ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ದೇಶದ ಅಭಿವೃದ್ಧಿಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ

ವಿಶ್ವದ ನಾನಾ ಭಾಗಗಳಲ್ಲಿ ನಡೆದ, ನಡೆಯುತ್ತಿರುವ ಘಟನೆಗಳ ಮಾಹಿತಿ ಮತ್ತು ಮನರಂಜನೆಯನ್ನು ಬಿತ್ತರಿಸುವ ಮತ್ತು ಪ್ರಸಾರ ಮಾಡಲು ಸಹಾಯ ಮಾಡುವ ಎಲ್ಲಾ ರೀತಿಯ ವಿವಿಧ ಸಾಧನಗಳೇ ಸಮೂಹ ಮಾಧ್ಯಮ.

ರೇಡಿಯೋ, ಪತ್ರಿಕೆಗಳು , ಕೇಬಲ್, ದೂರದರ್ಶನ ಮತ್ತು ರಂಗಭೂಮಿ ಸೇರಿದಂತೆ ಎಲ್ಲವೂ ಸಮೂಹ ಮಾಧ್ಯಮದ ಅಂಗಗಳಾಗಿವೆ. ಈ ಸಾಧನಗಳು ಸಮಾಜದ ಅಭಿಪ್ರಾಯಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿಕೊಳ್ಳಲು ಮತ್ತು ಸಾರ್ವಜನಿಕರ ಸದಾಶಯ ನೀತಿಗಳು ಜನಸಾಮಾನ್ಯರಿಗೆ ತಲುಪಿಸುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಇಂದಿನ ಸಮೂಹ ಮಾಧ್ಯಮಗಳ ವ್ಯವಸ್ಥೆ ಮೂಲಕ, ನಾವು ಅದರ ಭಾಗವಾಗಿ ಹೋಗಿದ್ದೇವೆ. ಹೀಗಾಗಿ

ಪ್ರಸ್ತುತ ಯುಗವನ್ನು ಮಾಹಿತಿಯ ಯುಗ ಎಂದು ಕರೆಯಲಾಗುತ್ತದೆ. ಮಾಹಿತಿಯನ್ನು ಹರಡಲು ಮತ್ತು ಹಂಚಿಕೊಳ್ಳಲು ಸಮೂಹ ಮಾಧ್ಯಮವು ಬೇಕೇ ಬೇಕು, ಇದನ್ನು ನಾವು ಆಧುನಿಕ ಯುಗದಲ್ಲಿ ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದೇವೆ ಮತ್ತು ಬಳಸಲಾಗುತ್ತದೆ. ಡಿಜಿಟಲ್ ತಂತ್ರಜ್ಞಾನದ ಪ್ರಗತಿಯ ನಂತರ ಸಮೂಹ ಮಾಧ್ಯಮವು ಹೆಚ್ಚು ಪ್ರಬಲವಾಗಿದೆ. ಇದು ವಿವಿಧ ಪ್ರಮುಖ ವಿಚಾರಗಳು, ಸುದ್ದಿಗಳು ಮತ್ತು ಅಭಿಪ್ರಾಯಗಳು ಅತ್ಯಂತ ಪ್ರಭಾವಶಾಲಿ ಮೂಲದ ನೆಲೆಯಾಗಿದೆ. ಇದು ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ತ್ವರಿತವಾಗಿ ಒದಗಿಸುತ್ತಿದೆ.

ಅಂದಹಾಗೆ ಇಂದಿನ ಜಗತ್ತಿನಲ್ಲಿ, ಸಮೂಹ ಮಾಧ್ಯಮವು ಇಂಟರ್ನೆಟ್ , ಸೆಲ್ ಫೋನ್‌ಗಳು, ಎಲೆಕ್ಟ್ರಾನಿಕ್ ಮೇಲ್, ಕಂಪ್ಯೂಟರ್‌ಗಳು, ಪೇಜರ್‌ಗಳು ಮತ್ತು ಉಪಗ್ರಹಗಳನ್ನು ಅಳವಡಿಸಿಕೊಂಡಿದೆ. ಈ ಎಲ್ಲಾ ಹೊಸ ಸೇರ್ಪಡೆಗಳು ಒಂದೇ ಮೂಲದಿಂದ ಬಹಳಷ್ಟು ಜನರಿಗೆ ಮಾಹಿತಿಯನ್ನು ರವಾನಿಸುವ ಕಾರ್ಯ ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಹಾಗಾಗಿ ಸಮೂಹ ಮಾಧ್ಯಮಗಳ ಬಗ್ಗೆ ಮಾತನಾಡುವಾಗ ರೇಡಿಯೋ, ದೂರದರ್ಶನ, ಪತ್ರಿಕಾ ಮತ್ತು ಸಿನಿಮಾ ಜನರ ಗಮನ ಸೆಳೆಯುವಂತಹದು ನಿಜ. ಇದು ಜನಸಾಮಾನ್ಯರ ಅಚ್ಚುಮೆಚ್ಚಿನ ತಾಣವಾಗಿದೆ.ಇದರ ಸುತ್ತ ಜನರು ಹೆಚ್ಚಾಗಿ ಗಿರಕಿ ಹೊಡೆದು ಸುತ್ತುತ್ತಿರುವುದು ಕಾಣುತ್ತೇವೆ.

