ಸುಮಾರು ಹೊತ್ತು
ಕಾದರೂ ಬಂದು ಸೇರಲೇ ಇಲ್ಲ
ನೀನಂತೂ ನನ್ನನ್ನು,
ನಿನಗಾಗಿ ಕಾದು ಕಾದು
ಕೊನೆಗೆ ನಾನೇ ತಿಂದು ಮುಗಿಸಿದೆ
ನಿನ್ನ ಪಾಲಿನ ತಿಂಡಿಯನ್ನು.
****
ಜಗಳವನ್ನು ಬದಿಗಿರಿಸಿ
ಸಂಜೆ ಒಮ್ಮೆ ಸಿಗು ನೀ ನನಗೆ
ಬಸ್ ಸ್ಟಾಪಿನಲ್ಲಿ,
ನಿನ್ನ ಕೋಪವನ್ನು ತಣಿಸಲು
ಎಳನೀರು ಹಿಡಿದು ನಿಂತಿರುವೆ
ನನ್ನ ಕೈಯಲ್ಲಿ.
-ಸುನಿಲ್ ಲೇಖಕ್ ಎನ್
ಬೆಂಗಳೂರು