ಹನೂರು :ಇತ್ತಿಚಿನ ದಿನಗಳಲ್ಲಿ ರೈತರಿಗೆ ಹಲವಾರು ಕಂಪನಿಗಳು ವಿವಿಧ ತಳಿಯ ಬೀಜಗಳನ್ನು ನೀಡುತ್ತಿದ್ದು ಅದರಂತೆ ಗಂಗಾ ಕಾವೇರಿ ಕಂಪನಿಯು ಸಹ ಉತ್ತಮ ಗುಣಮಟ್ಟದಿಂದ ಕೂಡಿದ ಜೋಳದ ತಳಿಯನ್ನು ಪ್ರತಿ ಹಳ್ಳಿಗಳಿಗೂ ನಿಡುತ್ತಿದ್ದು ಅದರಂತೆ ಸಿದ್ದೆಗೌಡ ಎಂಬ ರೈತರು ಬೆಳೆದಿದ್ದು ಇದರಿಂದ ಉತ್ತಮ ಇಳುವರಿಯನ್ನು ಸಹ ಪಡೆದಿದ್ದಾರೆ ಎಂದು ಮಾಜಿ ಶಾಸಕಿ ಪರಿಮಳ ನಾಗಪ್ಪ ತಿಳಿಸಿದರು
ಹನೂರು ಕ್ಷೇತ್ರ ವ್ಯಾಪ್ತಿಯ ಬಾಣೂರು ಗ್ರಾಮದಲ್ಲಿ ನಡೆದ ಗಂಗಾ ಕಾವೇರಿ ಕಂಪನಿಯ ಮೆಕ್ಕೆಜೋಳ ಜಿ ಕೆ 3218.ಹೊಸ ತಳಿಯ ಗುಣಮಟ್ಟದ ಜೋಳದಿಂದ ಉತ್ತಮ ಇಳುವರಿ ಪಡೆದ ರೈತರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ತಳಿಯನ್ನು ಬೆಳೆದ ರೈತರು ಉತ್ತಮವಾಗಿದೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು ಈಗಾಗಲೇ ಗಂಗಾ ಕಾವೇರಿ ಕಂಪನಿಯ gk 3218 ಎಂಬ ತಳಿಗೆ ಎಲ್ಲೆಡೆ ಉತ್ತಮವಾಗಿದೆ ರೈತರು ಆಸಕ್ತಿ ವಹಿಸಿ ಖರೀದಿತ್ತಿರುವುದನ್ನು ಕಾಣಬಹುದು ಅಲ್ಲದೆ ಕೀಟಾ ಬಾದೆ ನಿರ್ವಹಣೆ ಮತ್ತು ಉತ್ತಮ ಬೆಸಾಯದ ಕ್ರಮಗಳನ್ನು ರೈತರಿಗೆ ತಿಳಿಸಲಾಯಿತು ಎಂದು ಮೈಸೂರು ವಿಭಾಗದ ಕಂಪನಿಯ ಎ ಎಸ್ ಎಮ್ ರವರಾದ ಶಿವಾನಂದ ಪೂಜಾರಿಯವರು ತಿಳಿಸಿದರು ಇದೇ ಸಮಯದಲ್ಲಿ ಟಿ ಎಸ್ ಎಮ್ ರವಾರಾದ ಶಿವಾನಂದ ಕಂದಾಳ್ ,ಮಹೇಶ್ ಎಮ್ ,ಮದು ಜಿ ,ಸ್ಥಳೀಯ ರೈತರಾದ ಲೋಕೆಶ್ ,ರೇವಣಪ್ಪ ,ನಂಜೆಗೌಡ್ರು ,ರಾಚಯ್ಯ ,ಮತ್ತು ಕುಮಾರ್ ಇನ್ನಿತರರು ಹಾಜರಿದ್ದರು ವರದಿ: ಉಸ್ಮಾನ್ ಖಾನ್.