ಇನ್ನು ಇತರ ಸಮೂಹ ಮಾಧ್ಯಮ ಸಾಧನಗಳಿಗೆ ಹೋಲಿಸಿದರೆ, ಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿಯು ವಿಭಿನ್ನವಾಗಿದೆ. ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಇತ್ತೀಚಿನ ಘಟನೆಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ. ಕೆಲವು ನಿಯತಕಾಲಿಕೆಗಳು ಮತ್ತು ವೃತ್ತಪತ್ರಿಕೆಗಳು ಸುದ್ದಿ, ಘಟನೆಗಳು, ಕ್ರೀಡೆ, ಸಾಂಸ್ಕೃತಿಕ ಜೀವನ, ಧಾರ್ಮಿಕ,ಸಾಹಿತಿಕ, ಕೃಷಿ, ಶಿಕ್ಷಣ, ಫ್ಯಾಷನ್ ಮತ್ತು ಯುವಜನರಿಗೆ ಮನರಂಜನೆಯ ವರದಿಗಳನ್ನು ಬಿತ್ತರಿಸುತ್ತದೆ.

ಈ ಮಾಧ್ಯಮಗಳ ಜೊತೆ ಜೊತೆಯಲ್ಲಿ ಕರಪತ್ರಗಳು, ಪುಸ್ತಕಗಳು, ನಿಯತಕಾಲಿಕೆಗಳು, ಪೋಸ್ಟರ್‌ಗಳು, ಜಾಹೀರಾತು ಫಲಕಗಳು ಸಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇವುಗಳ ಬಳಕೆ ಗ್ರಾಹಕರು ಅವರ ಅವಶ್ಯಕತೆಯ ಅನುಗುಣವಾಗಿ ಬಳಸಿಕೊಳ್ಳುತ್ತಾರೆ.ಇದಲ್ಲದೆ, ಈ ಉಪಕರಣಗಳ ವ್ಯಾಪ್ತಿಯು ದೇಶದಾದ್ಯಂತ ವಾಸಿಸುವ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತದೆ.

ಟಿವಿ ನೋಡುವ ಅಥವಾ ರೇಡಿಯೊವನ್ನು ಕೇಳುವ ಮೂಲಕ, ನಮ್ಮ ಇತಿಹಾಸ, ಸಾಹಿತ್ಯ ಮತ್ತು ಸಾಂಸ್ಕೃತಿಕ ಜ್ಞಾನವನ್ನು ತಿಳಿದುಕೊಳ್ಳಬಹುದಾಗಿದೆ.ಅದೇ ರೀತಿ ಸಮೂಹ ಮಾಧ್ಯಮವು ಇಂದಿನ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆದು ಪ್ರಸಿದ್ಧಿ ಪಡೆಯಲು ಸೆಲ್ ಫೋನ್ ಪ್ರಮುಖ ಸಾಧನ ಅಂದರೆ ತಪ್ಪಾಗಲಾರದು. ಈ ಸೆಲ್ ಫೋನ್‌ಗಳು, ಇಂಟರ್ನೆಟ್, ಕಂಪ್ಯೂಟರ್‌ಗಳು, ಪೇಜರ್‌ಗಳು, ಇಮೇಲ್‌ಗಳು ಮತ್ತು ಉಪಗ್ರಹಗಳನ್ನು ಒಳಗೊಂಡಿದೆ. ಈ ಮಾಧ್ಯಮಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಬಹು ಬೇಗ ಮಾಹಿತಿಯನ್ನು ರವಾನೆ ಮಾಡಲು ಸಹಕರಿಸುತ್ತದೆ.ಇದು ಜನಸಾಮಾನ್ಯರ ಅಚ್ಚುಮೆಚ್ಚಿನ ಗೆಳೆಯ ಎನ್ನುವಂತೆ ಭಾಸವಾಗುತ್ತಿದೆ, ಎನ್ನುವ ಮಟ್ಟಿಗೆ ಈ ಸಾಧನ ಕೆಲಸ ಮಾಡುತ್ತಿದೆ.

