ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಮುಖಪುಟ- ಕರುನಾಡಕಂದ.ಕಾಂ
ನಮ್ಮ ಬಗ್ಗೆ
ರಾಜ್ಯ ಸಮಿತಿ
ಪದಾಧಿಕಾರಿಗಳು
ಸದಸ್ಯರು
ಅಜೀವ ಸದಸ್ಯರು
ಕಾರ್ಯ ಚಟುವಟಿಕೆಗಳು
ಫೋಟೋ ಗ್ಯಾಲರಿ
ಧ್ಯೇಯ ಉದ್ದೇಶಗಳು
ಸುದ್ದಿ ಗ್ಯಾಲರಿ
ಗುರಿ
ಇತರೆ
Hamburger Toggle Menu
೧)ನಮ್ಮ ಸಂಘದಿಂದ ರಕ್ತದಾನ ಶಿಬಿರಗಳನ್ನು ,ಗ್ರಾಮೀಣ ಜನರಿಗೆ ಆರೋಗ್ಯ ಮಾಹಿತಿ
ಶಿಬಿರಗಳನ್ನು ಏರ್ಪಡಿಸುವುದು
೨) ನಾಡಿನ ಹಳ್ಳಿಗಳ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು
ಅನುಷ್ಟಾನಗೊಳಿಸುವುದು.
೩) ಸಂಸ್ಥೆಯ ವತಿಯಿಂದ ಕನ್ನಡ ಮಾಧ್ಯಮ ಹಾಗೂ ಇಂಗ್ಲೀಷ ಮಾಧ್ಯಮದ, ಬಾಲವಾಡಿ,
ನರ್ಸರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜುಗಳನ್ನು
ಹಾಗೂ ಶಿಕ್ಷಕರ ತರಬೇತಿ ಕಾಲೇಜು ಮತ್ತು ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸುವುದು,
ನಡೆಸುವುದು ಶಿಕ್ಷಣ ಪ್ರಸಾರ ಕಾರ್ಯಕ್ರಮ ಹಮ್ಮಿಕೊಳ್ಳುವುದು.
೪) ಮಹಿಳೆಯರ ಉನ್ನತಿಗಾಗಿ ಅಗತ್ಯವಾದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಪ್ರತ್ಯೇಕವಾಗಿ
ಸ್ಥಾಪಿಸುವುದು, ನಡೆಸುವುದು.
೫) ನಾಡಿನ ಬಡ ಜನತೆಗಾಗಿ ಉಚಿತ ಆಸ್ಪತ್ರೆ, ಆರೋಗ್ಯ ಸಲಹಾ ಕೇಂದ್ರ, ಕುಟುಂಬ ಸಲಹಾ
ಕೇಂದ್ರಗಳನ್ನು ಸ್ಥಾಪಿಸುವುದು.
೬) ದೈಹಿಕ ಅಂಗವಿಕಲರ ಪುನಶ್ಚೇತನ ಹಾಗೂ ಅಬಲೆಯರ ದೇವದಾಸಿಯರ ಸಮಸ್ಯೆಗಳಿಗೆ
ಸ್ಪಂದಿಸಿ ಸಮಾಜದ ಜನವಾಹಿನಿಯಲ್ಲಿ ಸಾಮಾನ್ಯ ಜನರಂತೆ ಬದುಕುವ ವ್ಯವಸ್ಥೆಯನ್ನು
ಕಲ್ಪಿಸಿಕೊಡುವುದು. ಅವರಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು.
೭) ಅನಾಥರು, ಬಡಮಕ್ಕಳು, ಬೀದಿ ಮಕ್ಕಳು, ವಯೋವೃದ್ಧರು ಮತ್ತು ನಿರ್ಗತಿಕರ ಪುನಶ್ಚೇತನ
ಹಾಗೂ ಪುನರ್ವಸತಿ ಕಲ್ಪಿಸಿಕೊಡುವುದು, ವೃದ್ಧಾಶ್ರಮಗಳನ್ನು ಕಾರ್ಯಗತಗೊಳಿಸುವುದು.
