೆಣ್ಣೆ ತೊರೆ, ಯೋಜನೆ ಮೂಲಕ ರೈತರ ಜಮೀನುಗಳಿಗೆ ಮಾರ್ಚ್ ,ಏಪ್ರಿಲ್, ಮೇ ತಿಂಗಳಲ್ಲಿ ಕಾಲುವೆಗಳು ಮೂಲಕ ನೀರು ಹರಿಸಲು ಮತ್ತು ಮುಖ್ಯ ಕಾಲವೆ ,ಮರಿ ಕಾಲುವೆ ಮುಖ್ಯ ಗೇಟ್ ಮತ್ತು ಸಣ್ಣ ಗೇಟ್ ಒಡೆದ ಕಾಲುವೆಗಳು ದುರಸ್ತಿ ಮತ್ತು ಕಾಲುವೆಗಳು ಹೂಳು ತೆಗೆಯಬೇಕು ಜಂಗಲ್ ಕಟಿಂಗ್ ಮಾಡಲು ಅನ್ನದಾತರ ಹಿತದೃಷ್ಟಿಯಿಂದ ಸರ್ಕಾರದ ದಿಂದ ಹಣ ಬಿಡುಗಡೆ ಮಾಡಿ ಬೇಸಿಗೆ ಕಾಲದಲ್ಲಿ ಕಾಲುವೆಗಳು ಮೂಲಕ ನೀರು ಹರಿಸಲು ಒತ್ತಾಯಿಸಿ ದಿ. 13/1/2026 ರಂದು ಕಂದಗೋಳ ಕ್ರಾಸ್ ಹತ್ತಿರ ರಸ್ತೆ ತಡೆ ಚಳುವಳಿ ನಡೆಸಿ ಪೂಜ್ಯರು, ರೈತರು, ರೈತ ಮುಖಂಡರು ಗಂಡೋರಿ ನಾಲಾ ಅಧಿಕಾರಿಯ AEE ದಿನೇಶ ಚೌಹಾಣ ಹಾಗೂ ಕಾಳಗಿ ತಾಲೂಕ ಅಧಿಕಾರಿ ಮಾಣಿಕ ದತ್ತರಗಿ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಭಾಗದ ತೊಗರಿ ನಾಡಿನಲ್ಲಿ ತೊಗರಿ ಬೆಳೆ ವಿಶ್ವದಲ್ಲಿ ಪ್ರಖ್ಯಾತಿ ಪಡೆದಿದೆ 23 ಪ್ರತಿಶತ ಪ್ರೋಟೀನ್ ಅಂಶ ಹೊಂದಿದೆ , ಆದರೆ ತೊಗರಿ ನಾಡಿನ ರೈತರ ರೊಕ್ಕದ ಮಾಲು ಉದ್ದು, ಹೆಸರು, ಸೋಯಾ ಬಿನ್ ತೊಗರಿ ಅತಿವೃಷ್ಟಿ ಮಳೆಯಿಂದ ಹಾನಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಮತ್ತು ಬೆಂಬಲ ಬೆಲೆ ಇಲ್ಲದೆ ಮಾರುಕಟ್ಟೆ ನೆಲ ಕಚ್ಚಿ ಹೋಗಿದೆ ಅನ್ನದಾತರು ಸಾಲದ ಭಾದೆ ತಾಳಲಾರದೆ ಸರಣಿ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿವೆ ಕಲಬುರಗಿ ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ಅಭಿವೃದ್ಧಿ ಹೊಂದಲು ಆಸಕ್ತಿ ಉಳ್ಳುವ ರೈತರು ಸಾಕಷ್ಟು ನದಿಗಳು ಇದ್ದರೂ ಸಹ ಯಾವುದೇ ಪ್ರಯೋಜನ ಆಗುತ್ತಿಲ್ಲ ಹೀಗಾಗಿ ನೀರಾವರಿ ಬೆಳೆಗಳು ಬೆಳೆಯಲು ರೈತರು ಅತುರ ಪಡುತ್ತಿರುವ ಸಂಧರ್ಭದಲ್ಲಿ ಗಂಡೋರಿ ನಾಲಾ ಯೋಜನೆ ಮೇಲೆ ಅವಲಂಬಿತರಾದ ಅನ್ನದಾತರಿಗೆ ಅನ್ಯಾಯವಾಗುತ್ತಿದೆ, ಕಾಲುವೆಗಳು ಮೂಲಕ ರೈತರಿಗೆ ಅನೂಕುಲವಾಗುವಂತೆ ರೈತರ ಹಿತ ಕಾಪಾಡುವ ಸರ್ಕಾರದ ಮೊದಲ ಹೆಜ್ಜೆಯಾಗಿದೆ ಎಂದು ರೈತರು ಅಭಿಪ್ರಾಯ ಪಟ್ಟಿದ್ದಾರೆ. ಬೇಸಿಗೆ ಕಾಲದಲ್ಲಿ ಕಾಲುವೆಗಳು ಮೂಲಕ ನೀರು ಹರಿಸಲು ಅನ್ನದಾತರು ಒತ್ತಾಯ ಗಂಡೋರಿ ನಾಲಾ ಯೋಜನೆ 1978 ರಲ್ಲಿ ಅನುಮೋದನೆ ನೀಡಿದೆ 2009 ರಲ್ಲಿ ಈ ಯೋಜನೆ ಮುಕ್ತಾಯವಾಗಿದೆ ಗಂಡೋರಿ ನಾಲಾ, ಬೆಳಕೊಟಾ ಒಟ್ಟು ಭೂಮಿ 11650 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ, ಎಡದಂಡೆ 90 ಕಿ.ಮೀ ಮತ್ತು ಬಲದಂಡೆ 7 ಕಿ. ಮೀ. ಪ್ರದೇಶ ಹೊಂದಿದೆ.

