ಕೊಳಚೆ ತುಂಬಿದ ರಸ್ತೆ ಸಾರ್ವಜನಿಕರ ಆಕ್ರೋಶ
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದ ನದಿಗೆ ತೆರಳುವ ರಸ್ತೆ ಕೊಳಚೆ ಗುಂಡಿಯಂತಾಗಿದ್ದು ಗ್ರಾಮಸ್ಥರಿಂದ ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ
ಸಿರುಗುಪ್ಪ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಕ್ಷೇತ್ರವು ಆಗಿದ್ದು ಬಾಗೇವಾಡಿ ಗ್ರಾಮದ ಮೂರನೇ ವಿಭಾಗದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಬಳಿ ಜೀವನದಿ ತುಂಗಭದ್ರಾ ನದಿಗೆ ಇರುವ ರಸ್ತೆ ಇದಾಗಿದೆ
ಪ್ರಮುಖವಾಗಿ ಗ್ರಾಮಸ್ಥರಿಗೆ ಕುಡಿಯುವ ನೀರು. ಅನ್ನದಾತರು ಜಮೀನುಗಳಲ್ಲಿ ಬೆಳೆ ಬೆಳೆಸಲು ಈ ಜೀವನದಿ ವರದಾನವಾಗಿದೆ. ಈ ಗ್ರಾಮದಿಂದ ನದಿಗೆ ತೆರಳಬೇಕಾದ ರಸ್ತೆಗೆ ಹೊಂದಿಕೊಂಡಂತೆ ನಾಗಪ್ಪ ಕಟ್ಟೆ ಇದ್ದು ಅಲ್ಲಿಂದ ಮುಂದೆ ನದಿಗೆ ಸಂಪರ್ಕಿಸುವ ಈ ರಸ್ತೆ ಕೊಚ್ಚೆ ಗುಂಡಿಯಾಗಿದೆ
ಇದೇ ರಸ್ತೆಯಲ್ಲಿ ಮಹಿಳೆಯರು ಮೂಗಿಗೆ ಬಟ್ಟೆ ಒಗೆಯಲು ಪಾತ್ರೆ ತೊಳೆಯಲು ಹಾಗೂ ಇನ್ನಿತರ ದಿನನಿತ್ಯದ ಕಾರ್ಯಗಳಿಗೆ ಸಂಚರಿಸುತ್ತಾರೆ
ಆದರೆ ಇಲ್ಲಿ ಸಂಚರಿಸಬೇಕಾದರೆ ಪ್ರಾಣ ಕೈಯಲ್ಲಿ ಹಿಡಿದು ಈ ರಸ್ತೆ ದಾಟಬೇಕಿದೆ ಸ್ವಲ್ಪವೇ ಗಮನ ಬೇರೆಡೆ ಹೋದರೆ ಅವಗಡ ಆಗುವುದು ಸಾಮಾನ್ಯವಾಗಿದೆ ಇಲ್ಲಿ ಅನೇಕರು ಜಾರಿ ಬಿದ್ದು ಅನಾಹುತ ಮಾಡಿಕೊಂಡಿದ್ದಾರೆ ಇಲ್ಲಿ ಗ್ರಾಮ ಪಂಚಾಯಿತಿ ಇದ್ದರೂ ಈ ಬಗ್ಗೆ ಯಾವುದೇ ಲಕ್ಷ್ಯ ವಹಿಸುತ್ತಿಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಈ ಬಗ್ಗೆ ಅನೇಕ ಬಾರಿ ಗಮನಕ್ಕೆ ತಂದಿದ್ದರೂ ಸ್ವತಃ ತಾವೇ ತಿರುಗಾಡಿದ್ದರೂ ರಸ್ತೆ ಸರಿ ಮಾಡುವ ಇಚ್ಛಾಶಕ್ತಿ ಅವರುಗಳಿಗೆ ಇಲ್ಲವಾಗಿದೆ
ಇದೇ ರಸ್ತೆಯಲ್ಲಿ ಪೀರಲದೇವರು ಗಳನ್ನು ನದಿಗೆ ತೆಗೆದುಕೊಂಡು ಹೋಗುವುದು ಗಂಗೆ ಪೂಜೆಗೆ ಹೋಗುವುದು ಊರ ಮಾರಮ್ಮನ ಹಬ್ಬ ಮಾಡುವುದು ಎಲ್ಲವೂ ಇದೆ ರಸ್ತೆಯಲ್ಲಿಯೇ ಸಂಚರಿಸುತ್ತವೆ
ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿರುವ ಸರ್ಕಾರ ಮತ್ತು ಗ್ರಾಮ ಪಂಚಾಯಿತಿಗಳು ಇಲ್ಲಿ ರಸ್ತೆ ಸರಿ ಮಾಡದೇ ಗ್ರಾಮಸ್ಥರು ಪಡುವ ತೊಂದರೆಗಳನ್ನು ಗೌಡಪ್ಪ ಮೂಕ ಪ್ರೇಕ್ಷಕರಂತೆ ಆಗಿದ್ದಾರೆ
ತಕ್ಷಣ ಇಲ್ಲಿ ಉತ್ತಮ ರಸ್ತೆಯನ್ನು ಮಾಡಿಕೊಟ್ಟು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂಬುದು ಇಲ್ಲಿನ ಗ್ರಾಮಸ್ಥರು ಗಳ ಆಗ್ರಹವೂ ಆಗಿದೆ ಈ ಬಗ್ಗೆ ಅನೇಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