ಸಮೂಹ ಮಾಧ್ಯಮವು ವಿವಿಧ ಘಟನೆಗಳು ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಮಾಹಿತಿ ಮತ್ತು ಅಭಿಪ್ರಾಯಗಳನ್ನು ಜನರಿಗೆ ಒದಗಿಸುತ್ತಿವೆ. ಸಮೂಹ ಮಾಧ್ಯಮದ ಬಹು ಮಾಧ್ಯಮಗಳ ಮೂಲಕ ನಾವು ಪಡೆಯುವ ಮಾಹಿತಿಯು ವ್ಯಕ್ತಿನಿಷ್ಠ, ಮಾಧ್ಯಮಿಕ ಮತ್ತು ಪ್ರಾಥಮಿಕ ಮಾಹಿತಿ ಎಂದೆಷ್ಟೇ ಹೇಳಬಹುದು.

ಪ್ರೇಕ್ಷಕರಾಗಿ, ಸಮೂಹ ಮಾಧ್ಯಮದ ಮೂಲಕ ಪ್ರಪಂಚದಾದ್ಯಂತ ನಡೆಯುತ್ತಿರುವ ಘಟನೆಗಳ ಕುರಿತು ನಾವು ಮಾಹಿತಿಗಳ ಸುದ್ದಿಗಳನ್ನು ಪಡೆಯುತ್ತೇವೆ. ಟಿವಿ, ರೇಡಿಯೋದಲ್ಲಿ ಪ್ರಸಾರ ಆಗುವ, ಪತ್ರಿಕೆಗಳು ಅಥವಾ ನಿಯತಕಾಲಿಕೆಗಳಲ್ಲಿ ಪ್ರಕಟಣೆ ಮಾಡುವ ಮಾಧ್ಯಮಗಳ ಮಾಹಿತಿಯನ್ನು ನೋಡುತ್ತೇವೆ. ಇದಲ್ಲದೆ, ಜಾಹೀರಾತುಗಳು ಮುಖ್ಯವಾಗಿ ಮಾಹಿತಿ ಉದ್ದೇಶಗಳಿಗಾಗಿ, ಸರ್ಕಾರವು ತನ್ನ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ವಿವರಿಸಲು, ತಿಳಿಸಲು ಮತ್ತು ಬೆಂಬಲಿಸಲು ಸಮೂಹ ಮಾಧ್ಯಮದ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಈ ಮೂಲಕ ಮಾಧ್ಯಮಗಳು ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ.ಇದಲ್ಲದೇ ಪತ್ರಿಕೆಯು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಎಲ್ಲಾ ವಸ್ತುಗಳ ಪ್ರಸಾರದ ಮಹತ್ವಪೂರ್ಣ ಸಾಧನವಾಗಿವೆ. ಹೀಗೆ ಹತ್ತು ಹಲವು ವಿನೂತನ ರೀತಿಯಲ್ಲಿ ಮಾಧ್ಯಮಗಳು ಸರ್ಕಾರದ ಸೇವೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೀವೆ.ಈ ಮೂಲಕ ದೇಶದ ಅಭಿವೃದ್ಧಿಯಲ್ಲಿ ಅವುಗಳದೇ ಆದ ವಿಶಿಷ್ಟ ಪಾತ್ರದ ಕೊಡುಗೆ ಮತ್ತು ಸೇವೆಯನ್ನು ನೀಡುತ್ತೀವೆ.

