ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ

ಗಂಗಾವತಿ: ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ ೬೬ನೇ ಪರಿನಿಬ್ಬಾಣ ದಿನದ ಅಂಗವಾಗಿ ದಿನಾಂಕ: ೦೬.೧೨.೨೦೨೨ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ, ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಮರಿಯಪ್ಪ ಕುಂಟೋಜಿ ಇವರು ಪ್ರಕಟಣೆಯಲ್ಲಿ ತಿಳಿಸಿದರು.
ಸ್ವಾತಂತ್ರö್ಯದ ಅಮೃತ ಮಹೋತ್ಸವ ಆಚರಣೆಯ ಈ ಸಂದರ್ಭದಲ್ಲಿ, ದೇಶ ಎಲ್ಲಾ ರಂಗಗಳಲ್ಲೂ ಅಧಃಪತನದತ್ತ ಸಾಗುತ್ತಿರುವುದನ್ನು ನಾವೆಲ್ಲಾ ಗಮನಿಸುತ್ತಿದ್ದೇವೆ. ಸಂವಿಧಾನದ ಆಶಯಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ನ್ಯಾಯ ಕನಸಿನ ಗಂಟಾಗಿದೆ. ನಿರುದ್ಯೋಗ ಯುವಜನಾಂಗವನ್ನು ಹತಾಶೆಗೆ ದೂಡಿದೆ. ಕೋಮು ರಾಜಕೀಯ ವಿಜೃಂಭಿಸುತ್ತಿದೆ. ನ್ಯಾಯ ಕೇಳುವವರು ದೇಶದ್ರೋಹಿಗಳಾಗುತ್ತಿದ್ದಾರೆ. ಪ್ರಗತಿಪರತೆ, ಜಾತ್ಯಾತೀತತೆ ಅಪಹಾಸ್ಯಕ್ಕೊಳಗಾಗುತ್ತಿವೆ. ಇಡೀ ದೇಶ ಕೋಮು ಅಂಚಿನ ಮಾಯಾಜಾಲದೊಳಗೆ ಸಿಲುಕಿ ಮತಿ ಭ್ರಮಣೆಗೊಳಗಾದಂತೆ ವರ್ತಿಸುತ್ತಿದೆ.
ಸಾವಿರಾರು ವರ್ಷಗಳಿಂದ ಇಡೀ ಭಾರತೀಯ ಸಮಾಜವನ್ನು ತುಳಿದು ಆಳಿದ ಬ್ರಾಹ್ಮಣ್ಯ ಮತ್ತೆ ತನ್ನ ಕರಾಳ ಹಿಡಿತವನ್ನು ಸಾಧಿಸುತ್ತಿದೆ. ಜನರನ್ನು ಜಾಗೃತಿಗೊಳಿಸಿ ಜಾತ್ಯಾತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದ್ದ ಜನಪರ ಚಳುವಳಿಗಳು ದುರ್ಬಲಗೊಂಡAತೆ ಕಾಣಿಸುತ್ತಿದೆ. ಇದರ ಪರಿಣಾಮವಾಗಿ ಇಲ್ಲಿನ ದುಡಿಯುವ ಜನಸಮುದಾಯಗಳಾದ ದಲಿತ, ರೈತ, ಕಾರ್ಮಿಕ, ಮಹಿಳಾ ಹಾಗೂ ಆದಿವಾಸಿ-ಬುಡಕಟ್ಟು ಜನ ಸಮುದಾಯಗಳು ಹಸಿವು, ಅಸ್ಪೃಶ್ಯತೆ, ಅನಕ್ಷರತೆ, ಕೊಲೆ-ಸುಲಿಗೆ, ದೌರ್ಜನ್ಯ, ಅತ್ಯಾಚಾರಕ್ಕೊಳಗಾಗಿ ಸಾವು-ನೋವುಗಳಿಂದ ನರಳುವಂತಾಗಿದೆ.
“ಬ್ರಾಹ್ಮಣ ಶ್ರೇಷ್ಠತೆ” ಪ್ರತಿಪಾದಿಸುವ ಚಾತುರ್ವರ್ಣ ವ್ಯವಸ್ಥೆಯ ಮರುಸ್ಥಾಪನೆಯೇ ಆರ್.ಎಸ್.ಎಸ್ ಮತ್ತು ಬಿಜೆಪಿಯ ಗುರಿಯಾಗಿರುವುದರಿಂದ, ಅದಕ್ಕೆ ಈ ದೇಶದ ದಲಿತ-ಆದಿವಾಸಿ-ಅಲೆಮಾರಿ-ಹಿಂದುಳಿದ-ಅಲ್ಪಸAಖ್ಯಾತ ಜನರಿಂದ ಬೆಂಬಲ ಸಿಗುವುದಿಲ್ಲ ಎಂಬ ಕಾರಣಕ್ಕೆ ಜನರನ್ನು ಮರಳು ಮಾಡಲು ಹೊಸ ವರಸೆ ಆರಂಭಿಸಿದ್ದಾರೆ. “ಹಿಂದುತ್ವ” ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಶತೃಗಳಂತೆ ಬಿಂಬಿಸಲಾಗುತ್ತಿದೆ. ಪಾಕಿಸ್ತಾನ, ಕಾಶ್ಮೀರ, ಮಂದಿರ-ಮಸೀದಿ, ಗೋರಕ್ಷಣೆ, ಸಿಎಎ-ಎನ್‌ಆರ್‌ಸಿ ಮುಂತಾದ ಹೆಸರುಗಳಲ್ಲಿ ಜನರ ಭಾವನೆ ಕೆರಳಿಸಿ ರಾಜಕೀಯ ದುರ್ಲಾಭ ಪಡೆಯುವ ತಂತ್ರಗಾರಿಕೆ ಮುಂದುವರೆದಿದೆ. ಜನರಿಗೆ ಸತ್ಯ ಹೇಳಿ ಜಾಗೃತಿ ಮೂಡಿಸಬೇಕಾದ ಮಾಧ್ಯಮಗಳು ಬಿಜೆಪಿ ಕೃಪಾಕಟಾಕ್ಷದ ಕೋಟ್ಯಾಧೀಶರ ಕೈ ವಶವಾಗಿದೆ.
