ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)

  • ೧)ನಮ್ಮ ಸಂಘದಿಂದ ರಕ್ತದಾನ ಶಿಬಿರಗಳನ್ನು ,ಗ್ರಾಮೀಣ ಜನರಿಗೆ ಆರೋಗ್ಯ ಮಾಹಿತಿ
  • ಶಿಬಿರಗಳನ್ನು ಏರ್ಪಡಿಸುವುದು
  • ೨) ನಾಡಿನ ಹಳ್ಳಿಗಳ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು
  • ಅನುಷ್ಟಾನಗೊಳಿಸುವುದು.
  • ೩) ಸಂಸ್ಥೆಯ ವತಿಯಿಂದ ಕನ್ನಡ ಮಾಧ್ಯಮ ಹಾಗೂ ಇಂಗ್ಲೀಷ ಮಾಧ್ಯಮದ, ಬಾಲವಾಡಿ,
  • ನರ್ಸರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜುಗಳನ್ನು
  • ಹಾಗೂ ಶಿಕ್ಷಕರ ತರಬೇತಿ ಕಾಲೇಜು ಮತ್ತು ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸುವುದು,
  • ನಡೆಸುವುದು ಶಿಕ್ಷಣ ಪ್ರಸಾರ ಕಾರ್ಯಕ್ರಮ ಹಮ್ಮಿಕೊಳ್ಳುವುದು.
  • ೪) ಮಹಿಳೆಯರ ಉನ್ನತಿಗಾಗಿ ಅಗತ್ಯವಾದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಪ್ರತ್ಯೇಕವಾಗಿ
  • ಸ್ಥಾಪಿಸುವುದು, ನಡೆಸುವುದು.
  • ೫) ನಾಡಿನ ಬಡ ಜನತೆಗಾಗಿ ಉಚಿತ ಆಸ್ಪತ್ರೆ, ಆರೋಗ್ಯ ಸಲಹಾ ಕೇಂದ್ರ, ಕುಟುಂಬ ಸಲಹಾ
  • ಕೇಂದ್ರಗಳನ್ನು ಸ್ಥಾಪಿಸುವುದು.
  • ೬) ದೈಹಿಕ ಅಂಗವಿಕಲರ ಪುನಶ್ಚೇತನ ಹಾಗೂ ಅಬಲೆಯರ ದೇವದಾಸಿಯರ ಸಮಸ್ಯೆಗಳಿಗೆ
  • ಸ್ಪಂದಿಸಿ ಸಮಾಜದ ಜನವಾಹಿನಿಯಲ್ಲಿ ಸಾಮಾನ್ಯ ಜನರಂತೆ ಬದುಕುವ ವ್ಯವಸ್ಥೆಯನ್ನು
  • ಕಲ್ಪಿಸಿಕೊಡುವುದು. ಅವರಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು.
  • ೭) ಅನಾಥರು, ಬಡಮಕ್ಕಳು, ಬೀದಿ ಮಕ್ಕಳು, ವಯೋವೃದ್ಧರು ಮತ್ತು ನಿರ್ಗತಿಕರ ಪುನಶ್ಚೇತನ
  • ಹಾಗೂ ಪುನರ್ವಸತಿ ಕಲ್ಪಿಸಿಕೊಡುವುದು, ವೃದ್ಧಾಶ್ರಮಗಳನ್ನು ಕಾರ್ಯಗತಗೊಳಿಸುವುದು.
  • ೮) ಬಡತನ, ಅನಕ್ಷರತೆ, ಮೂಢನಂಬಿಕೆ, ನಿರುದ್ಯೋಗ ಇನ್ನೂ ಮುಂತಾದ ಸಮಸ್ಯೆಗಳಿಗೆ
  • ಪರಿಹಾರ ಮಾರ್ಗವನ್ನು ಕಂಡುಕೊಳ್ಳುವಂತಹ ವಾತಾವರಣವನ್ನು ಸಮಾಜದಲ್ಲಿ ಸೃಷ್ಟಿಸಿ ಈ
  • ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧ ಪಟ್ಟಂತೆ ಕಾರ್ಯಯೋಜನೆಗಳನ್ನು ಕೈಗೊಳ್ಳುವುದು.
  • ೯) ನಾಡಿನ ಮಹಿಳೆಯರ ಕಲ್ಯಾಣ ಅಭಿವೃದ್ಧಿಗಾಗಿ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳನ್ನು
  • ಹಾಗೂ ಸಮಾಜ ಕಲ್ಯಾಣ ಸಲಹಾ ಮಂಡಳಿ ಯೋಜನೆಗಳನ್ನು ಯಶಸ್ವಿಯಾಗಿ
  • ಕಾರ್ಯರೂಪಕ್ಕೆ ತರವುದು.
  • ೧೦) ಅಂತರ್ಜಲ ಸಂರಕ್ಷಣೆ ಮತ್ತು ಅಂತರ್ಜಲವೃದ್ಧಿಗಾಗಿ ಜಲಾನಯನ ಅಭಿವೃದ್ಧಿ
  • ಯೋಜನೆಗಳನ್ನು ವ್ಯವಸ್ಥಿತವಾಗಿ ಕಾರ್ಯಗೊಳಿಸುವುದು.
