ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ 3000 ಮನೆಗಳಿಗೆ ಮನವಿ.

ಮೈಸೂರು. ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಚಾಮರಾಜ ಕ್ಷೇತ್ರಕ್ಕೆ 3000 ಮನೆಗಳನ್ನು ಕಲ್ಪಿಸಿ ಕೊಡುವಂತೆ ನಾನು ಮಾನ್ಯ ವಸತಿ ಸಚಿವ ಶ್ರೀ ಸೋಮಣ್ಣರವರಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದು ಶಾಸಕ ಎಲ್ ನಾಗೇಂದ್ರ ರವರು ಮೈಸೂರು ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ ನಡೆದ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಸಚಿವರು ಕ್ಯಾಬಿನೆಟ್ ತೀರ್ಮಾನದ ನಂತರ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ ಎಂದು ಸಭೆಗೆ ತಿಳಿಸಿದರು. ಮೈಸೂರು ನಗರ ಪಾಲಿಕೆ ವತಿಯಿಂದ ಮೂಲ ಸೌಕರ್ಯ ಕಲ್ಪಿಸಿರುವ ಪ್ರದೇಶಗಳಿಂದ ಆರ್ಥಿಕ ಸಂಪನ್ಮೂಲ ಕುರುಡಿಕರಣ ಮಾಡುವ ಬಗ್ಗೆ ತೀವ್ರ ಗಮನ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ನಗರ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಿದರು ಹಲವಡೆ ತೆರಿಗೆ ಸಂಗ್ರಹಿಸುತ್ತಿಲ್ಲ ಅಂತ ಪ್ರದೇಶಗಳನ್ನು ಗುರುತಿಸಿ ನಿವಾಸಿಗಳಿಗೆ ಹೊರೆಯಾಗದಂತೆ ಕನಿಷ್ಠ ತಲೆಗೆ ಏನಾದರೂ ಸಂಗ್ರಹಿಸಿದರೆ ಇನ್ನು ಹೆಚ್ಚು ಸೌಲಭ್ಯ ಮತ್ತು ನಿತ್ಯ ಕಾಣಿರುವ ಹಣ ಹಾಗೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು. ಕರ್ನಾಟಕ ಕೊಳಗೇರಿ ನಿರ್ಮೂಲನ ಮಂಡಳಿ ಸ್ಲಂ ಬೋರ್ಡ್ ಇಂದ ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಿರುವ ಸುಮಾರು 894 ಮನೆಗಳನ್ನು ಇನ್ನೂ ಪಾಲಿಕೆ ಹಸ್ತನಾಂತ ಮಾಡಿಕೊಂಡಿಲ್ಲ ಸರಿಯಾಗಿ ಪರಿಶೀಲನೆ ನಡೆಸಿದರೆ ಈ ರೀತಿ ಸಾವಿರಾರು ಮನೆಗಳನ್ನು ಗುರುತಿಸಬಹುದು ಇವೆಲ್ಲರಿಂದ ಕನಿಷ್ಠ ತೆರಿಗೆ ಸಂಗ್ರಹಿಸಿದರು ಕುಡಿಯುವ ನೀರು ರಸ್ತೆ ಬೀದಿ ದೀಪ ಸೌಲಭ್ಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಬಹುದು ಎಂದರು.

