ಯಡ್ರಾಮಿ: ತಾಲೂಕಿನ ಕಾಚೂರ್ ಗ್ರಾಮದಲ್ಲಿ ಟಿಪ್ಪು ಸುಲ್ತಾನ ಸಮೀತಿಯ ವತಿಯಿಂದ ಗ್ರಾಮದಲಿ ಟಿಪ್ಪು ಸುಲ್ತಾನ ಜಯಂತಿ ಆಚರಿಸಲಾಯಿತು. ಈ ಹಿಂದೆ ಸುಮಾರು ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ನಡೆದು ಈ ವರ್ಷದ ಅಂದರೆ ಐದನೇ ವರ್ಷದ ಕಾರ್ಯಕ್ರಮವು ಬಹಳ ಅರ್ಥ ಪೂರ್ಣ ಮತ್ತು ಸರಕಾರದ ನಿಯಮಗಳನ್ನು ಪಾಲಿಸಿ ಬಹಳ ಸರಳತೆಯಿಂದ ಜಯಂತಿ ಜರುಗಿತು.
ನೂತನವಾಗಿ ಗ್ರಾಮದ ಸಮೀತಿಯ ಅದ್ಯಕ್ಷರಾದ ಶ್ರೀ ರಾಜಾ ಪಟೇಲ್ ಪೊಲೀಸ್ ಪಾಟೀಲ್ ರವರಿಗೆ ಗ್ರಾಮದ ಸರ್ವ ಜನಾಂಗದವರು ಹಾಗೂ ಜಯಂತ್ಯೋತ್ಸವ ಸಮೀತಿಯ ಅಧ್ಯಕ್ಷರು,ಪದಾಧಿಕಾರಗಳು ಸೇರಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ರಾಜಾ ಪಟೇಲ್, ಖಾಜಾಪಟೇಲ್ ಕಾಚೂರ್ ,
ಮೋಸಿನ್ ಪಟೇಲ, ಹಾಗೂ ಟಿಪ್ಪು ಸುಲ್ತಾನ್ ಸಮಿತಿ ಯುವಕರು ಮತ್ತು ಗ್ರಾಮಸ್ಥರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು ಎಂದು ಸಮೀರ್ ಪಟೇಲ್ ಗಿರಣಿ ಅವರು ತಿಳಿಸಿದರು ಜೊತೆಗೆ ನಾವೆಲ್ಲರು ಒಂದೇ ಹಿಂದೂ- ಮುಸ್ಲಿಂ,ಜಾತಿ,ಮತ ಎಂಬ ಭೇದ-ಭಾವವಿಲ್ಲದೆ ಜಯಂತ್ಯೋತ್ಸವವನ್ನು ಆಚರಿಸೋಣ ಎಂದು ಮಾನವೀಯ ನುಡಿಗಳನ್ನು ಹೇಳಿದರು.
ವರದಿ: ಚಂದ್ರಶೇಖರ ಎಸ್ ಪಾಟೀಲ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.