ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೂತನ ದೇವಾಲಯದ ಉದ್ಘಾಟನಾ ಕಾರ್ಯಕ್ರಮ

ಹನೂರು: ಜನತೆ ಧಾರ್ಮಿಕ ಶ್ರದ್ಧಾ ಭಕ್ತಿ ಜೊತೆಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವ ದಿಸೆಯಲ್ಲಿ ಮುಂದಾಗಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.

ತಾಲೂಕಿನ ವಡಕೆ ಹಳ್ಳ ಗ್ರಾಮದಲ್ಲಿ ದಲಿತ ಸಮುದಾಯದ ಜನತೆ ಕರುಮಾರಿಯಮ್ಮನ್ ನೂತನ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇವಾಲಯಗಳು ಮಾನಸಿಕ ಶಾಂತಿ ನೆಮ್ಮದಿಯ ಕೇಂದ್ರಗಳಾಗಿವೆ. ತಮ್ಮ ಕಷ್ಟದ ಜೀವನದ ನಡುವೆ ಕೂಡ ಸ್ವಾಭಿಮಾನದಿಂದ ದೇವಾಲಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯಶಸ್ವಿಯಾಗಿರುವುದು ಶ್ಲಾಘನೀಯ ವಿಚಾರ. ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಿ ಎಂದ ಅವರು ಗ್ರಾಮದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಬಂದು ಚರ್ಚಿಸಲಾಗುವುದು. ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.

ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗಿಯ ದೊಡ್ಡಿಂದವಾಡಿ ಸಿದ್ದರಾಜು ಮಾತನಾಡಿ, ಎಂ.ಆರ್.ಮಂಜುನಾಥ್ ಅವರು ದಲಿತರು, ಶೋಷಿತರು ಹಿಂದುಳಿದವರ ಕಷ್ಟ ಸುಖಗಳನ್ನು ಅರಿತವರು. ಎಷ್ಟೋ ಕುಟುಂಬಗಳು ಶವ ಸಂಸ್ಕಾರ ಮಾಡಲು ಅಸಕ್ತರಾಗಿರುತ್ತಾರೆ. ಆ ಒಂದು ಕಾರ್ಯವನ್ನು ಮಾಡಲು ಹಾಗೂ ಪುಣ್ಯತಿಥಿ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಕಾರ್ಯ ನಿಜವಾಗಲೂ ಶ್ರೇಷ್ಠವಾದದ್ದು. ಅಲ್ಲದೆ ಇನ್ನಿತರೆ ಕ್ಷೇತ್ರಗಳಲ್ಲಿಯೂ ಕೂಡ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ನಮ್ಮ ಈ ಭಾಗದ ಜನತೆಗೆ ಒಂದು ಲೈಬ್ರರಿಯನ್ನು ತೆರೆಯಲು ಅವಕಾಶ ಮಾಡಿಕೊಡಿ ಎಂದು ಮಂಜುನಾಥ್ ಅವರಲ್ಲಿ ಮನವಿ ಮಾಡಿದ ಅವರು ಜನತೆ ದೇವರು ದಿಂಡಿರು ಬಗ್ಗೆ ಭಕ್ತಿ ಭಾವ ಇರಲಿ. ಆದರೆ ಅಂದಾಭಕ್ತಿ ಹಾಗೂ ಮೌಡ್ಯಕ್ಕೆ ಜ್ಯೋತು ಬೀಳಬಾರದು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮಹತ್ವವನ್ನು ನೀಡಿ ಎಂದು ಕರೆ ನೀಡಿದ್ದಾರೆ. ಹೂಗ್ಯ, ಮೀಣ್ಯ ಭಾಗದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಇಲ್ಲಿನ ಶೋಷಿತರು ದಲಿತರು ಅತ್ಯಂತ ನಿಕೃಷ್ಟವಾಗಿ ಬದುಕುತ್ತಿದ್ದಾರೆ. 24 ಮನೆ ತೆಲುಗು ಶೆಟ್ಟರು ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ರಾಜಕೀಯದಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಈಗಾಗಲೇ ಮಾತನಾಡಿ ಹೋಗಿದ್ದಾರೆ. ಮೊದಲು ಅವರು ಈ ತಾರತಮ್ಯವನ್ನು ಸರಿಪಡಿಸಿ ಕ್ಷೇತ್ರದಲ್ಲಿ ರಾಜಕೀಯ ಮಾಡಲಿ ಎಂದು ಜನಧ್ವನಿ ಬಿ. ವೆಂಕಟೇಶ್ ಅವರ ಹೆಸರನ್ನು ಉಚ್ಚರಿಸದೆ ಮಾರ್ಮಿಕವಾಗಿ ಕುಟುಕಿದರು. ಡಾ.ಬಿ. ಆರ್. ಅಂಬೇಡ್ಕರ್ ಕೊಟ್ಟ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಈ ಸ್ಥಾನಮಾನವನ್ನು ಅಲಂಕರಿಸಿದ್ದೇವೆ ಮತ್ತು ಬದುಕುತ್ತಿದ್ದೇವೆ, ಎಂಬುದನ್ನು ಮನಗಾಣಬೇಕು ಎಂದರು.

ದೇವಾಲಯ ನಿರ್ಮಾಣಕ್ಕೆ ಆರ್ಥಿಕ ನೆರವಿನ ಹಸ್ತ ಚಾಚಿದ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಾಲಯ್ಯ, ಸೆಲ್ವಂ, ಮುಖಂಡರುಗಳಾದ ಹನೂರು ಮಂಜೇಶ್, ಚಿನ್ನವೆಂಕಟ, ಮಾದೇವ ಶೆಟ್ರು, ಎನ್. ರಾಚಪ್ಪ, ಬಣ್ಣಾರಿ, ಕೃಷ್ಣ, ಲೂಯಿಸ್, ಮಾದೇವ, ಮಾರ್ಟಳ್ಳಿ ಗ್ರಾಮದ ಕರುಮಾರಿಯಮ್ಮನ್ ದೇವಾಲಯದ ಉಸ್ತುವಾರಿಗಳಾದ ವೀರನ್, ಗ್ರಾಮದ ಮುಖಂಡರುಗಳಾದ ಪೆರುಮಾಳ್, ಮುನಿಯ, ಮುರುಗೇಶ್, ಸತ್ತಿ, ಮಹೇಂದ್ರ, ಕುಮಾರ್ ಇನ್ನಿತರರು ಉಪಸ್ಥಿತರಿದ್ದರು. ವರದಿ ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