ಶಹಾಪುರ ನಗರದಲ್ಲಿ ನಡೆದ ಸಿಪಿಎಸ್ ಶಾಲಾ ಆವರಣದಲ್ಲಿ ಸಮತಾ ಸಾಮಾಜಿಕ ಸಾಂಸ್ಕೃತಿಕ ಶಿಕ್ಷಣ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಜಾನಪದ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶರಣಬಸಪ್ಪಗೌಡ ದರ್ಶನಪುರ ಮಾತನಾಡಿದರು.
ಗೀಗಿ ಪದ ಹಂತಿಪದ ಜಾನಪದ ಮೋಹರಂ ಪದ ಹಾಡು ಹಾಡುವವರು ಭಾರತದಲ್ಲಿ ವಿಶಿಷ್ಟ ಕಲಾವಿದರು ಗ್ರಾಮೀಣ ಭಾಗದಲ್ಲಿ ಇದ್ದಾರೆ. ಹಲವಾರು ಸಂಘ ಸಂಸ್ಥೆಗಳು ಮತ್ತು ಇಲಾಖೆಯ ಅಧಿಕಾರಿಗಳು ಅವರನ್ನು ಗುರುತಿಸಿ ಮುಖ್ಯ ವಾಹಿನಿಗೆ ಕರೆ ತರಬೇಕು ಎಂದರು.
ನಂತರ ದಲಿತ ಯುವ ಮುಖಂಡ ಸಮತಾ ಸಾಮಾಜಿಕ ಸಾಂಸ್ಕೃತಿಕ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಹಾಗೂ ನಿಶಾಂತ್ ಮ್ಯಾನ್ ಪವರ್ ಏಜೇನ್ಸಿ ನಿರ್ದೇಶಕರಾದರು ಶರಣು ದೊರನಹಳ್ಳಿ ಮಾತನಾಡಿ ಕಲಾವಿದರು ಬದುಕಿಗೆ ಸಂಘ ಸಂಸ್ಥೆಗಳು, ಪ್ರಗತಿಪರ ಚಿಂತಕರು ಸಹಕಾರಿಯಾಗಿ ಅವರಿಗೆ ಮುನ್ನೆಲೆಗೆ ಬರುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಮುಖಂಡರಾದ ವಿಶ್ವನಾಥ್ ರೆಡ್ಡಿ ದರ್ಶನಾಪುರ ತಾಲೂಕು ದಂಡಾಧಿಕಾರಿ ಗಳು ಮಧುರಾಜ್ ಕೂಡಲಗಿ ಅರಣ್ಯ ಇಲಾಖೆಯ ಅಧಿಕಾರಿ ಜಯಶ್ರೀ ಬಸವರಾಜ ಸಜ್ಜನ್ ಹಾಗೂ ವಿಶ್ವನಾಟೇಕಾರ ಕಾರ್ಯಕ್ರಮ ನಿರೂಪಿಸಿದರು ಶಿವು ಪೋತೆಯವರು ಸ್ವಾಗತಿಸಿದರು. ಶೇಖರ್ ಬಡಿಗೇರ ವಂದಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.