ಹಾಗಾಗಿ ಸಮೂಹ ಮಾಧ್ಯಮಗಳ ಮೂಲಕ ಎಲ್ಲಾ ಘಟನೆಗಳ ಆಗುಹೋಗುಗಳು ಮನೆಯಲ್ಲಿ ಕುಳಿತು ಜನ ಕಲಿಯಬಹುದು ಅಥವಾ ಅರಿಯಬಹುದು.ಹಾಗೆಯೇ ಮಾಧ್ಯಮಗಳು ಸರ್ಕಾರಕ್ಕೆ ತನ್ನ ಅಭಿಪ್ರಾಯಗಳನ್ನು ಕಡಿಮೆ ಸಮಯದಲ್ಲಿ ತಿಳಿಸಿ. ಪ್ರಸಾರ, ಜಾಹೀರಾತು, ಪ್ರಚಾರ ಮಾಡಲು ಮತ್ತು ಪ್ರಕಟಿಸಲು ಸಹಾಯ ಮಾಡುತ್ತವೆ.ಅಲ್ಲದೇ ಇಪ್ಪತ್ನಾಲ್ಕು ಗಂಟೆಗಳಲ್ಲಿ ಸಂಭವಿಸಿದ ಎಲ್ಲಾ ಸುದ್ದಿ ಮತ್ತು ವೀಕ್ಷಣೆಗಳೊಂದಿಗೆ ಇದು ಬೆಳಗಿನ ಉಪಾಹಾರದ ಸಮಯದಲ್ಲಿ ನಮ್ಮ ಮನೆ ಬಾಗಿಲಿಗೆ ಬರುತ್ತದೆ. ಕಾರಣ ಇದು ಜ್ಞಾನದ ಭಂಡಾರ, ಪ್ರಸ್ತುತ ಇತಿಹಾಸ ಮತ್ತು ಅವಸರದ ಸಾಹಿತ್ಯವಾಗಿದೆ ಎಂದೆಷ್ಟೇ ನಿಖರವಾಗಿ ಹೇಳಬಹುದು. ಪತ್ರಿಕೆಯ ಅಧ್ಯಯನದಿಂದ ದೇಶ-ವಿದೇಶಗಳ ಸುದ್ದಿ ಮತ್ತು ನೋಟಗಳನ್ನು ನಾವು ಅತ್ಯಂತ ಅಗ್ಗದ ವೆಚ್ಚದಲ್ಲಿ ತಿಳಿದುಕೊಳ್ಳಬಹುದಾಗಿದೆ.ಅದಕ್ಕಾಗಿ ಸಮೂಹ ಮಾಧ್ಯಮವು ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ ಎಂಬುದಂತೂ ಸತ್ಯ. ಈ ತನ್ಮೂಲಕ ಮಾಧ್ಯಮಗಳ ನಿಸ್ವಾರ್ಥ ಸೇವಾ ಕೈಂಕರ್ಯಗಳ ಪಾತ್ರ ದೊಡ್ಡದಾಗಿದೆ.

ಈ ನಿಟ್ಟಿನಲ್ಲಿ ಕುಲಂಕುಶವಾಗಿ ಯೋಚಿಸುವುದಾದರೆ, ಸಾರ್ವಜನಿಕ ಜೀವನದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಬಹಳ ಮುಖ್ಯ ಮತ್ತು ಅಷ್ಟೇ ಅಗತ್ಯತೆ ಇಂದಿನ ದಿನಗಳಲ್ಲಿ ಇದೆ.ಇವುಗಳು ಇಲ್ಲದಿದ್ದರೆ ಬದುಕು ಕಷ್ಟ ಎಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಿದೆ.ಮಾಧ್ಯಮಗಳು ಇಲ್ಲದೆ ಹೋದರೆ ನಮ್ಮಗಳ ಜೀವನ ಶೂನ್ಯ ಎನ್ನುವ ಹಂತದಲ್ಲಿ (ಉದಾಹರಣೆಗೆ: ಸೆಲ್ ಫೋನ್ – ಸಧ್ಯ ನಾವು ಇವುಗಳ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದೇವೆ) ಬಾಳುತ್ತಿದ್ದೇವೆ. ಇದು ಎಲ್ಲೋ ಒಂದು ಕಡೆ ನಮ್ಮ ಅತಿರೇಕದ ಬಳಕೆಯಿಂದ ನಮ್ಮ ಜೀವನದ ಭಾವನೆಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಇರುತ್ತದೆ. ಪರಿಣಾಮ ಅನಾಹುತಕ್ಕೆ ಕಾರಣವಾಗಬಹುದು. ಆದಕಾರಣ ಬಂಧುಗಳೇ, ಎಚ್ಚರಿಕೆಯಿಂದ ನಮಗೆ ಅತ್ಯವಶ್ಯಕತೆ ಅನಿಸಿದಾಗ ಮಾತ್ರ ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳಬೇಕು. ಸುಖಾ ಸುಮ್ಮನೆ ಸಮಯ ಕಳೆಯಲು ಮಾಧ್ಯಮಗಳು ಖಂಡಿತವಾಗಿ ಬಳಸಿಕೊಳ್ಳಬೇಡಿ, ಇದು ಸರಿಯಾದ ಕ್ರಮವಲ್ಲ. ಮಾಧ್ಯಮಗಳಿಂದ ನಿಮಗೆ ಹಾಗೂ ಸಮಾಜಕ್ಕೆ ಒಳ್ಳೆಯದಾಗಲಿದ್ದರೆ ಮಾತ್ರ ಖಂಡಿತವಾಗಿ ಬಳಸಿಕೊಳ್ಳಬೇಕು.ಇಲ್ಲದೇ ಇದ್ದರೆ ಖಂಡಿತವಾಗಿಯೂ ಉಪಯೋಗಿಸಬೇಡಿ. ಅಲ್ಲದೇ ಎಂದೆಂದಿಗೂ ಮಾಧ್ಯಮಗಳ ಮುಖಾಂತರ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಇದು ದೇಶದ ಕಾನೂನು ಉಲ್ಲಂಘಿಸಿದಂತೆ ಎನ್ನುವುದು ಮರೆಯಬೇಡಿ.

