ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಟಿಪ್ಪು ಸುಲ್ತಾನ್ ಮೈಸೂರು ಹುಲಿ, ಜಾತಿ ಧರ್ಮಗಳನ್ನು ಮೀರಿದ ವ್ಯಕ್ತಿ, ಹೆಚ್ ವಿಶ್ವನಾಥ್

ಮೈಸೂರು. ಟಿಪ್ಪು ಸುಲ್ತಾನ್ ಮೈಸೂರು ಹುಲಿ ಜಾತಿ, ಧರ್ಮ, ಪಕ್ಷಗಳನ್ನು ಮೀರಿದ ವ್ಯಕ್ತಿತ್ವ ಅವರದು ಟಿಪ್ಪು ಸುಲ್ತಾನ್ ಕನ್ನಡ ನಾಡಿನ ಜನಜಲದಂಕ ಮಲ್ಲ ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್ ಯಾರು ಏನೇ ಮಾಡಿದರು ಟಿಪ್ಪು ಸುಲ್ತಾನ್ ಹೆಸರು ಕನ್ನಡ ನಾಡಿನಲ್ಲಿ ಅಜರಾಮರ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹಡಗುರು ವಿಶ್ವನಾಥ್ ಹಾಡು ಹೋಗಲಿದರು. ಮೈಸೂರು ಟಿಪ್ಪು ಕನ್ನಡ ರಾಜು ವೇದಿಕೆ ರಾಜನಗರದಲ್
ಅಲ್ ಬದರ್ ಮೈದಾನದದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಮತ್ತು ಕನ್ನಡ ರಾಜ್ಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಜಗತ್ತಿನಲ್ಲಿ ಶತ್ರುಗಳಿಗೆ ಮಂಡಿಯೂರದ ಜಗತ್ತಿನ ಏಕೈಕ ನಾಯಕ ಟಿಪ್ಪು ಸುಲ್ತಾನ್ ಮಾತ್ರ ಯಾರು ಕೂಡ ಇತಿಹಾಸವನ್ನು ತೀರಿಸುವ ಕೆಲಸ ಮಾಡಬಾರದು ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮಾಡಿದ್ದು ಟಿಪ್ಪು ಕನ್ನಂಬಾಡಿ ಕಟ್ಟೆಯ ಭೂಮಿ ಪೂಜೆ ಮಾಡಿದ್ದು ಟಿಪ್ಪು ಯಾರು ಏನೇ ಮಾಡಿದರು ಟಿಪ್ಪು ಸುಲ್ತಾನ್ ಹೆಸರು ಕನ್ನಡ ನಾಡಿನಲ್ಲಿ ಅಜರಾಮರ. ರೈಲಿನ ಹೆಸರು ಬದಲಾವಣೆ ಮಾಡಿದ ಕೂಡಲೇ ಅವರ ಹೆಸರು ಅಳಿಸಲು ಆಗಲ್ಲ ಎಂದು ಹೇಳಿದರು. ಟಿಪ್ಪು ಸುಲ್ತಾನ್ ಆಡಳಿತ ಧೈರ್ಯ ಶೌರ್ಯ ಯಾರು ಕೂಡ ಅಲ್ಲೇ ಗೆಳೆಯರು ಸಾಧ್ಯವಿಲ್ಲ. ಟಿಪ್ಪು ಸಾವಿರಾರು ಮಂದಿಯನ್ನು ಕೊಂದು ಹಾಕಿದ ಎಂದು, ಸಾವಿರ ಜನರನ್ನು ಮತಾಂತರ ಮಾಡಿದ ಎಂದು ಹೇಳುತ್ತಾರಲ್ಲ, ಅಂದಿನ ಜನಸಂಖ್ಯೆ ಎಷ್ಟಿತ್ತು ಹಾಗಾದರೆ ಶೃಂಗೇರಿ ಮಠಕ್ಕೆ ಟಿಪ್ಪು ಕೊಡುಗೆ ಅಪಾರ. ಆದರೆ ಸುಖ ಸುಮ್ಮನೆ ಕೆಲವರು ಮಾತನಾಡುವುದು ಸರಿಯಲ್ಲ. ವಸ್ತ್ರ ಸಂಹಿತೆ ಜಾರಿ ಮಾಡಿದ್ದು ಟಿಪ್ಪು ಸುಲ್ತಾನನ್ನು ಗುಣಗಾನ ಮಾಡಿದರು, ಟಿಪ್ಪು ಸುಲ್ತಾನನ ಗುಣಗಾನ ಮಾಡಲು ಯಾವ ಪಕ್ಷದವರಾದರೇನು, ಟಿಪ್ಪು ಸ್ವಾಭಿಮಾನಿ ಕನ್ನಡಿಗ ಮೈಸೂರು ಹುಲಿ, ಜಾತಿ ಧರ್ಮ ಪಕ್ಷಗಳನ್ನು ಮೀರಿದ ವ್ಯಕ್ತಿತ್ವ ಅವರದು, ಚರಿತ್ರೆಯನ್ನು