ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಶಾನವಾಸಪುರದ ಜಾಮಿಯಾ ಮಸೀದಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 50 ಮಕ್ಕಳಿಗೆ ಪುಸ್ತಕ ಮತ್ತು ಪೆನ್ ವಿತರಿಸಿ ಮಾತನಾಡಿದ
ಬಿಜಾಪುರದ ಯಾಸೀನ್ ಸೌದಾಗರ್ ಅವರು ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಮೊಬೈಲ್ ಇಂದ ದೂರ ಇರಿಸಿ ಪುಸ್ತಕದಿಂದ ಹತ್ತಿರ ಇರಿಸಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕು ಇದರಲ್ಲಿ ಪೋಷಕರ ಪಾತ್ರ ಬಹು ಮುಖ್ಯ ವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೌಲಾನ ಅಲ್ತಾಫ್, ಮೌಲಾನ ಇಶಾಕ್, ಅಫೀಜ್ ಮುಜಾಮಿಲ್ ,ಕಂಪ್ಲಿ ಅಫೀಜ್ ಸಿದ್ದಿಕ್, ಅಫೀಜ್ ಆರೀಫ್, ಮುಖಂಡರಾದ ಬಳಿಗೇರು ಪೀರಾ ಸಾಬ್, ಹೆಚ್. ಖಾಜಾಸಾಬ್, ಬಿ ಬಷೀರ್ ಸಾಬ್, ಹಮೀದುಲ್ಲಾ, ಮಹಮ್ಮದ್ ರಫಿ ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















