ಗದಗ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿನ ಹಿಂದೆ ಸುರಿದ ಅತಿಯಾದ ಮಳೆಯಿಂದ ಈರುಳ್ಳಿ ಬೆಳೆದ ರೈತರನ್ನು ಹೈರಾಣಾಗಿಸಿದೆ.
ಈಗಾಗಲೇ ಈರುಳ್ಳಿ ಬೆಳೆ ಕಟಾವಿಗೆ ಬಂದಿದ್ದು ರೈತರೆಲ್ಲುರು ತಮ್ಮ ಜಮೀನುಗಳಲ್ಲಿ ಈರುಳ್ಳಿ ಬೆಳೆಯನ್ನು ಕಿತ್ತು ಹಾಕಿದ್ದು ಈಗ ಕೊಳೆತು ಹೋಗುವ ಸ್ಥಿತಿಗೆ ಬಂದಿದೆ.
ಮೊದಮೊದಲು ಉತ್ತಮ ಬೆಳೆ ಬಂದಿದ್ದರೂ ಅತಿಯಾದ ಮಳೆ ಹಾಗೂ ಬೆಲೆ ಇಳಿಕೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಇಳುವರಿ ಬರದಿದ್ದು ಅಳಿದುಳಿದ ಈರುಳ್ಳಿಯನ್ನು ಮಾರಾಟ ಮಾಡಲು ಬೆಂಗಳೂರಿನ ಯಶವಂತಪುರ ಕೃಷಿ ಮಾರುಕಟ್ಟೆಗೆ ಈರುಳ್ಳಿ ಲಾರಿ ತೆಗೆದುಕೊಂಡು ಹೋದರೆ ಬೆಲೆ ಕುಸಿತದಿಂದ ಈರುಳ್ಳಿ ಕೇಳುವವರೇ ಇಲ್ಲದಂತಾಗಿದ.
ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲಗೆ 500 ರಿಂದ 2000 ರೂಪಾಯಿ ದರವಿದೆ . ಕಳೆದ ಎರಡು ವರ್ಷಗಳ ಹಿಂದೆ ಇದೇ ಅವಧಿಯಲ್ಲಿ ಗರಿಷ್ಠ 16 ಸಾವಿರದಿಂದ 25 ರೂಪಾಯಿ ದರ ಇತ್ತು ಆದರೆ ಈ ವರ್ಷ ಇಷ್ಟು ಬೆಲೆ ಸಿಗುತ್ತಿಲ್ಲ ಇದರಿಂದ ರೈತರು ಕಂಗಾಲಾಗಿ ಹೋಗಿದ್ದಾರೆ.
ಈರುಳ್ಳಿ ಬೆತ್ತನಗೆ ವೆಚ್ಚ
1 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯಬೇಕಾದರೆ 1 ಕೆ ಜಿ ಈರುಳ್ಳಿ ಬೀಜಕ್ಕೆ 12 ನೂರುಪಾಯಿ ಸುರಿದಿದ್ದಾರೆ ಹಾಗೂ ಗೋಬರ, ಕ್ರಿಮಿನಾಶಕ,ಬೀತನೆಯ ಬಾಡಿಗೆ, ಕಳೆ ತೆಗೆಯುವುದು, ಕೂಲಿ ನಾಲಿ ಎಲ್ಲಾ ಸೇರಿ ಸುಮಾರು 15 ರಿಂದ 20 ಸಾವಿರ ರೂಪಾಯಿ ವೆಚ್ಚವಾಗಿದೆ ಹೀಗಾಗಿ ರೈತರು ಖಚ್ಚು ಮಾಡಿ ಹಣ ಬರುತ್ತಿಲ್ಲ .
ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಆಗ್ರಹ
ಸರ್ಕಾರ ಬೇಗನೆ ಎಚ್ಚೆತ್ತು ಕನಿಷ್ಠ 20 ಸಾವಿರ ರೂಪಾಯಿಗೆ ಬೆಂಬಲ ಬೆಲೆಗೆ ಖರಿದಿಸಬೇಕು . ಹಾಗೂ ಬೇರೆ ದೇಶಗಳಿಗೆ ಈರುಳ್ಳಿ ಪಾಸ್ಪೋರ್ಟ್ ನೀಡಿ ರಪ್ತು ಮಾಡುವ ಮೂಲಕ ದೇಶದ ರೈತರನ್ನು ಆರ್ಥಿಕವಾಗಿ ಹಿಂದುಳಿಯದಂತೆ ನೋಡಿಕೋಳಬೇಕು. ಈ ವರ್ಷ ಅಷ್ಟೇನೂ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಅಧಿಕವಾಗಿಲ್ಲ ಆದರೆ ಮಾರುಕಟ್ಟೆಯಲ್ಲಿ ನೆರೆಯ ರಾಜ್ಯಗಳ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು ನಮ್ಮ ರಾಜ್ಯದ ರೈತ ಈರುಳ್ಳಿ ಕೇಳುವವರಿಲ್ಲದಂತಾಗಿದೆ.
ಅದಕ್ಕೆ ಸರ್ಕಾರ ಬೇಗನೆ ಎಚ್ಚೆತ್ತು ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿಯನ್ನು ಖರೀದಿಸಬೇಕು ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಬಜಾಜ್ ಅಲ್ಲಿಯನ್ಸ್ ಕಂಪನಿ ಈರುಳ್ಳಿ ಬೆಳೆಗೆ ವಿಮೆ ತುಂಬಿಸಿಕೊಂಡಿದ್ದು ಬೆಗನೆ ಬೆಳೆ ಸಮೀಕ್ಷೆ ನಡೆಸಿ ಬೆಳೆ ವಿಮೆ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ ಆರ್ ನಾರಾಯಣರೆಡ್ಡಿ ಬಣದ ಗದಗ ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಆಗ್ರಹಿಸಿದ್ದಾರೆ .
ಈ ಕುರಿತು ಪತ್ರಿಕಾಗೋಷ್ಠಿಗೆ ಹೇಳಿಕೆ ನೀಡಿರುವ ಅವರು ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷರಾದ ಹುಚ್ಚೀರಪ್ಪ ಜೋಗಿನ ಬಾಳಪ್ಪ ಗಂಗರಾತ್ರಿ ಗಿರೀಶ್ ಗುಡ್ಲಾನೂರ ರಾಮಣ್ಣ ಖಂಡ್ರಿ ಶರಣಪ್ಪ ಜೋಗಿನ ಕೂಪ್ಪಳ ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಂದಪ್ಪ ಕೋಳುರ ಹಾಗೂ ಅನೇಕ ರೈತ ಮುಖಂಡರು ಆಗ್ರಹಿಸಿದ್ದಾರೆ .