ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗಂಗನಾಳ ಗ್ರಾಮದ ಬಿಜೆಪಿ ಅಭ್ಯರ್ಥಿಗಳಾದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತಿಯ ಸದಸ್ಯರುಗಳು ಗ್ರಾಮದ ಸರಿಯಾಗಿ ಅಭಿವೃದ್ಧಿಯಾಗದ ಕಾರಣ ನೊಂದ ಗ್ರಾಮ ಪಂಚಾಯತಿಯ ಸದಸ್ಯರುಗಳು ಬಿಜೆಪಿಯನ್ನು ತೊರೆದು ಹೊಸ ಭರವಸೆಯೊಂದಿಗೆ ಶ್ರೀ ಶರಣಬಸಪ್ಪಗೌಡ ದರ್ಶನಪುರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಮರಿಗೌಡ ಹುಲಿಕಲ್,ಗಂಗನಾಳ ಗ್ರಾಮದ ಮಾಜಿ ಅಧ್ಯಕ್ಷರು ಚಂದ್ರಶೇಖರ,ಶ್ರೀಮತಿ ಈರಮ್ಮ ಹಳಿಮನಿ ಗ್ರಾಮ ಪಂಚಾಯತಿ ಸದಸ್ಯರು,ಶರಣಪ್ಪ ಹಳಿಮನಿ ಗಂಗನಾಳ,ಈರಣ್ಣ ಹೊಸಮನಿ ಗಂಗನಾಳ,ಭೀಮಣ್ಣ ಹೊಸಮನಿ ಗಂಗನಾಳ ಗ್ರಾಮಸ್ಥರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ವರದಿ:ರಾಜಶೇಖರ ಮಾಲಿ ಪಾಟೀಲ್