೮) ಬಡತನ, ಅನಕ್ಷರತೆ, ಮೂಢನಂಬಿಕೆ, ನಿರುದ್ಯೋಗ ಇನ್ನೂ ಮುಂತಾದ ಸಮಸ್ಯೆಗಳಿಗೆ
ಪರಿಹಾರ ಮಾರ್ಗವನ್ನು ಕಂಡುಕೊಳ್ಳುವಂತಹ ವಾತಾವರಣವನ್ನು ಸಮಾಜದಲ್ಲಿ ಸೃಷ್ಟಿಸಿ ಈ
ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧ ಪಟ್ಟಂತೆ ಕಾರ್ಯಯೋಜನೆಗಳನ್ನು ಕೈಗೊಳ್ಳುವುದು.
೯) ನಾಡಿನ ಮಹಿಳೆಯರ ಕಲ್ಯಾಣ ಅಭಿವೃದ್ಧಿಗಾಗಿ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳನ್ನು
ಹಾಗೂ ಸಮಾಜ ಕಲ್ಯಾಣ ಸಲಹಾ ಮಂಡಳಿ ಯೋಜನೆಗಳನ್ನು ಯಶಸ್ವಿಯಾಗಿ
ಕಾರ್ಯರೂಪಕ್ಕೆ ತರವುದು.
೧೦) ಅಂತರ್ಜಲ ಸಂರಕ್ಷಣೆ ಮತ್ತು ಅಂತರ್ಜಲವೃದ್ಧಿಗಾಗಿ ಜಲಾನಯನ ಅಭಿವೃದ್ಧಿ
ಯೋಜನೆಗಳನ್ನು ವ್ಯವಸ್ಥಿತವಾಗಿ ಕಾರ್ಯಗೊಳಿಸುವುದು.
೧೧) ನೈರ್ಮಲ್ಯಕರಣ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಕೊಳಚೆ ನಿರ್ಮೂಲನೆ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವುದು.
೧೨) ಕೃಷಿ ತೋಟಗಾರಿಕೆಯನ್ನು ಅಭಿವೃದ್ಧಿಪಡಿಸುವಂತಹ ಯೋಜನೆಗಳನ್ನು ತರಬೇತಿಗಳ ಮುಖಾಂತರ ಯಶಸ್ವಿಯಾಗಿ ಜಾರಿಗೆ ತರುವುದು.
೧೩) ಜಾನುವಾರು, ಘೋಷಣೆ, ಜೇನುಸಾಕಾಣಿಕೆ, ಕುರಿ, ಕೋಳಿ ಸಾಕಾಣಿಕೆ, ರೇಷ್ಮೆಯಂತ ವಿವಿಧ
ರೀತಿಯ ಯೋಜನೆಗಳಿಗೆ ತರಬೇತಿ ನೀಡುವುದರ ಮೂಲಕ ಸ್ವಯಂ ಉದ್ಯೋಗವಕಾಶಗಳನ್ನು ಸೃಷ್ಟಿಸುವುದು.
೧೪) ಅರಣ್ಯೀಕರಣ, ಪರಿಸರ ಸಂರಕ್ಷಣೆಯಂತ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡು
ಅವುಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸುವುದು.
೧೫) ಗುಡಿ ಕೈಗಾರಿಕೆಗಳು, ಹಾಗೂ ಖಾದಿ ಗ್ರಾಮೋದ್ಯೋಗ ಯೋಜನೆಗಳನ್ನು ಸಮುದಾಯ
ಸಂಘಟನೆಯಿಂದ ಅಭಿವೃದ್ಧಿಪಡಿಸುವುದು
೧೬) ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ಸ್ವದೇಶಿ ವಸ್ತುಗಳನ್ನು ಬಳಸುವುದರಲ್ಲಿ ತಿಳುವಳಿಕೆ
ನೀಡುವುದರ ಮೂಲಕ ಸ್ವದೇಶಿ ಜಾಗೃತಿ ಮೂಡಿಸುವುದು.