  • ೧೧) ನೈರ್ಮಲ್ಯಕರಣ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಕೊಳಚೆ ನಿರ್ಮೂಲನೆ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವುದು.
  • ೧೨) ಕೃಷಿ ತೋಟಗಾರಿಕೆಯನ್ನು ಅಭಿವೃದ್ಧಿಪಡಿಸುವಂತಹ ಯೋಜನೆಗಳನ್ನು ತರಬೇತಿಗಳ ಮುಖಾಂತರ ಯಶಸ್ವಿಯಾಗಿ ಜಾರಿಗೆ ತರುವುದು.
  • ೧೩) ಜಾನುವಾರು, ಘೋಷಣೆ, ಜೇನುಸಾಕಾಣಿಕೆ, ಕುರಿ, ಕೋಳಿ ಸಾಕಾಣಿಕೆ, ರೇಷ್ಮೆಯಂತ ವಿವಿಧ
  • ರೀತಿಯ ಯೋಜನೆಗಳಿಗೆ ತರಬೇತಿ ನೀಡುವುದರ ಮೂಲಕ ಸ್ವಯಂ ಉದ್ಯೋಗವಕಾಶಗಳನ್ನು ಸೃಷ್ಟಿಸುವುದು.
  • ೧೪) ಅರಣ್ಯೀಕರಣ, ಪರಿಸರ ಸಂರಕ್ಷಣೆಯಂತ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡು
  • ಅವುಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸುವುದು.
  • ೧೫) ಗುಡಿ ಕೈಗಾರಿಕೆಗಳು, ಹಾಗೂ ಖಾದಿ ಗ್ರಾಮೋದ್ಯೋಗ ಯೋಜನೆಗಳನ್ನು ಸಮುದಾಯ
  • ಸಂಘಟನೆಯಿಂದ ಅಭಿವೃದ್ಧಿಪಡಿಸುವುದು
  • ೧೬) ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ಸ್ವದೇಶಿ ವಸ್ತುಗಳನ್ನು ಬಳಸುವುದರಲ್ಲಿ ತಿಳುವಳಿಕೆ
  • ನೀಡುವುದರ ಮೂಲಕ ಸ್ವದೇಶಿ ಜಾಗೃತಿ ಮೂಡಿಸುವುದು.
  • ೧೭) ವಿಜ್ಞಾನ ಹಾಗೂ ತಾಂತ್ರಿಕತೆಯ ಅಭಿವೃದ್ಧಿಗಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು.
  • ೧೮) ಸ್ವ-ಸಹಾಯ ಗುಂಪುಗಳ ರಚನೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಕಾರ್ಯಕ್ರಮಗಳನ್ನು
  • ಹಮ್ಮಿಕೊಳ್ಳುವಂತಹ ಸ್ವಯಂ ಉದ್ಯೋಗ ತರಬೇತಿಯನ್ನು ನೀಡುವುದು.
  • ೧೯) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ
  • ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಹಾಕಿಕೊಂಡು ಅವರಿಗೆ ತರಬೇತಿ ನೀಡುವುದರ
  • ಮುಖಾಂತರ ಎಲ್ಲಾ ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸುವುದು.
  • ೨೦) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳನ್ನು ವ್ಯವಸ್ಥಿತವಾಗಿ
  • ಕಾರ್ಯಗತಗೊಳಿಸುವುದು.
  • ೨೧) ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ಸಾರ್ವಜನಿಕ ವಲಯಗಳಿಂದ ವಂತಿಗೆ ಪಡೆದುಕೊಂಡು ಸಮಂಜಸವಾಗಿ ಬೇರೆ ಬೇರೆ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಜನಪರ
  • ಯೋಜನೆಗಳನ್ನು ಸಂಸ್ಥೆಯ ಮುಖಾಂತರ ಅನುಷ್ಠಾನಗೊಳಿಸುವುದು.
  • ೨೨) ವಿದ್ಯಾರ್ಥಿ ಸಮೂಹಕ್ಕೆ ಹಾಗೂ ಯುವ ಸಮೂಹಕ್ಕೆ ನಾಯಕತ್ವ ಬೆಳವಣಿಗೆ ಮತ್ತು ನೈತಿಕ
  • ಮಟ್ಟವನ್ನು ಬೆಳೆಸುವಂತಹ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡು ಸಮಾಜದಲ್ಲಿ ಯುವ
  • ಸಮುದಾಯವನ್ನು ಸಂಘಟಿತಗೊಳಿಸುವುದು.
  • ೨೩) ಸಾಮಾಜಿಕ ಸಾಮಾರಸ್ಯಕ್ಕಾಗಿ ಕೋಮು ಸೌಹಾರ್ದತೆ ಹಾಗೂ ಸಮಾಜದಲ್ಲಿ ಕೋಮು
  • ಸೌಹಾರ್ದತೆಯ ಪರಂಪರೆಯನ್ನು ಬೆಳೆಸುವುದು
  • ೨೪) ಪ್ರಕೃತಿ ನಿರ್ಮಿತ ವಸ್ತುಗಳ ಸದ್ಬಳಕೆ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ
  • ಮಾಡುವುದು.
