ಗಂಗಾವತಿ: ಗಂಗಾವತಿ ನಗರಸಭೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಇದೇ ತಿಂಗಳಾAತ್ಯದಲ್ಲಿ ತರಾತುರಿಯಲ್ಲಿ ಮಾಡಲು ಮುಂದಾಗಿರುವ ಶಾಸಕರ ಕ್ರಮವನ್ನು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಬಸವರಾಜ ಮ್ಯಾಗಳಮನಿಯವರು ಖಂಡಿಸಿದ್ದಾರೆ.
ಬಹುದಿನಗಳ ಹಿಂದೆಯೇ ಲೋಕಾರ್ಪಣೆಯಾಗಬೇಕಿದ್ದ ಕಟ್ಟಡ ಕೆಲವು ದಿನಗಳಿಂದ ತಟಸ್ಥವಾಗಿದ್ದು, ಕಾಮಗಾರಿ ಸರಿಯಾಗಿ ನಡೆಯದೇ ಅದರ ವೇಗವನ್ನು ಸಮಾರೋಪಾದಿಯಲ್ಲಿ ಹೆಚ್ಚಿಸಿ ಚುನಾವಣೆಗೂ ಪೂರ್ವದಲ್ಲಿ ಉದ್ಘಾಟನೆ ಮಾಡಿ ತಮ್ಮ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೆಗ್ಗಳಿಕೆ ಪಡೆಯಲು ಮುಂದಾಗಿದ್ದಾರೆAದು ಮ್ಯಾಗಳಮನಿ ಆರೋಪಿಸಿದ್ದಾರೆ.
ಆವರಣದಲ್ಲಿ ಟೈಲ್ಸ್ ಹಾಕದೇ ಕೇವಲ ಮಣ್ಣು ಹಾಕಿಸುವುದು ಮತ್ತು ನಗರಸಭೆಯ ವಾಹನಗಳು, ಸಿಬ್ಬಂದಿಯ ವಾಹನಗಳು, ಜನಪ್ರತಿನಿಧಿಗಳ ವಾಹನಗಳು, ಸಾರ್ವಜನಿಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡದಿರುವುದು ಸರಿಯಾದ ರೀತಿಯಲ್ಲಿ ಪೇಂಟಿAಗ್ ಇಲ್ಲದಿರುವುದು ಹಾಗೂ ಬಹುಮುಖ್ಯವಾಗಿ ವಿಕಲಚೇತನರು ತಮ್ಮ ಕೆಲಸಗಳಿಗೆ ಸಿಬ್ಬಂದಿಗೆ ಸಂಪರ್ಕಿಸಲು ರ‍್ಯಾಂಪ್/ಲಿಫ್ಟ್ ವ್ಯವಸ್ಥೆ ಇಲ್ಲದಿರುವುದರಿಂದ ಅವರಿಗೆ ತೊಂದರೆಯಾಗಲಿದೆ. ವಿಕಲಚೇತನರ ಬಗ್ಗೆ ಗಮನಹರಿಸದೇ ಕಟ್ಟಡ ತಯಾರಾಗಿದೆ. ಈ ಕುರಿತು ಕಾನೂನು ಹೋರಾಟ ಮಾಡಲಾಗುವುದು. ಇದಕ್ಕೆ ಸಂಬAಧಿಸಿದ ಅಧಿಕಾರಿಗಳು, ಇಂಜಿನೀಯರುಗಳ ಮೇಲೆ ಕ್ರಮಕ್ಕೆ ನ್ಯಾಯಾಲಯದ ಮೊರೆ ಹೋಗಲಾಗುವುದು. ಎರಡು ಅಂತಸ್ತಿನ ಮೇಲೆ ವಿಕಲಚೇತನರು ಹೇಗೆ ಹೋಗುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಸಕರು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಹದಗೆಟ್ಟ/ಧೂಳು ತುಂಬಿದ ರಸ್ತೆಗಳು, ಅಸಮರ್ಪಕ ಚರಂಡಿಗಳು, ನೀರಿಲ್ಲದೆ ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳು, ಕಿರುಕುಳ ಅನುಭವಿಸುತ್ತಿರುವ ಬೀದಿಬದಿ ವ್ಯಾಪಾರಿಗಳು, ಹೊಸಳ್ಳಿ ರಸ್ತೆಯಲ್ಲಿರುವ ನಿರಾಶ್ರಿತರ ನಿವೇಶನಗಳು ಹಂಚಿಕೆಯಾಗದೇ ಇರುವುದು, ೧೦ ವರ್ಷಗಳ ಹಿಂದೆಯೇ ನಿರ್ಮಾಣವಾದ ಸಿಟಿ ಮಾರ್ಕೇಟ್ ಆರಂಭಿಸದಿರುವುದು ಹೀಗೆ ಸಾಲುಸಾಲು ಸಮಸ್ಯೆಗಳು ಮತ್ತು ಅಂಗನವಾಡಿ ಸೇರಿದಂತೆ ವಿವಿಧ ಇಲಾಖೆಗಳು, ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದ್ದರೂ ಶಾಸಕರಿಗೆ ಇವುಗಳು ಕಾಣಿಸದೇ ಕೇವಲ ನಗರಸಭೆ ಕಟ್ಟಡ ಮಾತ್ರ ಕಾಣಿಸುತ್ತದೆ ಎಂದು ಪ್ರಕಟಣೆಯ ಮೂಲಕ ವ್ಯಂಗ್ಯವಾಡಿ, ಮೇಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಈ ಸಂದರ್ಭದಲ್ಲಿ ಶಾಸಕರನ್ನು ಒತ್ತಾಯಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.