೧೭) ವಿಜ್ಞಾನ ಹಾಗೂ ತಾಂತ್ರಿಕತೆಯ ಅಭಿವೃದ್ಧಿಗಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು.
೧೮) ಸ್ವ-ಸಹಾಯ ಗುಂಪುಗಳ ರಚನೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವಂತಹ ಸ್ವಯಂ ಉದ್ಯೋಗ ತರಬೇತಿಯನ್ನು ನೀಡುವುದು.
೧೯) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ
ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಹಾಕಿಕೊಂಡು ಅವರಿಗೆ ತರಬೇತಿ ನೀಡುವುದರ
ಮುಖಾಂತರ ಎಲ್ಲಾ ಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸುವುದು.
೨೦) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳನ್ನು ವ್ಯವಸ್ಥಿತವಾಗಿ
ಕಾರ್ಯಗತಗೊಳಿಸುವುದು.
೨೧) ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ಸಾರ್ವಜನಿಕ ವಲಯಗಳಿಂದ ವಂತಿಗೆ ಪಡೆದುಕೊಂಡು ಸಮಂಜಸವಾಗಿ ಬೇರೆ ಬೇರೆ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಜನಪರ
ಯೋಜನೆಗಳನ್ನು ಸಂಸ್ಥೆಯ ಮುಖಾಂತರ ಅನುಷ್ಠಾನಗೊಳಿಸುವುದು.
೨೨) ವಿದ್ಯಾರ್ಥಿ ಸಮೂಹಕ್ಕೆ ಹಾಗೂ ಯುವ ಸಮೂಹಕ್ಕೆ ನಾಯಕತ್ವ ಬೆಳವಣಿಗೆ ಮತ್ತು ನೈತಿಕ
ಮಟ್ಟವನ್ನು ಬೆಳೆಸುವಂತಹ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡು ಸಮಾಜದಲ್ಲಿ ಯುವ
ಸಮುದಾಯವನ್ನು ಸಂಘಟಿತಗೊಳಿಸುವುದು.
೨೩) ಸಾಮಾಜಿಕ ಸಾಮಾರಸ್ಯಕ್ಕಾಗಿ ಕೋಮು ಸೌಹಾರ್ದತೆ ಹಾಗೂ ಸಮಾಜದಲ್ಲಿ ಕೋಮು
ಸೌಹಾರ್ದತೆಯ ಪರಂಪರೆಯನ್ನು ಬೆಳೆಸುವುದು
೨೪) ಪ್ರಕೃತಿ ನಿರ್ಮಿತ ವಸ್ತುಗಳ ಸದ್ಬಳಕೆ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ
ಮಾಡುವುದು.
೨೫) ರಾಷ್ಟ್ರೀಯ ಐಕ್ಯತೆ – ಸಮಗ್ರತೆ ಕಾಪಾಡುವಲ್ಲಿ ಪ್ರಜೆಗಳಲ್ಲಿ ಕರ್ತವ್ಯದ ಅರಿವು ಮೂಡಿಸುವುದು.
೨೬) ಸೌರಶಕ್ತಿ ಬಳಕೆಯ ಅನಿವಾರ್ಯತೆಯ ಅರಿವನ್ನು ಜನರಲ್ಲಿ ಜಾಗೃತಿಗೊಳಿಸುವುದು.
೨೭) ಅಸಂಪ್ರದಾಯಿಕ ಶಕ್ತಿಗಳ ಅಭಿವೃದ್ಧಿ ಮತ್ತು ಉಪಯೋಗದ ಬಗ್ಗೆ ಜನರಿಗೆ ಮನವರಿಕೆ
ಮಾಡಿಕೊಡುವುದು.