ಮೇಡ್ಗಳ್ಳಿ ಅಂಬೇಡ್ಕರ್ ಜ್ಞಾನಲೋಕದ ಕಾಂಪ್ಲೆಕ್ಸ್ ನಲ್ಲಿ ಕಾಂಕ್ರೀಟ್ ರಸ್ತೆ ನೂರಾರು ಮನೆಗಳಿಗೆ ರಿಯಾಯಿತಿಯಲ್ಲಿ ವಿದ್ಯುತ್ ಸಂಪರ್ಕ, ಯುಜಿಡಿ ಸೇರಿದಂತೆ 410 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಸಲಾಗಿದೆ, ಸ್ಲಂ ಬೋರ್ಡ್ ಹಾಗೂ ಪಾಲಿಕೆಯವರು ಹಣವಿಲ್ಲ ಎಂಬ ಕಾರಣಕ್ಕೆ ಸರಕಾರದ ಅನುದಾನದಲ್ಲಿ ಕೆಲಸ ಮಾಡಿಸಿದ್ದೇವೆ ಇದಕ್ಕೆ ಹಿಂದಿನಿಂದಲೂ ನಗರ ಪಾಲಿಕೆ ನಿರ್ವಹಣೆ ಮಾಡಿದೆ ಆದರೂ ಈ ಪ್ರದೇಶ ಪಾಲಿಕೆಗೆ ಹಸ್ತಾಂತರ ಮಾಡಿಕೊಂಡಿಲ್ಲ. ಸ್ಲಂ ಬೋರ್ಡ್ ನಿಂದ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ ನಂತರ ಮುಂದಿನ ನಿರ್ವಹಣೆಗೆ ಸ್ಥಳೀಯ ಸಂಸ್ಥೆಗೆ ವಹಿಸಬೇಕೆಂಬುದು ನೇಮವಿದೆ, ಹಕ್ಕುಪತ್ರ ವಿತರಿಸಿದ ನಂತರ ಹಸ್ತಾಂತರ ಮಾಡಿಕೊಳ್ಳುತ್ತೇವೆ ಎಂದರೆ ಅದರಿಂದ ಪಾಲಿಕೆ ನಷ್ಟ. ಸ್ಲಂ ಬೋರ್ಡ್ ನಿಂದ ನಿವಾಸಿಗಳಿಗೆ ಹಂಚಿಕೆ ಪತ್ರ ವಿತರಿಸಲಾಗಿದೆ ಹಸ್ತಾಂತರ ಪ್ರಕ್ರಿಯೆಗೆ ಕ್ರಮ ವಹಿಸಬೇಕು ಎಂದು ಇದರಿಂದ ಹೆಚ್ಚು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಕ್ಕು ಪತ್ರ :- ಹೆಬ್ಬಾಳು ಆಶ್ರಯ ಬಡಾವಣೆ ಬಡಾವಣೆಯ ಒಟ್ಟು 105 ರಲ್ಲಿ ಮೂಲ ಫಲಾನುಭವಿಗಳಾದ 20 ಜನರಿಗೆ ಹಕ್ಕು ಖುಲಾಸೆ ಪತ್ರ ವಿತರಿಸಿದ್ದೇವೆ. ಜಿಪಿಎ ಪಡೆದವರು ಸೇರಿ ನೇಮಗಳಿಗೆ ಒಳಪಡದ 85 ಜನರಿಗೆ ಹಕ್ಕು ಖುಲಾಸೆ ಪತ್ರ ನೀಡಲು ಅವಕಾಶ ಮಾಡಿಕೊಡುವಂತೆ ನಗರ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಈ ಬಗ್ಗೆ ರಾಜ್ಯಕ್ಕೆ ಅನ್ವಯವಾಗುವಂತೆ ರೀತಿಯಲ್ಲಿ ಕ್ರಮ ಕೈಗೊಳ್ಳಬಹುದೇ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲು ಅವಕಾಶ ಕಲ್ಪಿಸಬಹುದೇ ಎನ್ನುವುದನ್ನು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಮುಂದುವರೆಯುವ ಭರವಸೆ ನೀಡಿದ್ದಾರೆ. ಡಾ. ಬಿ ಆರ್ ಅಂಬೇಡ್ಕರ್ ಜನ್ಮ ಶತಾಬ್ದಿ ಅಂಗವಾಗಿ ಕುಕ್ಕೆರೆಹಳ್ಳಿಯಲ್ಲಿ ಮನೆ ಪಡೆದಿರುವ 13 ಮನೆಗಳಿಗೆ ಹಕ್ಕುಪತ್ರ ವಿತರಿಸುವ ಸಂಬಂಧ ಪ್ರಕಟಣೆ ಹೊರಡಿಸಿ ನಂತರ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಮೇದರ ಬ್ಲಾಕ್ ನಲ್ಲಿ ದೇವರಾಜ್ ಹಂತದಲ್ಲಿ 17 ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ ಎಂಬ ದೂರಿನ ಬಗ್ಗೆ ಗಮನ ಹರಿಸಿ, ಸರಸ್ವತಿಪುರಂನಲ್ಲಿ ಸರಕಾರಿ ಭೂಮಿಯಲ್ಲಿ ಈಜುಕೊಳದ ಬಳಿ ಏಳು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ದೂರು ಬಂದಿದ್ದು ಸ್ಥಳ ನಡೆಸಿ ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಹಾಗೂ ಸರ್ವೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಹೆಚ್ಚುವರಿ ಆಯುಕ್ತ ರೂಪ ಉಪಯುಕ್ತ ಸವಿತಾ ಸೇರಿದಂತೆ ವಿವಿಧ ವಲಯ ಅಧಿಕಾರಿಗಳು ಸ್ಲಂ ಬೋರ್ಡಿನ ಸರ್ವೆ ಇಲಾಖೆ ಅಧಿಕಾರಿಗಳು ಆಶ್ರಯ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