ಕೇರಳ ರತ್ನಗಿರಿ, ಕುಂಬಳೆ, – ದಿನಾಂಕ 14/11/2022 ರಿಂದ ಆರಂಭಗೊಂಡ 12ನೇ ವರ್ಷದ ಹರಿಕೀರ್ತನಾ ಸಪ್ತಾಹ ಮಹೋತ್ಸವಕ್ಕೆ ಯಿಂದು 6 ನೇ ದಿನ. ಕುಂಬಳೆ ಶ್ರೀ ಶಂನಾಡಿಗರ ಸಾರಥ್ಯದಲ್ಲಿ ಬಹಳ ಯಶಸ್ವಿಯಾಗಿ ಜರುಗುತ್ತಿರುವುದು ಸಂತಸದ ವಿಷಯ. ಕಿರಿಯ ಹಾಗೂ ಹಿರಿಯ ಕೀರ್ತನಾರ್ಥಿಗಳಿಂದ ವಿವಿಧ ಪೌರಾಣಿಕ ವಿಷಯಗಳನ್ನು ಆಧರಿಸಿ ಸಂಜೆ 4:30 ರಿಂದ 8:00 ರ ವರೆಗೆ ಹರಿಕಥೆಯನ್ನು ನೆರವೇರಿಸಿ ಕೊಡುತ್ತಿದ್ದಾರೆ. ನಾಳೆ ದಿನಾಂಕ 20/11/2022 ರವಿವಾರ ಹರಿಕಥಾ ಸಪ್ತಾಹ ಸಮಾಪ್ತಿ ಗೊಳ್ಳಲಿದೆ.
