ಇಂದು NSUI ( ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ) ಸೇಡಂ ತಾಲೂಕ ತಂಡದಿಂದ ಪಟ್ಟಣದ ಜೂನಿಯರ್ ಕಾಲೇಜ್ ಗೆ ಬೇಟಿ ನೀಡಲಾಯಿತು ಅಲ್ಲಿ ವಿದ್ಯಾರ್ಥಿ ಗಳು ಅನೇಕ ಸಮಸ್ಯೆಗಳನ್ನು ಹೇಳಿದರು ಅದರಲ್ಲಿ ಪ್ರಮುಖವಾಗಿ ಸಮಸ್ಯೆ ಎಂದರೆ
ದೊಡ್ಡ ಕಾಲೇಜು ಇದ್ದರೂ ಕುಡಿಯಲು ನೀರು ಇಲ್ಲ , ಹಾಗೂ ಶೌಚಾಲಯವಿದ್ದರು ಅದರಲ್ಲಿ ನೀರು ಇಲ್ಲ ಹಾಗೂ ಸ್ವಚ್ಚ ಇಲ್ಲ ಇದರಿಂದ ಸಾಕಷ್ಟು ಪ್ರಮುಖವಾಗಿ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ ಮತ್ತು ಕಾಲೇಜಿನ ಯಾವುದೇ ಕೊಠಡಿಯಲ್ಲಿ ಕಸ ಸಹಗುಡಿಸುವವರಿಲ್ಲ ಹಾಗೂ ಆಟದ ಮೈದಾನದಲ್ಲಿ ಮುಳ್ಳು ಕಂಟಿ ಬೆಳೆದು ನಿಂತಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು ಅದರ ಜೊತೆಗೆ ಸಾಕಷ್ಟು ವಿದ್ಯಾರ್ಥಿಗಳು ಬೇರೆ ಬೇರೆ ಹಳ್ಳಿ ಗಳಿಂದ ಬರುತಿದ್ದು ಅವರಿಗೆ ಪ್ರಮುಖವಾಗಿ ಬಸ್ಸಿನ ತೊಂದರೆ ಇದೆ ಸರಿಯಾದ ಸಮಯಕ್ಕೆ ನಮ್ಮ ಗ್ರಾಮಕ್ಕೆ ಬಸ್ಸುಗಳು ಬರುವುದಿಲ್ಲ ಇದರಿಂದ ದಿನಾಲೂ ತರಗತಿಗೆ ತಡವಾಗಿ ತಲೂಪುತ್ತಿದೇವೆ ಎಂದು ಹೇಳಿದರು
NSUI ತಾಲೂಕ ಅಧ್ಯಕ್ಷ ರಾಹುಲ್ ಉಡುಗಿ , ಶಾಬೊದ್ದಿನ ಸಂಗಾವಿ , ಕಾರ್ತಿಕ್ ಗುತ್ತೇದಾರ್ , ಹುಸೇನ್ , ರಾಹುಲ್ ಹಲಗೇರಿ ,ಇತರರು ಹಾಜರಿದ್ದರು