ಯಾರು ಬದಲಿಸಲು ಸಾಧ್ಯವಿಲ್ಲ fಶೃಂಗೇರಿಯಲ್ಲಿ ಈಗಲೂ ಸಲಾಂ ಆರತಿ ನಡೆಯುತ್ತಿದೆ ನಂಜನಗೂಡು ಶ್ರೀ ವೆಂಕಟೇಶ್ವರ ಹಕೀಂ ನಂಜುಂಡ ಅಂತ ಹೆಸರಿಟ್ಟಿದವರು ಟಿಪ್ಪು ಸುಲ್ತಾನ್, ಯಾರು ಏನು ಹೇಳುತ್ತಾರೆ ಅಂತ ಚರಿತ್ರೆ ಬದಲಾಗಿ ಬಿಡುವುದಿಲ್ಲ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಕೊಡಗಿನಲ್ಲಿ ಟಿಪ್ಪು ಸಾವಿರಾರು ಜನರ ಹತ್ಯಾಕಾಂಡ ನಡೆಸಿದವನು ಎಂದಿದ್ದಾರೆ ಆಗ ಮೈಸೂರ ಸಾಮ್ರಾಜ್ಯ ಜನಸಂಖ್ಯೆ ಎಷ್ಟಿತ್ತು ಎನ್ನುವ ಸಾಮಾನ್ಯ ಜ್ಞಾನ ಬೇಡವೇ ಎಂದು ಅಡಗೂರು ವಿಶ್ವನಾಥ್ ಸಂಸದರು ಹೇಳಿಕೆಗಳನ್ನು ಅಲೆಗಳೆದರು.
ತನ್ವೀರ್ ಸೇಟ್. ನರಸಿಂಹರಾಜ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ತನ್ವೀರ್ ಸೇಟ್ ಮಾತನಾಡಿ ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು ಎಂದು ಹೇಳಿದರು, ಇಸ್ಲಾಂ ಧರ್ಮದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ, ಇದ್ದಿದ್ದರೆ ಮನೆಗೊಂದು ರಂತೆ ಟಿಪ್ಪು ಪ್ರತಿಮೆ ನಿರ್ಮಾಣವಾಗುತ್ತಿತ್ತು. ನಮ್ಮನ್ನು ಒಗ್ಗಟ್ಟಿಸುವ ಶಕ್ತಿ ಟಿಪ್ಪು ಹೆಸರಿಗಿದೆ ಇದು ವಿವಿಧ ಪಕ್ಷಗಳಲ್ಲಿರುವ ಒಂದು ಸಮುದಾಯದ ಮುಖಂಡರು ಟಿಪ್ಪು ಹೆಸರಿನಲ್ಲಿ ಒಂದಾಗುವುದೇ ಇದಕ್ಕೆ ಸಾಕ್ಷಿ. ಟಿಪ್ಪು ಹೆಸರಿಗೆ ಅನೇಕ ಅಪಚಾರಗಳನ್ನು ಮಾಡಲಾಗುತ್ತಿದೆ ಸುಳ್ಳು ಕಥೆಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು ನಮ್ಮ ಸಮುದಾಯದ ಎಲ್ಲವನ್ನು ಮೌನವಾಗಿ ಸಹಿಸುತ್ತಿದೆ ಕಾಲ ಬಂದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ ಎಂದರು. ಟಿಪ್ಪು ಸುಲ್ತಾನ್ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಮುಂದಿಟ್ಟು ಸರ್ವ ಶಕ್ತನಾದ ಅರ್ಹನನ್ನು ಶ್ರೀ ಸಾಕ್ಷಿಕರಿಸಿ ಜನಪದ ಆಡಳಿತ ನಡೆಸಿದರು ಮೈಸೂರು ರಾಜ್ಯವನ್ನು ಆಳಿದ 260 ವರ್ಷಗಳ ಹಿಂದೆ ಶ್ರೀರಂಗಪಟ್ಟಣದ ಮೇಲೆ ರಿಯಾಸತೇ ದಖನ್ ಕರ್ನಾಟಕ ಎಂದು ಬರೆಸಿದ್ದಾರೆ. ಅಂದರೆ ಕರ್ನಾಟಕ ಎಂಬ ಹೆಸರಿನ ಕಲ್ಪನೆ ಇಲ್ಲದ ಅವರ ಆಳ್ವಿಕೆಯಲ್ಲಿ ಈ ರಾಜ್ಯವನ್ನು ಕರ್ನಾಟಕ ಎಂದು ಮೊಟ್ಟಮೊದಲು ಬಾರಿಗೆ ಸಂಬೋಧಿಸಿದ ಕೀರ್ತಿ ಟಿಪ್ಪು ಸುಲ್ತಾನರಿಗೆ ಸಲ್ಲುತ್ತದೆ ಎಂದರು.
