ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಆರ್ಥಿಕ ಸಂಕಷ್ಟದಲ್ಲಿಯೂ 2ಕೋಟಿ ನೀಡುತ್ತೇನೆ -ಪೂಜಾರಿ

ಸಿರುಗುಪ್ಪ: ನ-12 : ಮುಂದಿನ ದಿನಗಳಲ್ಲಿ ಸಚಿವರಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಎಂ.ಎಸ್ .ಸೋಮಲಿಂಗಪ್ಪ ಈ ನಗರದಲ್ಲಿ ಇಂದು ಭೂಮಿಪೂಜೆ ಆಗಿರುವ ಈ ಸ್ಥಳದಲ್ಲಿ ಭವ್ಯ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ 2ಕೋಟಿ ಹಣವನ್ನು ಕೇಳಿದ್ದಾರೆ. ಸರ್ಕಾರದಲ್ಲಿ ಆರ್ಥಿಕ ಸಂಕಷ್ಟ ಸ್ಥಿತಿ ಇದ್ದರೂ ಈ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 2ಕೋಟಿ ರೂಪಾಯಿಗಳನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು

ನಗರದ ಹೊರವಲಯದಲ್ಲಿರುವ ಎವಿಎಸ್ ಕಲ್ಯಾಣ ಮಂಟಪದ ಹಿಂದಿನ 1.60 ಎಕರೆ ಪ್ರದೇಶದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದ ಶಂಕುಸ್ಥಾಪನೆ ನೆರವೇರಿಸಿದ ನಂತರ ಸಭೆಯಲ್ಲಿ ಅವರು ಮಾತನಾಡಿದರು
ಪ್ರಧಾನ ಮಂತ್ರಿ ಮೋದಿಯವರ ಕಾರಣದಿಂದಾಗಿ ಹಿಂದೆ ಭಾರತವನ್ನು ಬೇರೆ ದೃಷ್ಟಿಯಿಂದ ನೋಡುತ್ತಿದ್ದ ಜಗತ್ತಿನ ಎಲ್ಲ ದೇಶಗಳು ಉಕ್ರೇನ್ ಯುದ್ಧದ ಸಂದರ್ಭ ಕೇವಲ ಭಾರತದ ತಿರಂಗಾ ಧ್ವಜವನ್ನು ಹಿಡಿದು ತಾಯ್ನಾಡಿಗೆ ಮರಳಿದ ವಿದ್ಯಾರ್ಥಿನಿ ತಮ್ಮೊಂದಿಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಅನೇಕರು ಸಹ ತಿರಂಗ ಧ್ವಜ ದೊಂದಿಗೆ ವಾಪಸ್ಸಾಗಿರುವ ಘಟನೆ ತಿಳಿಸಿದ್ದಾಳೆ ಇದರಿಂದಾಗಿ ಭಾರತ ಇದೀಗ ವಿಶ್ವದಲ್ಲಿಯೇ ಉಚ್ಛ್ರಾಯ ಸ್ಥಿತಿಯಲ್ಲಿದೆ.
ಜಗತ್ತಿಗೆ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದ, ಅವರ ಕಾರ್ಯ ತತ್ಪರತೆಗೆ ಮತ್ತು ಅವರ ಸಮರ್ಪಣಾ ಮನೋಭಾವದ ಬದ್ಧತೆಗೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಪ್ರಪಂಚಕ್ಕೆ ನಾಯಕರಾಗಿದ್ದಾರೆ ಆದ್ದರಿಂದ ಅವರ ಭವನದ ಭೂಮಿ ಪೂಜೆ ಗೆ ಶಂಕು ಸ್ಥಾಪನಾ ಕಾರ್ಯಕ್ಕೆ ಆಗಮಿಸಿದ್ದೇನೆ ಎಂದರು

ಜಿಲ್ಲೆಯ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ತತ್ವಗಳನ್ನು ತಮ್ಮಲ್ಲಿ ಅಳವಡಿಕೆ ಮಾಡಿಕೊಂಡಿರುವ ಮತಕ್ಷೇತ್ರದ ಶಾಸಕ ಸೋಮಲಿಂಗಪ್ಪ ಇವರು ಅತ್ಯಂತ ಸೌಮ್ಯವಾದಿಗಳಾಗಿ ಹಿಡಿದ ಕೆಲಸವನ್ನು ಬಿಡದೆ ಇಂದು ಇಲ್ಲಿ ಭವ್ಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾರಣಿಭೂತರಾಗಿದ್ದಾರೆ ಅವರೊಂದಿಗೆ ಇಡೀ ತಳ ಸಮುದಾಯ ಜತೆಗಿರುವ ಕಾರಣ ಇಂದು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಭವ್ಯ ಭಾರತದ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ನೆರವೇರಿಸಿದ್ದೇವೆ
ಶಾಸಕ ಎಂ ಎಸ್ ಸೋಮಲಿಂಗಪ್ಪ ಮಾತನಾಡಿ ಈಗಾಗಲೇ 1ಕೋಟಿ ರೂ. ಹಣ ಸಿದ್ಧವಿದ್ದು ಸರ್ಕಾರದಿಂದ 2ಕೋಟಿ ರೂಪಾಯಿಗಳ ನೆರವು ಸಿಗಲಿದೆ. ನಗರಸಭೆ ವತಿಯಿಂದ 18ನೇ ಹಣಕಾಸಿನಲ್ಲಿ 50ಲಕ್ಷ ರೂಪಾಯಿಗಳನ್ನು ಬಳಸಿಕೊಂಡು ಅತ್ಯಂತ ತ್ವರಿತಗತಿಯಲ್ಲಿ ಇಲ್ಲಿ ಭವ್ಯ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು
ಇದಕ್ಕೂ ಮುನ್ನ ಸಚಿವರು ಶಾಸಕರು ಭೂಮಿಪೂಜೆ ಸ್ಥಳಕ್ಕೆ ತೆರಳಿ ಶಂಕುಸ್ಥಾಪನೆ ಕಾರ್ಯ ನೆರವೇರಿಸಿದರು
ಮೇಲ್ಮನೆ ಸದಸ್ಯ ಎಂ ಸತೀಶ್ ನಗರಸಭೆಯ ಅಧ್ಯಕ್ಷೆ ಸುಶೀಲಮ್ಮ ವೆಂಕಟರಾಮರೆಡ್ಡಿ ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಕೊಡ್ಲೆ ಮಲ್ಲಿಕಾರ್ಜುನ ಕೊಡ್ಲೆ ಸದಾಶಿವ ಎಚ್ ಬಿ ಗಂಗಪ್ಪ ಮೆಕೇಲಿ ವೀರೇಶಿ ಎಂ ಮಹದೇವ ಸೇರಿದಂತೆ ನಗರಸಭೆ ಸದಸ್ಯರು ಅಂಬೇಡ್ಕರ್ ಸಂಘದ ಮುಖಂಡರುಗಳು ಅಭಿಮಾನಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