ವಿಜಯನಗರ ಜಿಲ್ಲೆ ಕೊಟ್ಟೂರು: ಕೈಮುಗಿದು ಏರು ಇದು ಕನ್ನಡದ ತೇರು ನಂಬಿ ಬಂದು ಕೂರು ಇದು ಕನ್ನಡಿಗನ ತೇರು ಕರ್ನಾಟಕದ ತಾಯಿ ಚಾಮುಂಡೇಶ್ವರಿ ಕರ್ನಾಟಕದ ಮೇರು ನಟರಾದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಕರಾಟೆ ಕಿಂಗ್ ಶಂಕರ್ ನಾಗ್ ಸಾಹಸಸಿಂಹ ವಿಷ್ಣುವರ್ಧನ್ ಇವರುಗಳ ಫೋಟೋಗಳಿಗೆ ಪೂಜೆ ಸಲ್ಲಿಸಿ ಕೊಟ್ಟೂರಿನ ಆಟೋ ಚಾಲಕರು ಹೆಮ್ಮೆಯಿಂದ ಕರ್ನಾಟಕದ ನಾಡು ನುಡಿ ಜಲ ಸಂಪನ್ಮೂಲಗಳಿಗೆ ತಮ್ಮ ಪ್ರಾಣವನ್ನು ಕೊಡಲು ಸದಾ ಸಿದ್ದರಿರುತ್ತೇವೆ ಎಂದು ಎದೆತಟ್ಟಿ ಹೇಳುವ ಮುಖಾಂತರ ಕರ್ನಾಟಕದ ಕಿಚ್ಚನ್ನು ತೋರಿಸಿದರು ಪ್ರತಿವರ್ಷದಂತೆ ಈ ವರ್ಷವೂ ಕೂಡ ನವೆಂಬರ್ 9ರಂದು ತಾಯಿ ಭುವನೇಶ್ವರಿ ಮತ್ತು ಶಂಕರ್ ನಾಗ್ ಜನ್ಮದಿನದ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡದ ಬಾವುಟಗಳಿಗೆ ಮಾವಿನ ತೋರಣ ಬಾಳೆಕಂಬ ಹೂವಿನ ಮಾಲೆಗಳೊಂದಿಗೆ ಅಲಂಕರಿಸಿ ಕನ್ನಡದ ಕೀರ್ತಿಯನ್ನು ಎತ್ತಿ ಹಿಡಿಯುವ ಮೂಲಕ ಕರ್ನಾಟಕ ಬಾವುಟವು ಹೆಮ್ಮೆಯಿಂದ ರಾರಾಜಿಸುವ ಮುಖಾಂತರ ಎಂ ಎಂ ಜೆ ಹರ್ಷವರ್ಧನ್ ಹಾಗೂ ಸುಧಾಕರ್ ಪಾಟೀಲ್ ರವರು ತಾಯಿ ಭುವನೇಶ್ವರಿ ಹಾಗೂ ಶಂಕರ್ ನಾಗ್ ಫೋಟೋಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಡ್ಯಾನ್ಸ್ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಹರ್ಷವರ್ಧನ್ ಹಾಗೂ ಸುಧಾಕರ್ ಪಾಟೀಲ್ ಎ ಎಸ್ ಐ ಅಬ್ಬಾಸ್ ಅವರಿಗೆ ಶಾಲು ಹಾರ ಹಾಕುವ ಮೂಲಕ ಸನ್ಮಾನಿಸಿದರು ನಂತರ ಶ್ರೀ ಗುರುಕೊಟ್ಟೂರೇಶ್ವರ ಆಟೋ ಚಾಲಕರು ಆಟೋದ ಮೇಲೆ ತಾಯಿ ಭುವನೇಶ್ವರಿ ಹಾಗೂ ಶಂಕರ್ ನಾಗ್ ಫೋಟೋವನ್ನು ಕಟ್ಟಿಕೊಂಡು ಕೊಟ್ಟೂರಿನ ಪ್ರಮುಖ ಬೀದಿಗಳಾದ ಗಾಂಧಿ ಸರ್ಕಲ್ ಉಜ್ಜಿನಿ ಸರ್ಕಲ್ ಮುಖಾಂತರ ಜವಳೇ ಸರ್ಕಲ್ ಸಿನಿಮಾ ರೋಡ್ ಮುಖಾಂತರ ಮೆರವಣಿಗೆ ಮಾಡಿ ಡ್ರಂ ಸೆಟ್ ಬಡಿದು ಡ್ಯಾನ್ಸ್ ಮಾಡುವ ಮೂಲಕ ಕರ್ನಾಟಕ ಹಬ್ಬವನ್ನು ಅರ್ಥ ಗಂಭೀರವಾಗಿ ಆಚರಿಸಿ ತುಂಬಾ ಸಂತೋಷದಿಂದ ಹರ್ಷವನ್ನು ವ್ಯಕ್ತಪಡಿಸುವ ಮೂಲಕ ಕರ್ನಾಟಕದ ತಾಯಿ ಭುವನೇಶ್ವರಿ ಹಾಗೂ ಕರಾಟೆ ಕಿಂಗ್ ಶಂಕರ್ ನಾಗ್ ಜನ್ಮದಿನದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ಹಂಚಿ ಪ್ರಸಾದ ವ್ಯವಸ್ತೆಯನ್ನು ಮಾಡಿದ್ದರು ಈ ಸಂದರ್ಭದಲ್ಲಿ ಶ್ರೀ ಗುರು ಆಟೋ ಚಾಲಕರಾದ ಶಿವಯ್ಯ ಬಂಡಿಕೊಟ್ರೇಶ್ ದೊಡ್ಡಪ್ಪ ಪರಶುರಾಮ್ ಅನಿಲ್ ರಾಜಣ್ಣ ಮಹೇಶಣ್ಣ ನಾಗಣ್ಣ ಮಾಂತೇಶ್ ಡೈರಿಕೊಟ್ರೇಶ್ ಸಿದ್ದೇಶ್ ರಮೇಶಣ್ಣ ವಿಜಿ ಕುಮಾರ್ ಪ್ರಸಾದ್ ಇನ್ನು ಮುಂತಾದ ಕೊಟ್ಟೂರಿನ ಎಲ್ಲಾ ಆಟೋ ಚಾಲಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.