ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋ

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋ
ಕುಡಿದು ಗೌರವ ಕಳೆದುಕೊಳ್ಳಬ್ಯಾಡೋ
ದೇಹಾರೋಗ್ಯವ ಕೆಡಿಸಿಕೊಳ್ಳಬ್ಯಾಡೋ !!

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋ
ಕುಡಿದು ಮನೆಯ ಹಾಳು ಮಾಡಬ್ಯಾಡೋ
ಪ್ರೀತಿ ಪ್ರೇಮವ ಕಳೆದುಕೊಳ್ಳಬ್ಯಾಡೋ !!

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋ
ಕುಡಿದು ಸಂಬಂಧಿಗಳ ಸಹವಾಸದಿಂದ ದೂರವಾಗಬ್ಯಾಡೋ
ಕುಡಿದು ಕಂಡ ಕಂಡವರನ್ನು ಹೀಯಾಳಿಸಬ್ಯಾಡೋ !!

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋ
ಕುಡಿದು ರಸ್ತೆಯಲಿ ಬೀಳಬ್ಯಾಡೋ
ಕುಡಿದು ಮೋರೆಯಲಿ ಬಿದ್ದು ಹೊರಳಾಡಬ್ಯಾಡೋ !!

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋ
ಕುಡಿದ ಅಮಲಿನಲಿ ಬೈಯಬ್ಯಾಡೋ
ಹೆಂಡರ ಮಕ್ಕಳ ಮರ್ಯಾದೆ ತೆಗಿಯಬ್ಯಾಡೋ !!

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋ
ಕುಡಿದು ಹೆಂಡರ ಮಕ್ಕಳ ಹೊಡಿಯಬ್ಯಾಡೋ
ಕಂಡ ಕಂಡವರ ಜೊತೆ ಒದೆತಿಂದು ಮನೆಗೆ ಬರಬ್ಯಾಡೋ !!

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋ
ನಂಬಿ ಬದುಕುವವರ ಬದುಕಿಗೆ ಕೊಳ್ಳಿ ಇಡಬ್ಯಾಡೋ
ಹೊತ್ತು ಎತ್ತಾಡಿಸಿದವರ ಮನಕ ನೋವ ತರಬ್ಯಾಡೋ !!

ಕುಡಿಬ್ಯಾಡೋ ಮನುಜ ಕುಡಿಯಬ್ಯಾಡೋ
ಅಮಲಿಳಿದ ಮ್ಯಾಲ ಮರುಗಬ್ಯಾಡೋ
ದುಶ್ಚಟಕ ಬಿದ್ದು ಬದುಕ ಕಳೆದುಕೊಳ್ಳಬ್ಯಾಡೋ !!

  • ಹನುಮಂತ ದಾಸರ ಹೊಗರನಾಳ
    ಮೊ: 9945246234
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