ಬಿಜೆಪಿ ಸರ್ಕಾರವೇ ನೇರವಾಗಿ ಸರ್ಕಾರಿ ಮತ್ತು ಸಹಕಾರಿ ಕ್ಷೇತ್ರದ ಉದ್ದಿಮೆಗಳನ್ನು ಹಾಗೂ ಸಾರ್ವಜನಿಕ ಆಸ್ತಿಗಳನ್ನೆಲ್ಲ ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸುತ್ತಾ ಮೀಸಲಾತಿಯ ಅಸ್ತಿತ್ವವನ್ನೇ ನಾಶಗೊಳಿಸಿ, ಇನ್ನೊಂದೆಡೆ ಮೀಸಲಾತಿ ಹೆಚ್ಚಳದ ನಾಟಕವನ್ನೂ ಆಗಿ ಜನರನ್ನು ಮರಳು ಮಾಡುತ್ತಿದೆ. ಅವೈಜ್ಞಾನಿಕ ನೋಟು ಅಮಾನ್ಯೀಕರಣದಿಂದ ದೇಶದ ಅರ್ಥವ್ಯವಸ್ಥೆಯೇ ಕುಸಿದು ಬಿದ್ದಿದ್ದು ಜನರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಇಂಥ ಕರಾಳ ದುರಿತದ ದಿನಗಳಲ್ಲಿ ಸಮಾನತೆ, ಸೋದರತೆ ಮತ್ತು ಸಾಮರಸ್ಯವನ್ನು ಬಯಸುವ ನಾವೆಲ್ಲಾ ಏನು ಮಾಡಬೇಕು?
ನಾವು ಇದನ್ನು ಪ್ರಬಲವಾಗಿ ಪ್ರತಿಭಟಿಸಬೇಕು. ಬೆಂಗಳೂರಿನಲ್ಲಿ ೨೦೨೨ ನೇ ಡಿಸೆಂಬರ್-೬ ರಂದು ನಡೆಯಲಿರುವ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಮರೋಪಾದಿಯಲ್ಲಿ ಸೇರೋಣ. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹಾಗೂ ಅಂಬೇಡ್ಕರ್ ಅವರ ಅವಿರತ ಹೋರಾಟದ ಫಲವಾಗಿ ದಕ್ಕಿಸಿಕೊಂಡಿರುವ ನಮ್ಮ ಎಲ್ಲಾ ಹಕ್ಕು ಹಾಗೂ ಅವಕಾಶಗಳನ್ನು ಉಳಿಸಿಕೊಳ್ಳಲು ಶಪಥ ಮಾಡೋಣ. ಪ್ರಬುದ್ಧ ಭಾರತವನ್ನು ಕಟ್ಟೋಣ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಕಂಟೆಪ್ಪ ಹಣವಾಳ, ಡಿ. ಭೋಜಪ್ಪ, ಬಸವರಾಜ ಚಲುವಾದಿ, ಹಂಪೇಶ ಹರಿಗೋಲು, ಭಾರಧ್ವಾಜ, ಕೆ. ತಿಮ್ಮಣ್ಣ, ನಾಗರಾಜ ಸಂಗಾಪುರ, ಪರಮಾನಂದ ರಾಂಪುರ, ವಸಂತರಾವ್ ಸಂಗಾಪುರ, ರಾಮಣ್ಣ ತೆಗ್ಗಿನಮನಿ, ಯಮನೂರಪ್ಪ ಮರಳಿ, ಮೋಹನ ವಿನೋಬನಗರ, ಡಿ. ಹನುಮಂತ, ಹನುಮಂತ ಮೂಳೆ, ರಾಜು ಗುಂಡೂರು, ಹುಲುಗಪ್ಪ ಮಾಸ್ತರ್, ಮಾಗಿ ಹುಲುಗಪ್ಪ, ರವಿ ಆರತಿ, ರವಿ ವೀರೇಶ, ಹುಲುಗಪ್ಪ ಕಿರಿಕಿರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