ಸಿರುಗುಪ್ಪ ನಗರದ ಸದಾಶಿವನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ಮಂಜೂರುಗೊಂಡ ವಾಟರ್ ಬೆಡ್ನ್ನು ಸದಾಶಿವನಗರದ ದುರುಗಮ್ಮನವರಿಗೆ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರು ರವರು ವಿತರಿಸಿದರು.
ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಅದರಲ್ಲೂ ವಿಶೇಷವಾಗಿ ವಿಶೇಷ ಚೇತನರಿಗೆ ಜಲಮಂಗಲ ಕಾರ್ಯಕ್ರಮದಡಿ ವೀಲ್ ಚೇರ್, ಕಮೋಡ್ ಚೇರ್, ಯು ಸೇಫ್ ವಾಕರ್, ತ್ರೀ ಲೆಗ್ ಸ್ಟಿಕ್, ಸಿಂಗಲ್ ಲೆಗ್ ಸ್ಟಿಕ್, ವಾಟರ್ ಬೆಡ್ ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು, ತಾಲೂಕಿನಲ್ಲಿ ಈವರೆಗೆ 38 ಲಕ್ಷ ಮೌಲ್ಯದ ಸಲಕರಣೆಗಳನ್ನು ವಿತರಿಸಲಾಗಿದ್ದು ವಿಶೇಷ ಚೇತನರು ಗೌರವಯುತ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಇನೂಸ್, ವಲಯ ಮೇಲ್ವಿಚಾರಕಿ ರೇಣುಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರಿಯಾ, ಸೇವಾ ಪ್ರತಿನಿಧಿ ಅನಿತಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















