ವಿಜಯನಗರ:[ಕೊಟ್ಟೂರು ತಾಲೂಕು]ಕನ್ನಡ ಭಾಷೆ ಎನ್ನುವುದು ಅತ್ಯಂತ ಶ್ರೀಮಂತ ಭಾಷೆ ಇದನ್ನು ಬಳಸದೇ ಇದ್ದರೆ ಬೆಳೆಯುವುದಿಲ್ಲ ಒಂದು ವೇಳೆ ಪ್ರಪಂಚದಾದ್ಯಂತ ಪ್ರಚುರ ಪಡಿಸಿದ್ದೇ ಆದರೆ 15 ನೊಬೆಲ್ ಪ್ರಶಸ್ತಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಸವರಾಜ್ ಬೆಣ್ಣೆ ರವರು ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.
ಕೊಟ್ಟೂರು ಪಟ್ಟಣದಲ್ಲಿ ಕೊಟ್ಟೂರೇಶ್ವರ ಮಹಾವಿದ್ಯಾಲಯದ ರಾಜ್ ಭವನದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ವಿಶೇಷ ಚಿಂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮ ಕುರಿತು ಮಾತನಾಡಿ ವಿದ್ಯಾರ್ಥಿಗಳು ಪ್ರತಿ ದಿನ ಕನ್ನಡ ದಿನ ಪತ್ರಿಕೆ ಓದುವುದರಿಂದ ಜೀವನಕ್ಕೆ ದಾರಿ ದೀಪ ಕಂಡುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ
ಇಡೀ ಪ್ರಪಂಚದಲ್ಲಿ ಮಾತನಾಡಿದನ್ನು ಓದಬಹುದು ಓದಿದನ್ನು ಮಾತನಾಡುವ ಭಾಷೆ ಇದ್ದರೆ ಅದು ಕನ್ನಡ ಭಾಷೆ ಮಾತ್ರ ಮತ್ತು ಅತೀ ಹೆಚ್ಚು ಸಂತೋಷವನ್ನುಂಟು ಮಾಡುವ ಭಾಷೆ ಕನ್ನಡ ಭಾಷೆ ಮಾತ್ರ ಕನ್ನಡ ಭಾಷೆಯನ್ನು ಕುರಿತು ಸವಿವಿಸ್ತಾರವಾಗಿ ಪ್ರಸ್ತುತ ಪಡಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೊಟ್ಟೂರೇಶ್ವರ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠರವರು ನಮ್ಮ ಭಾಷೆ ಸುಮಾರು 3 ಸಾವಿರ ವರ್ಷ ಇತಿಹಾಸ ಇರುವ ಭಾಷೆಯಾಗಿದೆ ಆದರೆ ಇಂಗ್ಲಿಷ್ ಭಾಷೆ ಕೆಲ ವರ್ಷಗಳ ಹಿಂದೆ ಹುಟ್ಟಿಕೊಂಡಿರುವ ಭಾಷೆ ಇದನ್ನು ಹೆಚ್ಚು ಬಳಸುವುದರಿಂದ ಗೌರವ ದೊರೆಯುತ್ತದೆ ಎನ್ನುವ ಮನೋಭಾವನೆ ಹೊಂದಿದ್ದಾರೆ ಅಷ್ಟೇ ನಮ್ಮ ಭಾಷೆ,ನುಡಿ,ಇತಿಹಾಸ ತಿಳಿದುಕೊಂಡವರು ಇದನ್ನು ಹೆಚ್ಚು ಗೌರವದಿಂದ ಕಾಣುತ್ತಾರೆ ಇದರಿಂದಾಗಿ ಕನ್ನಡ ನಾಡು ನುಡಿಯ ಬಗ್ಗೆ ಗೌರವ ಹೊಂದಿರಬೇಕು ಮತ್ತು ನಮ್ಮ ಭಾಷೆಗೆ ಧಕ್ಕೆ ಬಂದರೆ ಹೋರಾಟಕ್ಕೆ ಸದಾ ಸಿದ್ದರಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶಾಂತ ಮೂರ್ತಿ ಕುಲಕರ್ಣಿ ಕಾಲೇಜ್ ಆಡಳಿತ ಸದಸ್ಯರಾದ ಅಡಕಿ ಮಂಜುನಾಥ ಅವಂತಿ ಬಸವರಾಜ್,ಮಂಜುನಾಥ ಮಠಪತಿ, ಮೃತ್ಯುಂಜಯ,ಕೊಟ್ರಗೌಡರು,ಕೃಷ್ಣಪ್ಪ,ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಕುಸುಮ ಸರ್ಜನ್ ಸ್ವಾಗತಿಸಿ, ವಿಜಯಲಕ್ಷ್ಮಿ ವಂದಿಸಿದರು ಹಾಗೂ ಪ್ರಕಾಶ್ ಜೈನ್ ರವರ ತಂಡದಿಂದ ಸಂಗೀತ ಕಾರ್ಯಕ್ರಮವನ್ನು ನೆರವೇರಿಸಲಾಯಿತು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.