ಕೊಪ್ಪಳ, 19 ಜಿಲ್ಲೆಯ ಗಂಗಾವತಿ ನಗರದ ಉತ್ಸಾಹಿ ಯುವಕ ಪತ್ರಕರ್ತ ಹಾಗೂ, ಗಡಿ ಕನ್ನಡಿಗ ರವಿ ಕಲ್ಯಂ ಅವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು, ಸದರಿ ಗಡಿ ಕನ್ನಡಿಗ ರವಿ ಕಲ್ಯಂ ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿಯಲ್ಲಿ ಪತ್ರಕರ್ತನಾಗಿ ಹಾಗೂ ಆಂಧ್ರ ಭಾಗದ ಗಡಿ ಪ್ರದೇಶಗಳಲ್ಲಿ ಕನ್ನಡದ ರಕ್ಷಣೆಗಾಗಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಾಕಷ್ಟು ಹೋರಾಟ ಮಾಡಿ ಯಶಸ್ವಿ ಯಾಗಿದ್ದನ್ನು ಗಮನಿಸಿದ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಹೊರನಾಡು ಗೋವಾ ಕನ್ನಡಿಗರ ಸಮ್ಮೇಳನದಲ್ಲಿ ಕರುನಾಡು ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು, ಗೋವಾದ ಬೀಚ್ಚೂಲಿ ನಗರದಲ್ಲಿ ಕರ್ಮ ಭೂಮಿ ಕನ್ನಡ ಸಂಘ ಬಿಚ್ಚೋಲಿ ಗೋವಾ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಜರುಗಿದ ಕನ್ನಡಿಗರ ಹದಿನಾಲ್ಕನಿಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು, ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತವರು ಸಮ್ಮೇಳನವನ್ನು ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ದಶಕಗಳಿಂದ ವಾಸವಾಗಿರುವ ಕನ್ನಡಿಗರಿಗೆ ಸರ್ಕಾರ ರಕ್ಷಣಾ ಕವಚವಾಗಿ ಸಂಪೂರ್ಣ ಸಹಕಾರ ನೀಡುತ್ತ ಬಂದಿದೆ ಯಾವುದೇ ಕಾರಣಕ್ಕೂ ಇಲ್ಲಿ ವಾಸಿಸುವ ಕನ್ನಡಿಗರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು, ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು, ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಸಮ್ಮೇಳನದ ಸರ್ವ ಅಧ್ಯಕ್ಷರಾಗಿದ್ದರು ಗೋವಾ ರಾಜ್ಯದ ಶಾಸಕರು ಜನ ಪ್ರತಿನಿಧಿಗಳು ಸೇರಿದಂತೆ ಸಮ್ಮೇಳನದ ವ್ಯವಸ್ಥಾಪಕ ಹನುಮಂತರೆಡ್ಡಿ ಶಿರೂರ್ ಮಹೇಶ್ ಬಾಬು ಸುರ್ವೆ ಸೇರಿದಂತೆ ಪದಾಧಿಕಾರಿಗಳು ಹಿತೈಷಿಗಳು ಕನ್ನಡದ ಮನಸುಗಳು ಪಾಲ್ಗೊಂಡಿದ್ದರು ಇದಕ್ಕೂ ಮುಂಚೆ ಸಮ್ಮೇಳನ ಅಧ್ಯಕ್ಷರ ಭವ್ಯ ಮೆರವಣಿಗೆ ವಿವಿಧ ಜನಪದ ಕಲಾತಂಡದಿಂದ ಸಂಭ್ರಮದಿಂದ ಜರಗಿತು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.