೨೮) ಅಪಘಾತ ತಪ್ಪಿಸಬಹುದಾದ ಕ್ರಮಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು.
೨೯) ರಾಜ್ಯ ಮತ್ತು ರಾಷ್ಟ್ರೀಯ ಸರಕಾರಿ ಕಾರ್ಯಕ್ರಮಗಳಲ್ಲಿ ಜನತೆಯ
ಸಹಭಾಗಿತನಗೊಳಿಸುವುದು.
೩೦) ಸಮಾಜದ ಜನ ಸಮೂಹದಲ್ಲಿ ಸಹಕಾರಿ ಮನೋಭಾವನೆಯನ್ನು ಬೆಳೆಸುವುದು.
೩೧) ಸಾಂಸ್ಕೃತಿಕ ಹಾಗೂ ಕ್ರೀಡಾ ಪರಂಪರೆಯನ್ನು ಶ್ರೀಮಂತಗೊಳಿಸುವುದು.
೩೨) ಸಂಸ್ಥೆಯ ಹಣವನ್ನು ಸಂಸ್ಥೆಯ ಅಭಿವೃದ್ಧಿಗಾಗಿ ವಿನಿಯೋಗಿಸುವುದು. ಸದಸ್ಯರಿಗಾರಿಗೂ
ಹಂಚತಕ್ಕದ್ದಲ್ಲ.
೩೩) ಸಾಮೂಹಿಕ ವಿವಾಹಗಳನ್ನು ಜಾತಿ/ಮತ ಭೇದವಿಲ್ಲದೆ ನೆರವೇರಿಸುವುದು. ಅಂತರ್ಜಾತೀಯ,
ವಿಧವೆಯರ ವಿವಾಹಗಳನ್ನು ಪ್ರೋತ್ಸಾಹಿಸುವುದು, ಬಾಲ್ಯವಿವಾಹ ನಿಷೇಧಿಸುವುದು.
೩೪) ಮಾರುಕಟ್ಟೆಯಲ್ಲಿ ಲಭ್ಯವಿರುವ ಆರೋಗ್ಯಕ್ಕೆ ಹಾನಿಕರವಾದ ಪದಾರ್ಥಗಳ ಕುರಿತು ಜನ
ಜಾಗೃತಿ ಮೂಡಿಸುವುದು.
೩೫) ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನ
ಮಾಡುವುದು.
೩೬) ಸಾಮಾಜಿಕ ಹಾಗೂ ಕಾನೂನು ವಿಷಯಗಳ ಸೆಮಿನಾರ್, ಸಮ್ಮೇಳನಗಳ ಕಾರ್ಯಾಗಾರಗಳು
ಮತ್ತು ಉಪನ್ಯಾಸಗಳನ್ನು ಏರ್ಪಡಿಸುವುದು.
೩೭) ಮೇಲಿನ ಉದ್ದೇಶಗಳನ್ನು ಈಡೇರಿಸಲು ಸಂಘದ ಸದಸ್ಯರು ಸದಸ್ಯರಲ್ಲದವರು,
ಸರ್ಕಾರಗಳ, ಇತರೆ ಸಂಸ್ಥೆಗಳಿಂದ ಮತ್ತು ಲೋಕೋಪಕಾರಿಗಳಿಂದ ಚಂದಾದಾರಿಕೆ,
ಕೊಡುಗೆಗಳು, ದೇಣಿಗೆ ಮತ್ತು ಉಡುಗೊರೆಗಳನ್ನು ಸಂಗ್ರಹಿಸುವುದು.
೩೮) ಸಂಘದ ವಿಷಯಗಳ ಮಾಹಿತಿ, ತಂತ್ರಜ್ಞಾನವುಳ್ಳ ನಿಯತಕಾಲಿಕೆಗಳನ್ನು ಪ್ರಕಟಿಸುವುದು.