ಮುದಗಲ್ ; ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಎನ್ನುವ ಹಾಗೆ ಈ ದಿನ ವಿಜಯ ನಗರ ಸಾಮ್ರಾಜ್ಯದ ಗತವೈಭವ ಸಾರುವ, ಕೋಟೆಯ ನಾಡು, ಮುದ್ದಿನ ಕಲ್ಲುಗಳ ತವರೂರು, ಐತಿಹಾಸಿಕ ನಗರ ಮುದಗಲ್ಲಿನಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವನ್ನು ಚಿನ್ನದ ನಾಡಿನ ಹೆಮ್ಮೆಯ ಸುಪುತ್ರ,ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಾನಪ್ಪ ಡಿ.ವಜ್ಜಲರು ತಮ್ಮ ಅಮೃತ ಹಸ್ತದಿಂದ ಸಸಿಗೆ ನೀರೆರೆದು ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹಾಗೂ ತಾಯಿ ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ನಂತರ ಮಾತನಾಡಿದ ಮಹನೀಯರು ಕನ್ನಡ ನಾಡಿಗೆ ಸುಮಾರು *2 ಸಾವಿರ ವರ್ಷಗಳ ಇತಿಹಾಸವಿದೆ.ಈ ಪವಿತ್ರ ಭೂಮಿಯ ನೆಲ, ಜಲ, ಭಾಷೆ,ಗಡಿಗಳಿಗೆ ಧಕ್ಕೆ ಬಾರದಂತೆ ಈ ನೆಲದ ರಕ್ಷಣೆಗೆ ನಾವೆಲ್ಲರೂ ಕಂಕಣ ಬದ್ಧರಾಗೋಣ,ಮುದುಗಲ್ ನಗರವು ಒಂದು ಐತಿಹಾಸಿಕ ಮಹತ್ವವಿದೆ.ನಮ್ಮ ನಿಮ್ಮೆಲ್ಲರ ಬಹು ದಿನಗಳ ಬೇಡಿಕೆಯಾದ ಮುದಗಲ್ ಕೋಟೆ ಉತ್ಸವವನ್ನು ಮುಂದಿನ ದಿನಮಾನಗಳಲ್ಲಿ ಖಂಡಿತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ *ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಶ್ರೀ ರಾಜಶೇಖರ ಪಾಟೀಲ ಅಳ್ಳುಂಡಿ, ತಾಲೂಕು ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಪಾಟೀಲ್, ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.