ಪ್ರತಾಪ ಸಿಂಹ. ಪ್ರತಾಪ ಸಿಂಹ ಟಿಪ್ಪು ಚರಿತ್ರೆಯನ್ನು ಸರಿಯಾಗಿ ಓದಲಿ, ಎಸ್ ಡಿ ಪಿ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ ಟಿಪ್ಪು ಎಕ್ಸ್ಪ್ರೆಸ್ ರೈಲನ್ ದೈಲಿನ ಟಿಪ್ಪು ಹೆಸರನ್ನು ಬೇಕೆಂದು ತೆಗೆದಿದ್ದೇವೆ? ಟಿಪ್ಪು ಏನು ಮೈಸೂರಿನವರ? ಎಂದು ಕೇಳಿದ ಸಂಸದ ಪ್ರತಾಪ್ ಸಿಂಹ ಏನು ಮೈಸೂರಿನವರ? ಎಂದು ಟಾಂಗ್ ನೀಡಿದರು. ದೂರದ ಸಕಲೇಶಪುರದಿಂದ ಬಂದು ಸ್ವಂತ ಪರಿಶ್ರಮದಿಂದ ರಾಜಕಾರಣ ಮಾಡಿಲ್ಲ ಇಲ್ಲಿ ಮೋದಿ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಟಿಪ್ಪು ಸುಲ್ತಾನರ ಚರಿತ್ರೆಯನ್ನು ಅವರು ಸರಿಯಾಗಿ ಓದಿಲ್ಲ. ಅಂದಿನ ಟಿಪ್ಪು ಆಳ್ವಿಕೆಯಲ್ಲಿ ಬೇರೆ ಬೇರೆ ದೇಶಗಳ ಜಿಡಿಪಿಗಿಂತ ಮೈಸೂರು ರಾಜ್ಯದ ಜಿಡಿಪಿ 5 ಪಟ್ಟು ಹೆಚ್ಚಿತ್ತು ತನ್ನ ರಾಜ್ಯದಲ್ಲಿ ಪಾನ ನಿಷೇಧ ಮಾಡಿದ ದೊರೆ ಜಗತ್ತಿನ ಮೊಟ್ಟ ಮೊದಲ ದೊರೆ ಟಿಪ್ಪು ಸುಲ್ತಾನ್. 35,000 ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದಾರೆ ಅವರ ರಾಜ್ಯದಲ್ಲಿ ಒಟ್ಟು ಶೇಕಡ 40ರಷ್ಟು ಭೂಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು. ಪ್ರತಾಪ್ ಸಿಂಹ ಮೊದಲು ಆರ್ ಎಸ್ ಎಸ್ ನವರಾದ ಭಗವಾನ್ ಎಸ್ ಗಿದ್ವಾನಿ ಬರೆದಿರುವ ” ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್'” ಕೃತಿಯನ್ನು ಮೊದಲು ಓದಲಿ ಎಂದು ನುಡಿದರು.