ಬೇಡಿಕೆಗಳು :

1) ಗಂಡೋರಿ ನಾಲಾ ಪ್ರಾಜೆಕ್ಟ್ ಒಡೆದು ಹಾಳಾದ ಮುಖ್ಯ ಕಾಲುವೆಗಳು, ಮರಿ ಕಾಲುವೆಗಳು, ತುಕ್ಕು ಹಿಡಿದ ಮುಖ್ಯಗೇಟ್ ಗಳು ಸಣ್ಣ ಪ್ರಮಾಣದ ಗೇಟ್ ಗಳು ದುರಸ್ತಿ ಮಾಡಿಸಬೇಕು, ಮತ್ತು ಕಾಲುವೆಗಳು ಆಪ ಬೆಳೆದು ಹುಲ್ಲು ಗಿಡಾ ಕಂಟಿ ಕಮರಿ ಬೆಳೆದು ಹಾಳಾಗಿವೆ ಕಾಲುವೆಗಳು ಹುಳು ತೆಗೆಯಬೇಕು ಮತ್ತು ಬೇಸಿಗೆ ಸಮಯದಲ್ಲಿ ರೈತರ ಬೆಳೆಗಳಿಗೆ ನಿರಂತರವಾಗಿ ನೀರು ಬಿಡಬೇಕು.
2) ಬೆಣ್ಣೆ ತೊರಾ ಆಣೆಕಟ್ಟು ನಾಲಾ ಪ್ರಾಜೆಕ್ಟ್, ಒಡೆದು ಹಾಳಾದ ಮುಖ್ಯ ಕಾಲುವೆಗಳು, ಮರಿ ಕಾಲುವೆಗಳು, ತುಕ್ಕು ಹಿಡಿದ ಮುಖ್ಯ ಗೇಟ್ ಗಳು ಸಣ್ಣ ಪ್ರಮಾಣದ ಗೇಟ್ ಗಳು ದುರಸ್ತಿ ಮಾಡಿಸಬೇಕು, ಮತ್ತು ಕಾಲುವೆಗಳು ಹಾಪು ಬೆಳೆದು ಹುಲ್ಲು ಗಿಡ ಕಂಟಿ ಕಮರಿ ಬೆಳೆದು ಹಾಳಾಗಿವೆ ಕಾಲುವೆಗಳು ಹೂಳು ತೆಗೆಯಬೇಕು ಮತ್ತು ಬೇಸಿಗೆ ಸಮಯದಲ್ಲಿ ರೈತರಿಗೆ ಕಾಲುವೆಗಳು ಮುಖಾಂತರ ನೀರು ಹರಿಸಬೇಕು ಎನ್ನುವುದು ಸುಮಾರು ಹಳ್ಳಿಗಳ ರೈತರ ಬೇಡಿಕೆ. ರೈತರು ಎತ್ತಿನ ಗಾಡಿ ದನಕರಗಳು ಜೊತೆಗೆ ಟ್ರ್ಯಾಕ್ಟರ್ ತಂದು ರೋಡಿಗಳಿಗೂ ಸುಮಾರು 2 ಗಂಟೆಗಳ ಕಾಲ ರಸ್ತೆ ಮೇಲೆ ಹೋರಾಟ ಮಾಡಿದ ರೈತರ ಈ ಸಂದರ್ಭದಲ್ಲಿ ಪೂಜ್ಯ ಶ್ರೀ ರೇವಣಸಿದ್ದ ಶಿವಾಚಾರ್ಯರು ಪೂಜ್ಯ ಶ್ರೀ ನೀಲಕಂಠ ದೇವರು, ಪೂಜ್ಯ ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ, ಶರಣಬಸಪ್ಪ ಮಾಮಶೆಟ್ಟಿ ಜಿಲ್ಲಾ ಅಧ್ಯಕ್ಷರು, ವೀರಣ್ಣ ಗಂಗಾಣಿ ತಾಲೂಕ ಅಧ್ಯಕ್ಷರು, ರೈತ ಮುಖಂಡರಾದ ರೇವಣಸಿದ್ದಪ್ಪ ಸಾತನೂರು,
ಶಿವುರಾಜ ಪಾಟೀಲ್,
ಮಂಜು ಪಾಟೀಲ್,
ರೇವಪ್ಪ ಪಾಟೀಲ್,
ಮಲ್ಲು ಪಾಟೀಲ್, ಮಲಿನಾಥ ಮುಚ್ಚೆಟ್ಟಿ,
ಸಿದ್ದಪ್ಪ ಕಲಶಟ್ಟಿ,
ಗುಂಡಪ್ಪಾ ಅರಣಕಲ್, ಗುರು ಬಾದನ,
ಸಿದ್ದನಗೌಡ ಅರಣಕಲ್,
ಸಿದ್ದಯ್ಯಾ ಸ್ವಾಮಿ,
ಗಿರಿಶ ದೆವರಮನಿ, ರವಿ ಸೀಗಿ, ಮಲ್ಲು ಬಾದನ,
ನೀಲಕಂಠ ಕಲಬುರಗಿ, ಪ್ರಕಾಶ್ ಗುಂಡಾನೂರ, ಶಿವು ಸಾಲಿ, ಸಿದ್ದಣ್ಣ ಬಿರಾದಾರ, ಲೋಕೇಶ ಅಗಸಿಮನಿ ಸೇರಿದಂತೆ ಇತರರು ಇದ್ದರು.

ವರದಿ ಎಸ್. ವಿ. ಗಂಗಾಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!