ವಿಜಯನಗರ/ ಕೂಡ್ಲಿಗಿ : ಪಟ್ಟಣದ ಡಾ.ಬಿ.ಅಂಬೇಡ್ಕರ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ಸೃಷ್ಟಿ( 14) ಹಾಗೂ ಅವರ ತಾತ ಸಾವು ಕೂಡ್ಲಿಗಿ ಶಾಲೆಯಲ್ಲಿ ಪರೀಕ್ಷೆ ಮುಗಿದ ಕಾರಣ ತಾತನ ಜತೆ ಬೈಕ್ ನಲ್ಲಿ ಹೊರಟಿದ್ದ ಸೃಷ್ಟಿ ಕರ್ನಾರಹಟ್ಟಿಗೆ ಬೈಕ್ ನಲ್ಲಿ ಕರೆದೊಯ್ಯುವಾಗ ಅಪಘಾತವಾಗಿದೆ.
ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದೆ.
ಹೆದ್ದಾರಿಯಲ್ಲಿ ರೈತರು ರಾಗಿ ಒಣಗಿಸಲು ಹಾಕಿದ್ದರಿಂದ ಬೈಕ್ ರಾಗಿಯಲ್ಲಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಬೈಕ್ ಸ್ಕಿಡ್ ಆಗಿ ಇಬ್ಬರೂ ಕೆಳಗೆ ಬಿದ್ದ ತಕ್ಷಣ ಹಿಂಬದಿಯಲ್ಲಿ ಹೋಗುತ್ತಿದ್ದ ಲಾರಿಯ ಚಕ್ರ ಅಜ್ಜ ಹಾಗೂ ಮೊಮ್ಮಗಳು ಸ್ಥಳದಲ್ಲೇ ಅಸುನೀಗಿದ್ದಾರೆ.
ಘಟನಾ ಸ್ಥಳಕ್ಕೆ ಕೂಡ್ಲಿಗಿ ಪಿಎಸ್ ಐ, ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















