ಗಂಗಾವತಿ: ಜಗತ್ತನ್ನು ನೋಡದಿದ್ದರೂ ಜಗದ ಆಗು ಹೋಗುಗಳನ್ನು ಅಂತಃ ದೃಷ್ಟಿಯಿಂದ ನೋಡುವ ಶಕ್ತಿ ಅಂಧ ಪ್ರತಿಭೆಗಳಿಗೆ ಇರುತ್ತದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಕೊಪ್ಪಳ ಜಿಲ್ಲಾಧ್ಯಕ್ಷ ವೆಂಕಟೇಶ್ ಅಮರಜ್ಯೋತಿ ಹೇಳಿದರು.
ಅವರು ನಗರದ ಖಾಸಗಿ ಹೊಟೇಲ್‌ಲ್ಲಿ ಶ್ರೀಕುಮಾರೇಶ್ವರ ಸಂಗೀತ ಮತ್ತು ಲಲಿತಾ ಕಲಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಲಾಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಡಿತ್ ಗೋವಿಂದ ಬೊಮ್ಮಲಾಪುರ ಇವರ ದ್ವಿತೀಯ ಸ್ಮರಣೋತ್ಸವದ ಅಂಗವಾಗಿ ನಡೆಸಲಾಗುತ್ತೀರುವ ಈ ಕಾರ್ಯಕ್ರಮ ಅವಿಸ್ಮರಣೀಯ ಈ ಮೂಲಕ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನವಾಗಲಿ ನಮ್ಮ ಸಂಗೀತ ಪರಂಪರೆ ಮುಂದುವರೆಯಲಿ ಎಂದು ಕಿವಿಮಾತು ಹೇಳಿದರು.
ಬಿಜಪಿ ಮುಖಂಡ ಶ್ರವಣ ಕುಮಾರ ರಾಯ್ಕರ್ ಮಾತನಾಡಿ, ಸಾಂಸ್ಕೃತಿಕ ಕಲಾ ಮೇಳದ ಮೂಲಕ ಹಿಂದೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೆವು ಆ ಮೂಲಕ ಬತ್ತದ ಕಣಜವನ್ನು ಸಾಂಸ್ಕೃತಿಕ ನಗರಿಯನ್ನಾಗಿ ಮಾಡಲೇತ್ನಿಸಿದೆವು ಎಂದು ತಮ್ಮ ಗತ ದಿನಗಳನ್ನು ನೆನದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗು ಕಲಾವಿದ ನಾಗರಾಜ್ ಇಂಗಳಗಿ ಮಾತನಾಡಿ, ಸಂಗೀತಕ್ಕೆ ಕುಣಿಸುವ, ತಣಿಸುವ, ಅಳಿಸುವ, ನಗಿಸುವ, ದಣಿಸುವ ಶಕ್ತಿಯಿದೆ. ಮಳೆ ತರಿಸಿದ ಉದಾಹರಣಗಳು ಇತಿಹಾಸದಿಂದ ಗೊತ್ತಾಗುತ್ತವೆ ಎಂದರು.
ಸಮರ್ಥವಾಣಿ ಪತ್ರಿಕೆಯ ಉಪಸಂಪಾದಕ ಹರೀಷ್ ಕುಲಕರ್ಣಿ ಮಾತನಾಡಿ, ಆನೆಗೊಂದಿ ರಸ್ತೆಯ ದೇವಘಾಟ್ ರಸ್ತೆಯ ಮುಂದೆ ಶ್ರೀಪುಟ್ಟರಾಜ ಕವಿಗವಾಯಿಗಳ ವೃತ್ತ ನಿರ್ಮಾಣಕ್ಕೆ ಸಂಬAಧಿಸಿದAತೆ ಕಾನೂನು ರೀತಿಯ ಪ್ರಕ್ರಿಯೆಗಳು ನಡೆಯುತ್ತಿವೆ ಎಲ್ಲರೂ ಕೈಜೋಡಿಸಿ ಉತ್ತಮ ವೃತ್ತ ಮಾಡೋಣ ಎಂದು ತಿಳಿಸಿದರು.
ಸಾಧಕರಾದ ವೆಂಕಟಣ್ಣ ಚಿತ್ರಗಾರ್, ಶ್ರೀನಿವಾಸ್ ಕಸಬೆ, ಪ್ರಕಾಶ್ ಪಾಟೀಲ್, ಮಾರೆಪ್ಪ ಪಟ್ಟಣ ಸೆರಗು, ಶ್ರೀನಿವಾಸ್ ಉಪ್ಪಾರ್, ಅಕ್ಬರ್ ಸಾಬ್, ಸಂದೇಶ್ ಹಿರೇಮಠ, ಲಿಂಗರಾಜ್ ಜಾಲವಾಡಗಿ ಹಾಗು ಕೇಶವ ನಾಯಕ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಮನೋರಮಾ ಗೋವಿಂದರಾಜ್ ಇವರು ಪಂ.ಗೋವಿAದರಾಜ್ ಬೊಮ್ಮಲಾಪುರ ಇವರ ಭಾವಚಿತ್ರಕ್ಕೆ ಪುಷ್ಪರ್ಪಣೆ ಮಾಡಿದರು. ತಾಲೂಕಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹ್ಮದ್ ರಫಿ ಇದ್ದರು. ಪಂಚಾಕ್ಷರಿ ಬೊಮ್ಮಲಾಪುರ ನಿರೂಪಿಸಿದರು. ಬಳಿಕ ಅನೇಕ ಕಲಾವಿದರು ಸಂಗೀತದ ರಸದೌತಣ ಉಣಬಡಿಸಿದರು. ತಮ್ಮ ಪ್ರತಿಭೆ ಸಾಬೀತು ಪಡಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.