ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉಟಕನೂರು ಶ್ರೀ ಮರಿ ಬಸವರಾಜ ದೇಶಿ ಕೇಂದ್ರ ಮಹಾಸ್ವಾಮಿಗಳ ವತಿಯಿಂದ ಕಾರುಣ್ಯ ಆಶ್ರಮಕ್ಕೆ ಗೌರವಾಶೀರ್ವಾದ

ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಉಟಕನೂರು ಪರಮಪೂಜ್ಯ ಪರಮ ತಪಸ್ವಿ ಮೌನ ಯೋಗಿ ಶ್ರೀ ಶ್ರೀ ಶ್ರೀ ಬಸವಲಿಂಗ ತಾತನವರ 38ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಕಡಕೋಳ ಮಡಿವಾಳೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಪ್ರಸ್ತುತ ಊಟಕನೂರು ಮಠದ ಉತ್ತರಾಧಿಕಾರಿಯಾದ ಶ್ರೀ ಮರಿಬಸವರಾಜ ದೇಶಿ ಕೇಂದ್ರ ಮಹಾಶಿವಯೋಗಿಗಳ ನೇತೃತ್ವದಲ್ಲಿ ಶ್ರೀ ಬಸವಲಿಂಗ ತಾತನವರ ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸಿಂಧನೂರು ನಗರದ ಕಾರುಣ್ಯ ಆಶ್ರಮದ ಆಡಳಿತ ಅಧಿಕಾರಿಗಳಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿ ಉಟಕನೂರು ಶ್ರೀಗಳು ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಗೌರವಾಶೀರ್ವಾದ ಸ್ವೀಕರಿಸಿ ಮಾತನಾಡಿದ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸಯ್ಯ ಸ್ವಾಮಿ ದಿದ್ದಿಗಿ ಗ್ರಾಮದ ಜನತೆಯ ಸಹಾಯ ಸಹಕಾರದೊಂದಿಗೆ ಈ ಕಾರುಣ್ಯ ಕುಟುಂಬ ಹುಟ್ಟಿಕೊಂಡಿದೆ ಇಂದಿನ ಸಮಾಜದಲ್ಲಿ ಇಂತಹ ಪುರಾಣ ಪ್ರವಚನ ಕಾರ್ಯಕ್ರಮಗಳು ನಮ್ಮ ಜೀವನದ ಮುಖ್ಯ ಭಾಗವಾಗಿವೆ. ಕಾರುಣ್ಯ ಆಶ್ರಮದ ಸಂಸ್ಥಾಪಕರಾದ ನನ್ನ ತಂದೆಯವರು ಹರೇಟನೂರು ಗ್ರಾಮದ ಶ್ರೀ ಬಸವಲಿಂಗ ತಾತನವರ ಗದ್ದುಗೆ ಹಾಗೂ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಅರ್ಚಕರಾಗಿ ಎರಡು ದೇವಸ್ಥಾನಗಳಲ್ಲಿ ಬಂದಿರುವ ಮಂಗಳಾರತಿ ತಟ್ಟೆ ಹಾಗೂ ಇನ್ನಿತರ ಸೇವೆಯನ್ನು ಅನಾಥಪರ ಕಾರ್ಯಗಳಿಗೆ ಇನ್ನಿತರ ವಿವಿಧ ಸಮಾಜ ಪರ ಕಾರ್ಯಗಳಿಗೆ ಉಪಯೋಗಿಸುತ್ತಾ ನಮ್ಮ ಕುಟುಂಬದ ಹಸಿವು ಸಹಿತ ನೀಗಿಸಿಕೊಳ್ಳುತ್ತಿದ್ದೇವೆ. ಉಟಕನೂರು ಶ್ರೀ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನ ಆಶೀರ್ವಾದ ಈ ಕಾರುಣ್ಯ ಕುಟುಂಬದ ಮೇಲಿರುವುದರಿಂದ ಇಂತಹ ಮಟ್ಟಿಗೆ ಸಂಸ್ಥೆಯ ಅಭಿವೃದ್ಧಿಯಾಗಿದೆ ದಿದ್ದಿಗಿ ಗ್ರಾಮದ ಪ್ರತಿಯೊಬ್ಬ ನಾಗರಿಕರು ಕೂಡ ಸಹಾಯ ಸಹಕಾರ ನೀಡುವುದರ ಮೂಲಕ ಕಾರುಣ್ಯ ಸಂಸ್ಥೆಯ ಅಭಿವೃದ್ಧಿಗೆ ಮೂಲ ಕಾರಣಿಕರ್ತರಾಗಿದ್ದಾರೆ. ಇಷ್ಟು ದಿನಗಳು ಮಾಡಿರುವ ಸಹಾಯವನ್ನು ಕಾರುಣ್ಯ ಕುಟುಂಬ ಮುಂದಿನ ದಿನಮಾನಗಳಲ್ಲಿ ಸಹಿತ ತಮ್ಮ ಮುಂದೆ ಜೋಳಿಗೆಯ ಮೂಲಕ ಸಹಾಯ ಬೇಡಲು ಬರಲಿದೆ ತಮ್ಮ ಗ್ರಾಮಡ್ಕ್ ಸಹಾಯದಿಂದ ಇನ್ನೂ ಹೆಚ್ಚಿನ ಅನಾಥ ಜೀವಿಗಳನ್ನು ಬದುಕಿಸುವಂತಹ ಹೆಚ್ಚಿನ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಮಾತನಾಡಿ ಸೇವಾ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ದಿದ್ದಿಗಿ ಗ್ರಾಮದ ಎಲ್ಲಾ ನಾಗರೀಕರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಉಟಕನೂರು ಮಠದ ಶ್ರೀ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು. ಹಾಗೂ ಊರಿನ ಹಿರಿಯರಾದ ರಮೇಶಪ್ಪ ಸಾಹುಕಾರ. ಪುರಾಣ ಪಟ್ಟಣಕಾರರಾದ ವೇದಮೂರ್ತಿ ಶಶಿಧರ ಶಾಸ್ತ್ರಿಗಳು ಹಿರೇಮಠ ಡೋಣಿ. ಗವಾಯಿಗಳಾದ ವೇದಮೂರ್ತಿ ಮನೋಹರ ಗವಾಯಿಗಳು ಅಂಕಲಿಮಠ. ತಬಲವಾದಕರಾದ ಸಿದ್ಧಾರೂಢ ಲಿಂಗನಬಂಡಿ. ಸೇವಾಕತರುಗಳಾದ ಸಂಗಯ್ಯ ಸ್ವಾಮಿ ಮಹಾಂತೇಶ ಪತ್ರಕರ್ತರು ಮತ್ತು ಸೇವಾ ಸಮಿತಿಯ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