ಒಟ್ಟಾರೆಯಾಗಿ ಹೇಳುವುದಾದರೆ, ಜನಸಾಮಾನ್ಯರಲ್ಲಿ ಬದಲಾವಣೆಯನ್ನು ತರಬಲ್ಲ ಮಾಧ್ಯಮವಾಗಿದೆ.ಇದು ಪರಿಣಾಮಕಾರಿ ಸಾಧನವಾಗಿದ್ದರೂ, ನಾವು ಅದರ ಬಳಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ತನ್ಮೂಲಕ ದೇಶದ ಪ್ರಗತಿಯಲ್ಲಿ ಮಾಧ್ಯಮಗಳು ಯಶಸ್ಸಿಗಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ.ಹೀಗಾಗಿ ಪ್ರತಿಯೊಬ್ಬರೂ ಇದನ್ನು ಸದುಪಯೋಗ ಪಡಿಸಿಕೊಂಡು. ಸರ್ವರ ಹಿತಕ್ಕಾಗಿ, ಒಳ್ಳೆಯ ವಿಚಾರಗಳೊಂದಿಗೆ ಕಾಯಕ ಮಾಡಬೇಕು.ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು.

ಕೊನೆಯ ಮಾತು : ಜಗತ್ತಿನ ಎಲ್ಲಾ ಸುಖ ಸಾಧನಗಳು ನಮ್ಮ ಬಳಿಯಲ್ಲಿ ಇದ್ದರು. ನೆಮ್ಮದಿ ಇಲ್ಲವಾಗಬಹುದು. ಯಾವುದೇ ಬಾಹ್ಯ ವಸ್ತುವಾಗಲಿ, ವ್ಯಕ್ತಿಯಾಗಲಿ.ನಮಗೆ ನೆಮ್ಮದಿಯ ಅನುಭವವನ್ನು ನೀಡಲು ಸಾಧ್ಯವಿಲ್ಲ. ನೆಮ್ಮದಿಯು ನಮ್ಮ ಮಾನಸಿಕ ಅನುಭವ ಮತ್ತು ಅನುಭಾವದ ಸ್ಥಿತಿಯ ಮೇಲೆ ದೊರೆಯುತ್ತದೆ. ಅದನ್ನು ನಮ್ಮೊಳಗೆ ನಾವೇ ಕಂಡುಕೊಳ್ಳಬೇಕು.ಆಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಬಹುದು. ಮತ್ತು ಆ ಸ್ಥಿತಿಯಲ್ಲಿ ನೆಲೆ ನಿಂತಾಗ, ನಿಲ್ಲಬೇಕು ಅಂದಾಗ ಮಾತ್ರ ಸುಖದ ನಿಜವಾದ ಅಲೌಕಿಕ ಅರ್ಥ ಹಾಗೂ ಅನುಭವವು ನಮ್ಮದಾಗುತ್ತದೆ.

-ಲೇಖಕರು: ಸಂಗಮೇಶ ಎನ್ ಜವಾದಿ.
ಅಂಕಣಕಾರರು
ಬೀದರ ಜಿಲ್ಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