ಉತ್ತರ ಕನ್ನಡ:ಗಾಂಧಿನಗರವನ್ನು ಕರ್ನಾಟಕ ಸರ್ಕಾರದ ಕೊಳಗೇರಿ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಸ್ಲಂ ಏರಿಯಾ (ಕೊಳಚೆ ಪ್ರದೇಶ) ಎಂದು ಘೋಷಿಸಿದ್ದಕ್ಕೆ
ಮುಂಡಗೋಡ ತಾಲೂಕು ಮುಂಡಗೋಡ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗಾಂಧಿನಗರ ಸರ್ವೇ ನಂಬರ್ – 186 ರ ವ್ಯಾಪ್ತಿಯಲ್ಲಿ 530 ಕುಟುಂಬಗಳ ಪೈಕಿ 253 ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿ, ದಿನಾಂಕ 09/11/2022 ಬುಧವಾರ ಉತ್ತರಕನ್ನಡ ಜಿಲ್ಲಾಧಿಕಾರಿಯಾದ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿಯಾಗಿ ಗಾಂಧಿನಗರ ಪ್ರದೇಶವು ಸರ್ವೇ ನಂಬರ್ 186 ಅಡಿಯಲ್ಲಿ ಬರುತ್ತಿದ್ದು ಈಗಾಗಲೇ ರಸ್ತೆ, ಚರಂಡಿ,ಕುಡಿಯುವ ನೀರು,ಬೀದಿ ದೀಪ ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಹೊಂದಿದ್ದು ಅಭಿವೃದ್ಧಿ ಹೆಸರಿನಲ್ಲಿ ಅಕ್ರಮಗಳು ನಡೆಯುತ್ತಿದ್ದು, ಗಾಂಧಿನಗರವನ್ನು ಕೊಳಚೆ ಪ್ರದೇಶ ಎಂದು ಘೋಷಿಸುವ ಬಗ್ಗೆ ಈ ಭಾಗದ ಜನರಿಗೆ ಯಾವುದೇ ಪೂರ್ವಾಪರ ಮಾಹಿತಿಯೇ ಇಲ್ಲವಾಗಿತ್ತು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಈ ನಡೆ ಅನುಮಾನ ತರುವಂತಾಗಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ, ಸಾರ್ವಜನಿಕರ ಸಮ್ಮುಖದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಿ ಗಾಂಧಿನಗರವನ್ನೂ ಕೊಳಚೆ ಪ್ರದೇಶ ಎಂದು ಘೋಷಣೆ ಮಾಡುವ ಅವಶ್ಯಕತೆ ಇದೆಯೇ ಎಂಬುದನ್ನು ಖುದ್ದು ಪರಿಶೀಲನೆ ನಡೆಸಬೇಕೆಂದು ಗಾಂಧಿನಗರದ ನಿವಾಸಿಗಳು ಜಿಲ್ಲಾಧಿಕಾರಿಗಳ ಬಳಿ ಒತ್ತಾಯಿಸಿದ್ದಾರೆ.
ಈ ವೇಳೆ ವೆಂಕಟೇಶ್ ಶಿರಾಲಿ,ಎನ್ ಡಿ ಕಿತ್ತೂರ, ಆರ್ ಸಿ ಮಳೇಕರ,ಪಿಡಿ ನಾಯಕ್,ಕೆ ಬಿ ಕಲಾಲ,ಮಾರುತಿ ಕುರುಬ ಮುಂತಾದವರು ಇದ್ದರು.