  • ೨೫) ರಾಷ್ಟ್ರೀಯ ಐಕ್ಯತೆ – ಸಮಗ್ರತೆ ಕಾಪಾಡುವಲ್ಲಿ ಪ್ರಜೆಗಳಲ್ಲಿ ಕರ್ತವ್ಯದ ಅರಿವು ಮೂಡಿಸುವುದು.
  • ೨೬) ಸೌರಶಕ್ತಿ ಬಳಕೆಯ ಅನಿವಾರ್ಯತೆಯ ಅರಿವನ್ನು ಜನರಲ್ಲಿ ಜಾಗೃತಿಗೊಳಿಸುವುದು.
  • ೨೭) ಅಸಂಪ್ರದಾಯಿಕ ಶಕ್ತಿಗಳ ಅಭಿವೃದ್ಧಿ ಮತ್ತು ಉಪಯೋಗದ ಬಗ್ಗೆ ಜನರಿಗೆ ಮನವರಿಕೆ
  • ಮಾಡಿಕೊಡುವುದು.
  • ೨೮) ಅಪಘಾತ ತಪ್ಪಿಸಬಹುದಾದ ಕ್ರಮಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು.
  • ೨೯) ರಾಜ್ಯ ಮತ್ತು ರಾಷ್ಟ್ರೀಯ ಸರಕಾರಿ ಕಾರ್ಯಕ್ರಮಗಳಲ್ಲಿ ಜನತೆಯ
  • ಸಹಭಾಗಿತನಗೊಳಿಸುವುದು.
  • ೩೦) ಸಮಾಜದ ಜನ ಸಮೂಹದಲ್ಲಿ ಸಹಕಾರಿ ಮನೋಭಾವನೆಯನ್ನು ಬೆಳೆಸುವುದು.
  • ೩೧) ಸಾಂಸ್ಕೃತಿಕ ಹಾಗೂ ಕ್ರೀಡಾ ಪರಂಪರೆಯನ್ನು ಶ್ರೀಮಂತಗೊಳಿಸುವುದು.
  • ೩೨) ಸಂಸ್ಥೆಯ ಹಣವನ್ನು ಸಂಸ್ಥೆಯ ಅಭಿವೃದ್ಧಿಗಾಗಿ ವಿನಿಯೋಗಿಸುವುದು. ಸದಸ್ಯರಿಗಾರಿಗೂ
  • ಹಂಚತಕ್ಕದ್ದಲ್ಲ.
  • ೩೩) ಸಾಮೂಹಿಕ ವಿವಾಹಗಳನ್ನು ಜಾತಿ/ಮತ ಭೇದವಿಲ್ಲದೆ ನೆರವೇರಿಸುವುದು. ಅಂತರ್ಜಾತೀಯ,
  • ವಿಧವೆಯರ ವಿವಾಹಗಳನ್ನು ಪ್ರೋತ್ಸಾಹಿಸುವುದು, ಬಾಲ್ಯವಿವಾಹ ನಿಷೇಧಿಸುವುದು.
  • ೩೪) ಮಾರುಕಟ್ಟೆಯಲ್ಲಿ ಲಭ್ಯವಿರುವ ಆರೋಗ್ಯಕ್ಕೆ ಹಾನಿಕರವಾದ ಪದಾರ್ಥಗಳ ಕುರಿತು ಜನ
  • ಜಾಗೃತಿ ಮೂಡಿಸುವುದು.
  • ೩೫) ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನ
  • ಮಾಡುವುದು.
  • ೩೬) ಸಾಮಾಜಿಕ ಹಾಗೂ ಕಾನೂನು ವಿಷಯಗಳ ಸೆಮಿನಾರ್, ಸಮ್ಮೇಳನಗಳ ಕಾರ್ಯಾಗಾರಗಳು
  • ಮತ್ತು ಉಪನ್ಯಾಸಗಳನ್ನು ಏರ್ಪಡಿಸುವುದು.
  • ೩೭) ಮೇಲಿನ ಉದ್ದೇಶಗಳನ್ನು ಈಡೇರಿಸಲು ಸಂಘದ ಸದಸ್ಯರು ಸದಸ್ಯರಲ್ಲದವರು,
  • ಸರ್ಕಾರಗಳ, ಇತರೆ ಸಂಸ್ಥೆಗಳಿಂದ ಮತ್ತು ಲೋಕೋಪಕಾರಿಗಳಿಂದ ಚಂದಾದಾರಿಕೆ,
  • ಕೊಡುಗೆಗಳು, ದೇಣಿಗೆ ಮತ್ತು ಉಡುಗೊರೆಗಳನ್ನು ಸಂಗ್ರಹಿಸುವುದು.
  • ೩೮) ಸಂಘದ ವಿಷಯಗಳ ಮಾಹಿತಿ, ತಂತ್ರಜ್ಞಾನವುಳ್ಳ ನಿಯತಕಾಲಿಕೆಗಳನ್ನು ಪ್ರಕಟಿಸುವುದು.