ಲಿಂಗಸಗೂರು:ನ೧೧:ಮುಂಬರುವ ಡಿ ೧೧ ಮತ್ತು ೧೨ನೇ ದಿನಾಂಕದಂದು ಲಿಂಗಸಗೂರಿನಲ್ಲಿ ರಾಯಚೂರು ಜಿಲ್ಲಾ ೧೨ನೇ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಈಗಾಗಲೇ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದ್ದು ಸದರಿ ಸಮ್ಮೇಳನದ ಅಧ್ಯಕ್ಷತೆಯನ್ನು ಮಹಿಳಾ ಸಾಹಿತಿಗಳಿಗೆ ನೀಡಲಿ ಎಂದು ಲಕ್ಷ್ಮೀದೇವಿ ನಡುವಿನಮನಿ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಅಧ್ಯಕ್ಷರು ಒತ್ತಾಯಿಸಿದ್ದಾರೆ. ಸುಮಾರು ೨೩ ವರ್ಷಗಳ ನಂತರ ಲಿಂಗಸಗೂರಿಗೆ ಜಿಲ್ಲಾ ಸಮ್ಮೇಳನ ಮಾಡುವ ಸುಯೋಗ ಒದಗಿ ಬಂದಿರುವುದು ಸಾಹಿತ್ಯ ಆಸಕ್ತರಿಗೆ ತುಂಬಾ ಸಂತಸದ ವಿಚಾರವಾಗಿದೆ ಈ ಹಿಂದೆ ೧೯೯೯ರಲ್ಲಿ ಲಿಂಗಸಗೂರಿನಲ್ಲಿ ಸಮ್ಮೇಳನ ಜರುಗಿದ್ದು ಅವಿಸ್ಮರಣೀಯವಾಗಿದೆ. ಇದೀಗ ಮತ್ತೊಮ್ಮೆ ಲಿಂಗಸಗೂರಿಗೆ ಸಿಕ್ಕಿರಿಯುವುದು ಹೆಮ್ಮೆಯ ವಿಷಯವಾಗಿದ್ದು ಇದು ಕೂಡ ಉತ್ತಮವಾಗಿ ಜರುಗಲೆ೦ದು ನಮ್ಮೆಲ್ಲರ ಆಶಯವಾಗಿದೆ.ಆದರೆ ಇದುವರೆಗೂ ಜಿಲ್ಲೆಯಲ್ಲಿ ಜರುಗಿದ ಎಲ್ಲ ಸಮ್ಮೇಳನಗಳ ಅಧ್ಯಕ್ಷರು ಪುರುಷರೇ ಆಗಿದ್ದರೆ ಅಲ್ಲದೆ ಸಮ್ಮೇಳನದ ಮಂಟಪ ವೇದಿಕೆ, ಹಾಗೂ ಮಹಾದ್ವಾರಗಳಿಗೆ ಪುರುಷರ ಹೆಸರನ್ನೇ ಇಡಲಾಗಿದೆ ಇದಲ್ಲದೆಲ್ಲವನ್ನು ಕಂಡರೆ ಸಾಹಿತ್ಯದಲ್ಲಿಯು ಮಹಿಳಾ ಸಾಹಿತಿಗಳನ್ನು ಕಡೆಗಣಿಸಲಾಗಿದೆ ಎನ್ನುವ ಭಾವವು ಮೂಡುತ್ತದೆ ಎನ್ನುವ ಅದಕ್ಕಾಗಿ ಈ ಸಲ ಮಹಿಳಾ ಸಾಹಿತಿಗಳಿಗೆ ಅಧ್ಯಕ್ಷತೆ ಕೊಡಬೇಕುI, ಅಲ್ಲದೆ
ಅಲ್ಲದೆ ಮಂಟಪ ಅಥವ ವೇದಿಕೆಗಳಿಗೆ ಬಸವಣ್ಣನವರ ಕಾಯಕ ತತ್ವವನ್ನು ಸಾಕಾರಗೊಳಿಸಿದ ಶರಣೆ ಆಯ್ದಕ್ಕಿ ಲಕ್ಕಮನ ಹೆಸರಿಟ್ಟು ಮಹಿಳೆಯರ ನ್ನು ಗೌರವಿಸುವ ಕೆಲಸವನ್ನು
ಜಿಲ್ಲಾ ಸಮ್ಮೇಳನದ ಆಯೋಜಕರು ಮಾಡಲಿ ಎಂದು ಒತ್ತಾಯಿಸಿದರು, ಈ ಸಂದರ್ಭದಲ್ಲಿ ಕಡಳಿ ವೇದಿಕೆಯಲ ಅಧ್ಯಕ್ಷ ಜ್ಯೂತಿ ಐದನಾಳ ,ಚನ್ನಮ್ಮ ಸಕ್ಕರಿ ಅಕ್ಕನ ಬಳಗದ ಅಧ್ಯಕ್ಷ ರು ಇತರರು ಇದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.