ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ಎಲುಬು ಮತ್ತು ಕೀಲು ವೈದ್ಯರು ತಪಾಸಣೆ ಮಾಡುವ ಮೂಲಕ ಶಿರವಾಳ ಗ್ರಾಮದ ಜನರಿಗೆ ಉಚಿತ ಔಷಧ ಕೊಡಲಾಯಿತು
ಗ್ರಾಮದ ಹಿರಿಯರಾದ ಮರೆಪ್ಪ ಪ್ಯಾಟಿ ಬಡವರಿಗೆ ದಾನ ಧರ್ಮ ಮಾಡಿದ ಕುಟುಂಬ. ಈಗ ಅದೇ ಕುಟುಂಬದ ಕುಡಿಯಾಗಿರುವ ಡಾ|| ಅನೀರುದ್ ಅವರು ಹಿರಿಯರು ಹಾಕಿಕೊಟ್ಟ ಹಾದಿಯಲ್ಲೇ ಬಂದು ಇಂದಿನ ದಿನ ಶಿರವಾಳ ಗ್ರಾಮದಲ್ಲಿ ಉಚಿತ ಆರೋಗ್ಯ ಕಾರ್ಯಕ್ರಮ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರಾಮದ ಬಡಜನರಿಗೆ ಉಚಿತ ಆರೋಗ್ಯ ತಪಾಸಣಾ ಸೇವೆ ನೀಡುವುದರ ಮೂಲಕ ಡಾ|| ಅನೀರುದ್ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹಾಗೇ ಮುಂದಿನ ದಿನಗಳಲ್ಲಿ ೬ ತಿಂಗಳಿಗೊಮ್ಮೆ ಅವರು ಉಚಿತ ಆರೋಗ್ಯ ಕ್ಯಾಂಪ್ ಮಾಡಲು ಮುಂದಾಗಿದ್ದಾರೆ. ಈ ಆರೋಗ್ಯ ತಪಾಸಣೆ ವಿಶೇಷತೆಯೆಂದರೆ.
” ಮಂಡಿ ಚಿಪ್ಪುಮರುಜೋಡಣೆ ಮತ್ತು ತಜ್ಞ ವೈದ್ಯರ ಕೂಡ ಇದಕ್ಕೆ ಒಲವು ತೋರಿದ್ದಾರೆ. ಶಿರವಾಳ ಗ್ರಾಮಸ್ಥರು ಮುಂದೆ ನಡೆಯುವ ಉಚಿತ ಆರೋಗ್ಯ ತಪಾಸಣಾ ಸದುಪಯೋಗ ಪಡೆದುಕೊಳ್ಳಬೇಕೆಂದು.ಡಾ||ಅನೀರುದ್.ಸಿ.ಕುಲಕರ್ಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮಸ್ಥರಿಗೆ ಹೇಳಿದರು.ಈ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಾಯೋಜಕರು.
ಡಾ|| ಸಿ.ಎನ್.ಕುಲಕರ್ಣಿ ನಿವೃತ್ತ ವೈದ್ಯಾಧಿಕಾರಿ ರಾಯಚೂರು,ಯಲ್ಲಪ್ಪ ಚಿತ್ತಾಪುರ ನಿವೃತ್ತ ಜಿಲ್ಲಾಧಿಕಾರಿ,
ಮರೆಪ್ಪ ಪ್ಯಾಟಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು,ಬಸುಗೌಡ, ಶರಣಪ್ಪ ಪ್ಯಾಟಿ, ಭೀಮಸೇನ ರಾವ್ ಕುಲಕರ್ಣಿ,ರಾಚಯ್ಯ ಸ್ವಾಮಿ,ಮಹಿಬೂಬ ಪಾಷಾ,ಮುನೇಪ್ಪ ಯಾಳವಾರ, ಭೀಮರಾಯ ಗಂಗಾವತಿ, ವೆಂಕಟೇಶ್ ಪೂಜಾರಿ, ಮಾನಪ್ಪ ಯಾಳವಾರ ಹಾಗೂ ಗ್ರಾಮದ ಹಿರಿಯರು ಭಾಗವಹಿಸಿದ್ದರು.
ವರದಿ
ರಾಜಶೇಖರ ಮಾಲಿ ಪಾಟೀಲ್ ಶಹಾಪುರ