ಹನೂರು : ಎಲ್ಲೆಮಾಳ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರ ನಿರ್ಮಿಸಲು ಸ್ವಂತ ಜಾಗವನ್ನು ಚಾಮರಾಜನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ದಾನ ಮಾಡಲು ರೈತನೋರ್ವ ಮುಂದಾಗಿದ್ದು,
ಹನೂರು ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಎಲ್ಲೇಮಾಳ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದಿದ್ದರಿಂದ , ಉಪಕೇಂದ್ರ ಕಟ್ಟಡ ನಿರ್ಮಿಸಲು ಸ್ಥಳ ಧಾನಿಗಳಾದ ಶ್ರೀಮತಿ ಜಯಮ್ಮ ಮತ್ತು ಶ್ರೀ ಕೆ.ವಿ.ಸಿದ್ದಪ್ಪ , ಕೆಂಚಯ್ಯನದೊಡ್ಡಿ ರವರು ಎಲ್ಲೇಮಾಳ ಗ್ರಾಮದ ಸರ್ವೆ ನಂಬರ್ 28 / 20 ಯಲ್ಲಿ ಜಾಗವನ್ನು ಸರ್ಕಾರಕ್ಕೆ ದಾನವಾಗಿ ನೀಡಲು ತೀರ್ಮಾನಿಸಿದ್ದು , ಸರಿಯಷ್ಟೆ
ಶ್ರೀಮತಿ ಜಯಮ್ಮ ಮತ್ತು ಶ್ರೀ ವಿ.ಸಿದ್ದಪ್ಪ 0 -05.50 ಎಕರೆ ನಿವೇಶವನ್ನು ( 60X40 ) ರವರ ಹೆಸರನ್ನು ಆರೋಗ್ಯ ಉಪಕೇಂದ್ರಕ್ಕೆ ಇಡಲು ಕೋರಿರುತ್ತಾರೆ .
ಜಯಮ್ಮ ಮತ್ತು ಶ್ರೀ.ಕೆ.ವಿ.ಸಿದ್ದಪ್ಪ ರವರ ಈ ಸಾಮಾಜಿಕ ಸೇವಾ ಕಾರ್ಯವನ್ನು ಆರೋಗ್ಯ ಇಲಾಖೆಯುವ ಪ್ರಶಂಸಿಸಿದೆ ಆರೋಗ್ಯ ಹೆಸರಿಡಲು ಅವಕಾಶವಿರುವುದರಿಂದ , ಸದರಿಯವರ ಮನವಿಯನ್ನು ಪರಿಗಣಿಸಿ ಆರೋಗ್ಯ ಉಪ ಕೇಂದ್ರದ ಸದರಿ ಪ್ರಶಂಸಿಸುತ್ತದೆ . ಹಾಗೂ ಉಲ್ಲೇಖ ( 1 ) ರ ಆದೇಶದಂತೆ ಆರೋಗ್ಯ ಉಪಕೇಂದ್ರಕ್ಕೆ ದಾನಿಗಳ ನಿವೇಶನವನ್ನು ನೋಂದಣಿ ಮಾಡಿ ಕಟ್ಟಡ ಕಾಮಗಾರಿ ಮುಗಿದ ನಂತರ ಉಪ ಕೇಂದ್ರಕ್ಕೆ ಶ್ರೀಮತಿ ಜಯಮ್ಮ ಸಿದ್ದಪ್ಪ ರವರ ಹೆಸರಿಡಲು ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ. ವರದಿ ಉಸ್ಮಾನ್ ಖಾನ್ ಬಂಡಳ್ಳಿ.
