ಹನೂರು : ತಾಲೂಕಿನ ಎಲ್ಲೆಮಾಳ ಗ್ರಾಮ ಪಂಚಾಯತಲ್ಲಿ ಆರೋಗ್ಯ ಕೇಂದ್ರ ತೆರೆಯಲು ಸರ್ಕಾರದದಿಂದ ಹಣ ಮಂಜೂರಾಗಿದ್ದರು ಸಹ ಜಾಗದ ಸಮಸ್ಯೆಯಿಂದ ಕಾಮಗಾರಿ ಪ್ರಾರಂಭಿಸಿರಲಿಲ್ಲ ಇದನ್ನು ಗಮನಿಸಿ ಇದೇ ಪಂಚಾಯತಿಗೆ ಸೇರಿದ ರೈತರಾದ ಸಿದ್ದಪ್ಪ ಎಂಬುವವರು ತಮ್ಮ ಜಮೀನನ್ನು ಆರೋಗ್ಯ ಕೇಂದ್ರಕ್ಕೆ ದಾನ ಮಾಡಿದ್ದಾರೆ. ಇವರು ಈ ಮುಂದೆಯು ಸಹ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲೆಮಾಳ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಿಸಲು ತಮ್ಮ ಸ್ವಂತ ಜಮೀನು ಸರ್ಕಾರಕ್ಕೆ ದಾನ ಮಾಡಿದ್ದಾರೆ.ಇವರು ಮೂಲತಹ ಹನೂರು ತಾಲ್ಲೂಕು ಕೆಂಚಯ್ಯನದೊಡ್ಡಿ ಗ್ರಾಮದ ಸಿದ್ದಪ್ಪ ಮತ್ತು ಅವರ ಪತ್ನಿ ಜಯಮ್ಮ ಅವರಾಗಿದ್ದು ತಮ್ಮ ಪುತ್ರರು ಈಗಾಗಲೇ ವೈದ್ಯಕೀಯ ವೃತ್ತಿಯಲ್ಲಿದ್ದು ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡಲು ನಾನು ಆಸ್ಪತ್ರೆಗೆ ಜಮೀನು ದಾನ ಮಾಡಿದ್ದೆನೆ , ಎಲ್ಲೇಮಾಳ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದಿದ್ದರಿಂದ ಕಟ್ಟಡ ನಿರ್ಮಿಸಲು ತಮ್ಮ ಸ್ವಂತ ಜಮೀನಿನಲ್ಲಿ 2400 ಚದರಡಿ ಜಾಗವನ್ನು ಸರ್ಕಾರಕ್ಕೆ ದಾನ ಮಾಡಿದೆ, ಎಂದರು ಸರ್ಕಾರದ ಜಿಲ್ಲಾ ಆರೋಗ್ಯ ಅಧಿಕಾರಿ ಮಾತನಾಡಿ ದಾನಿಗಳ ಕೋರಿಕೆ ಮೇರೆಗೆ ಆರೋಗ್ಯ ಕೇಂದ್ರಕ್ಕೆ ಶ್ರೀಮತಿ ಜಯಮ್ಮ ಸಿದ್ದಪ್ಪ ಆರೋಗ್ಯ ಉಪ ಕೇಂದ್ರ ಎಂದು ಹೆಸರಿಡಲು ಸಹ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹೆಳಲಾಗಿದೆ ಎಂದರು .
ಸಿದ್ದಪ್ಪ ದಂಪತಿಗಳ ಈ ಕಾರ್ಯವನ್ನು ಗ್ರಾಮಸ್ಥರು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಪ್ರಶಂಸೆ ವ್ಯಕ್ತಪಡಿಸಿದ್ದು ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬಹುದು
ವರದಿ: ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.