ಗದಗ ಸಮೀಪದ ತಿಮ್ಮಾಪೂರ ಗ್ರಾಮದ ಹಿಂದಿನ ಕೆರೆ ಅಭಿವೃದ್ಧಿಪಡಿಸಿ ಹೂಳು ಎತ್ತುವ ಕಾಮಗಾರಿಗೆ ಸುಮಾರು 11 ಲಕ್ಷ ರೂಪಾಯಿಗಳು ಮತ್ತು ಗುಂಡಪ್ಪ ಗುಂಡಪ್ಪನವರು ಹೊಲದಿಂದ ಕುಡಿಯುವ ನೀರಿನ ಹಿಂದಿನ ಕೆರೆಗೆ ಬರುವ ನೀರಿನ ಕಾಲುವೆ ಹೊಳು ಎತ್ತುವು ಕಾಮಗಾರಿಗೆ 11 ಲಕ್ಷ ರೂಪಾಯಿಗಳು ಒಟ್ಟು 22 ಲಕ್ಷ ರೂಪಾಯಿಗಳು ಕಾಮಗಾರಿಯನ್ನು ಪ್ರಾರಂಭಿಸಿ ಈ ಎರಡು ಕಾಮಗಾರಿಯಲ್ಲಿ 7 ದಿನಗಳವರೆಗೆ ಕೆಲಸವಾಗಿದ್ದು ಅದರಲ್ಲಿ ನೂರಾರು ಕೂಲಿ ಕಾರ್ಮಿಕರಿಗೆ ಕೇವಲ 2 ರಿಂದ 3 ದಿನಗಳ ಕೂಲಿ ಹಣ ಬಂದಿದ್ದು ಇನ್ನೂ ಉಳಿದ 4 ದಿನದ ಲಕ್ಷಾಂತರ ರೂಪಾಯಿ ಕೂಲಿಯ ಹಣ ಕಾರ್ಮಿಕರಿಗೆ ಬಂದಿಲ್ಲ ಆದರೆ ಕೆಲಸಕ್ಕೆ ಹೋಗದೆ ಇರುವವರ ಹೆಸರಿನಲ್ಲಿ 7 ದಿನಗಳ ಕೂಲಿ ಹಣ ಪಾವತಿಸಿ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದಾರೆ
ಹೀಗಾದರೆ ಕೂಲಿ ಮಾಡಿ ಬದುಕುವವರ ಪಾಡು ಏನು ಈ ಎರಡೂ ಕಾಮಗಾರಿಯ 22 ಲಕ್ಷ ರೂಪಾಯಿ ಹಣ ಏನಾಯಿತು ಎಂದು ಕೂಲಿ ಕಾರ್ಮಿಕರು ಗ್ರಾಮ ಪಂಚಾಯತಿ ಮುಂದೆ ಗಾಂಧೀಜಿ ಭಾವಚಿತ್ರ ಇಟ್ಟು ಪ್ರತಿಭಟನೆ ಮಾಡಿ ಹಿರಿಯ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಕೂಲಿ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು ಪಿಡಿಒ,ಇಓ ಅವರನ್ನು ಎರಡು ಘಂಟೆಗಳ ಕಾಲ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ನಂತರ ಒಂದು ತಿಂಗಳ ನಂತರ ಈ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಕೂಲಿ ಹಣ ಪಾವತಿಸುವ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ,ಗ್ರಾಮ ಪಂಚಾಯಿತಿ ಸದಸ್ಯರಾದ ಹುಚ್ಚೀರಪ್ಪ ಜೋಗಿನ,ಮಹಾಂತೇಶ ಹಂಚಿನಾಳ, ಬಸವರಾಜ ಯಲಬುರ್ಗಿ,ಬಸವರಾಜ ದೇವರವರ, ರವಿ ಬಿಕ್ಕನಹಳ್ಳಿ, ಅಶೋಕ ದಾಸಣ್ಣವರ ಹಾಗೂ ನೂರಾರು ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.