ರಾಮಪುರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಾದ ಹೂಗ್ಯದ ದೊಮ್ಮೆಗೌಡನ ದೊಡ್ಡಿ, ಯರ್ರಂಬಾಡಿ, ಗಾಜನೂರು ಮತ್ತು ಕೊಪ್ಪ ಗ್ರಾಮದಲ್ಲಿ ಬರುವ ಸರ್ಕಾರಿ ಶಾಲೆಯ ಬಡ ಮಕ್ಕಳು, ಕಡಾಂಚಿನ ಪ್ರದೇಶದ ಸುಮಾರು 300ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ಗಳನ್ನು ವಿತರಿಸಲಾಯಿತು. 15th ಆಗಸ್ಟ್ -2022 ರಂದು ಈ ಶಾಲೆಗಳಿಗೆ ಭೇಟಿ ಕೊಟ್ಟು ID ಕಾರ್ಡ್, ಟೈ, ಬೆಲ್ಟ್ ಗಳನ್ನು ನೀಡಲಾಗಿತ್ತು. ಆ ಸಂದರ್ಭದಲ್ಲಿ ಮಕ್ಕಳ ಸ್ಥಿತಿ ನೋಡಿ ಹಾಗೂ ಅವರು ಧರಿಸಿದ್ದ ಬಟ್ಟೆ ಗಳನ್ನು ನೋಡಿ ಎಲ್ಲಾ ಶಾಲೆಯ ಮಕ್ಕಳಿಗೂ ಹೊಸದಾಗಿ ಈ ದಿನದಂದು ಸಮವಸ್ತ್ರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹನೂರು ತಾಲೂಕಿನ ಸಹಾಯಕ ಎಂಜಿನಿಯರ್ ಸೆಸ್ಕ್ ಹನೂರು ಬಿ.ರಂಗ ಸ್ವಾಮಿ ರವರು ಎಲ್ಲ ಮಕ್ಕಳಿಗೆ ಸಮವಸ್ತ್ರ ಟೈ ಬೆಲ್ಟ್ ವಿತರಿಸಿದರು.ವರದಿ ಉಸ್ಮಾನ್ ಖಾನ್ ಬಂಡಳ್ಳಿ.