ಟಿಪ್ಪು ಉತ್ತಮ ಆಡಳಿತಗಾರ ದೀನ ದಲಿತರ ಬಂಧು ಹಸಿವು ಮುಕ್ತ, ನಿರುದ್ಯೋಗ ಮುಕ್ತ, ಅಸಮಾನತೆ ಮುಕ್ತ ಮೈಸೂರು ರಾಜ್ಯ ಕಟ್ಟಿದವರು. ಆತ ಎಂದಿಗೂ ಹಿಂದು ವಿರೋಧಿ ಅಲ್ಲವೇ ಅಲ್ಲ, ಶೃಂಗೇರಿ ಮಠಕ್ಕೆ ಅಪಾಯ ಬಂದಾಗ ತಕ್ಷಣ ಅಲ್ಲಿಗೆ ಹೋಗಿ ತುಂಗಾ ನದಿಯಲ್ಲಿ ಬಿಸಾಡಿದ್ದ ದೇವಿ ಶಾರದೆಯನ್ನು ಪುನರ್ ಸ್ಥಾಪಿಸಿದವರು. 150ಕ್ಕೂ ಹೆಚ್ಚು ಹಿಂದೂ ದೇಗುಲಗಳನ್ನು ಸ್ಥಾಪಿಸಿದವರು ಆದರೆ ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಬಿಂಬಿಸುವರು ಸುಳ್ಳು ಹೇಳುವವರನ್ನು ಮೊದಲು ಗಲ್ಲಿಗೇರಿಸಬೇಕು ಎಂದು ಪ್ರೊಫೆಸರ್ ಮಹೇಶ್ಚಂದ್ರ ಗುರು ಕಿಡಿ ಕಾರ್ಯದರು. ಟಿಪ್ಪು ಸುಲ್ತಾನ್ ಮತಾಂದನಲ್ಲ, ಏಕೆಂದರೆ ಆತ ಕಾವೇರಿ ಕಣಿವೆಯಲ್ಲಿ ಎಲ್ಲಾ ಜಾತಿ ಜನರಿಗೂ ಫಲವತ್ತಾದ ಭೂಮಿ ಕೊಟ್ಟಿದನು. ಟಿಪ್ಪು ಗಿಂತ ಕನ್ನಡ ಅಭಿಮಾನಿ ಮತ್ತೊಬ್ಬ ಇಲ್ಲ, ಅಷ್ಟೊಂದು ಕನ್ನಡ ಪ್ರೇಮಿ ಆತನ ಆಡಳಿತ ಕಾಲದಲ್ಲಿ ಎಲ್ಲ ಪತ್ರಗಳನ್ನು ಕನ್ನಡದಲ್ಲಿ ಬರೆಯಲು ಆದೇಶಿಸಿದ್ದನು. ಆತನ ತ್ಯಾಗವನ್ನು ಮಹಾತ್ಮ ಗಾಂಧಿ ಕೂಡ ಹೊಗಳಿದ್ದರು ಎಂದು ಪ್ರೊಫೆಸರ್ ಮಹೇಶ್ಚಂದ್ರ ಗುರು ( ಚಿಂತಕ ) ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತಾ ನುಡಿದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಕನ್ನಡ ರಾಜ್ಯೋತ್ಸವದ ಕನ್ನಡ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆ ಮತ್ತು ಕನ್ನಡ ನಾಡಗೀತೆಯನ್ನು ಶಾಲಾ ಮಕ್ಕಳು ತುಂಬಾ ಸ್ವಾರಸ್ಯಕರವಾಗಿ ಹಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಮಾಜಿ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಅಯುಬ್ ಖಾನ್, ಮಾಜಿ ಉಪಮೇಯರ್ ಅನ್ವರ್ ಬೇಗ್, ಚಿಂತಕರು ಪ್ರೊಫೆಸರ್ ಮಹೇಶ್ಚಂದ್ರ ಗುರು, ಪ್ರೊಫೆಸರ್ ನಂಜುಂಡ ಮಂಜುನಾಥ್, ಧರ್ಮ ಗುರುಗಳಾದ ಮೌಲಾನ ಸಲಾಂ ಸಾಬ್, ಮೌಲಾನ ಸಾಹೇಬ್, ಶ್ರೀ ಬಸವಲಿಂಗ ಸ್ವಾಮೀಜಿ ಗಳು, ಆಮ್ ಆದ್ಮಿ ಪಕ್ಷದ ಧರ್ಮಶ್ರೀ. ನಗರ ಪಾಲಿಕೆ ಸದಸ್ಯರಾದ ಸುಹೇಲ್ ಬೆಗ್, ಪಾಷಾ ಮುಖಂಡರಾದ ಎಂ ಎಫ್ ಕಲೀಮ್, ಆಫ್ರೋಜ್ ಖಾನ್. ಮೌಲಾನಗಳು ಸೇರಿದಂತೆ ಹಲವರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