ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದಲ್ಲಿರುವ ಏಂಜಲ್ಸ್ ಆಂಗ್ಲ ಮಾಧ್ಯಮ ಶಾಲೆ ಇಂಡಿಯಲ್ಲಿ ಪಂಡಿತ್ ಜವಾಹರಲಾಲ್ ನೆಹರುರವ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಏಂಜಲ್ಸ್ ಶಾಲೆಯ ಸಂಸ್ಥೆಯ ಅಧ್ಯಕ್ಷರು ಅವರು ಮಾತನಾಡಿ ಭಾರತದಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ
ಮಾಡಲಾಗುತ್ತದೆ.ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14ರಂದು ಭಾರತದ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ.
ಭಾರತದ ಮಕ್ಕಳ ಸ್ಥಿತಿಗತಿ ಹಾಗೂ ಭವಿಷ್ಯದ ದೃಷ್ಟಿಯಿಂದ ಅವರು ಕಂಡ ಕನಸಿನಂತೆ, ನಮ್ಮದೇಶದ ಮೊದಲ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರೂರವರ ಜನ್ಮದಿನದಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಈ ಒಂದು ಶುಭ ಸಂದರ್ಭದಲ್ಲಿ ಮಕ್ಕಳಲ್ಲಿ ನನ್ನ ವಿಶೇಷ ವಿನ ಏನೆಂದರೆ, ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಪಡದೇ ದೇಶೀಯ ಸಂಸ್ಕೃತಿಯನ್ನು ಅನುಕರಿಸಿ ಬೆಳೆಯಬೇಕು. ಜೊತೆಗೆ ದುಷ್ಟ ಅಭ್ಯಾಸಗಳಿಂದ ದೂರವಿದ್ದು ಆಟ – ಪಾಠ – ಸಂಗೀತಗಳ ಕಡೆಗೆ ಹೆಚ್ಚಿನ ಒಲವನ್ನು ತೋರಿಸಬೇಕು. ದೇಶದ ಭವಿಷ್ಯದ ಆಸ್ತಿಯಾಗಿರುವ ಮಕ್ಕಳು ದೇಶದ ಬಗ್ಗೆ ಸದಾ ಭಕ್ತಿ ಭಾವನೆಯನ್ನು ಹೊಂದಿ ಉತ್ತಮ ಪ್ರಜೆಗಳಾಗಲಿ ಎಂದು ಈ ಶುಭ ದಿನದಂದು ಶುಭ ಹಾರೈಸುತ್ತಾ ದೇಶದ ಎಲ್ಲಾ ಮಕ್ಕಳಿಗೆ
ಮತ್ತೊಮ್ಮೆಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹೇಳಿದರು.
ಹಾಗೂ ಏಂಜಲ್ಸ್ ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಡಿ ಶಿರೋಮಣಿ ಮೇಡಮ್ ಅವರ 70 ನೆಯ ಹುಟ್ಟುಹಬ್ಬ ಆಚರಣೆ ಮಾಡಲಾಯಿತು
ಈ ಒಂದು ಕಾರ್ಯಕ್ರಮದಲ್ಲಿ ಆದರ್ಶ ಚಿತ್ರಕಲೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಐ ಸಿ ಪೂಜಾರಿ ಗುರುಗಳು ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಡಿ ಶಿರೂಮಣಿ ಮೇಡಂ ಅವರು ಹಾಗೂ ವಿಜಯಕುಮಾರ್ ಗೌಳಿ ಮಹಮ್ಮದ್ ಗೌಸ್ ಬಗಲಿ ಆನಂದ್ ಚವ್ಹಾಣ ಉಮ್ರಾನ್ ಮುಜಾವರ್ ಸ್ವಾತಿ ಸುರ್ಪುರ್ ರೇಖಾ ಪೂಜಾರಿ ರೇಖಾ ಪಾಟೀಲ್ ಶೋಭಾ ಚವ್ಹಾಣ ಗೀತಾ ಮೇಡಂ ಸಂಧ್ಯಾ ಕುಳಕರ್ ಉಪಸ್ಥಿತರಿದ್ದರು
ವರದಿ. ಅರವಿಂದ್ ಕಾಂಬಳೆ