ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ನಿವೃತ್ತ ಕಾರ್ಮಿಕರಿಗೆ ಡಿಎ ಬಾಕಿ ವಿತರಿಸುವಾಗ ಶಾಸನಬದ್ದವಾಗಿ ನೀಡಬೇಕಾಗಿದ್ದ ಉದ್ಯೋಗಿ ಮತ್ತು ಉದ್ಯೋಗದಾತರ ಭಾಗದ ಭವಿಷ್ಯನಿಧಿ ಹಣವನ್ನು ಮತ್ತು ಸಂಚಿತ ಬಡ್ಡಿಯನ್ನು ಕಾರ್ಮಿಕರ ಭವಿಷ್ಯನಿಧಿ ಖಾತೆಗೆ ಜಮಾ ಮಾಡದೆ ಆಡಳಿತವರ್ಗ ಅನ್ಯಾಯ ಮಾಡಿದೆ ಎಂದು ಸುಮಾರು 550 ಜನ ನಿವೃತ್ತ ಕಾರ್ಮಿಕರು ವೈಯುಕ್ತಿಕವಾಗಿ ದೂರು ನೀಡಿದ್ದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಪ್ರತಿಭಟನೆ ನಡೆಸುವ ಮೂಲಕ ಶಿವಮೊಗ್ಗದ ಭವಿಷ್ಯನಿಧಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಭವಿಷ್ಯನಿಧಿ ಆಯುಕ್ತರ ಕಚೇರಿಯಲ್ಲಿ ನಡೆದ ಭವಿಷ್ಯನಿಧಿ ಅದಾಲತ್ ನಲ್ಲಿ “ಎಂಪಿಎಂ ನಿವೃತ್ತ ನೊಂದ ಕಾರ್ಮಿಕರ ಹೋರಾಟ ವೇದಿಕೆ”ಯ ವತಿಯಿಂದ ಕೂಡಲೇ ಪರಿಹಾರ ಒದಗಿಸುವಂತೆ ಪ್ರತಿಭಟಿಸಿ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಸಂಚಾಲಕರಾದ ಟಿ.ಜಿ.ಬಸವರಾಜಯ್ಯನವರೂ ಸೇರಿದಂತೆ ವೆಂಕಟೇಶಮೂರ್ತಿ, ರಘುನಾಥರಾವ್, ಶಿವಲಿಂಗಯ್ಯ, ತಾರಕೇಶ್ವರ, ಗೋವಿಂದಪ್ಪ, ಬಾಪು, ಹಾಗೂ ನೂರಾರು ನಿವೃತ್ತ ಕಾರ್ಮಿಕರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.