ಹನೂರು :ತಾಲ್ಲೂಕಿನ ನಾಗನತ್ತ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವು ಹನೂರಿನ ತಹಸಿಲ್ದಾರ್ ಗ್ರೇಡ್ 2 ರವರಾದ ಕೆ ಧನಂಜಯ್ ರವರ ನೇತೃತ್ವದಲ್ಲಿ ನಡೆಯಿತು.ಈ ವೇಳೆ ಮಾತನಾಡಿದ ತಹಶೀಲ್ದಾರ್ (ಗ್ರೇಡ್ 2) ರವರಾದ ಕೆ ಧನಂಜಯ್ ರವರು ಸಾಮಾಜಿಕ ಭದ್ರ ಯೋಜನೆ ಅಡಿ ಪಿಂಚಣಿಯನ್ನು ನೀಡಲಾಗುತ್ತದೆ, ಅಂಗವಿಕಲರಿಗೆ,ಇಂದಿರಾ ಗಾಂಧಿ ಪಿಂಚಣಿ ಯೋಜನೆ,ಮನಸ್ವಿನಿ ಪಿಂಚಣಿ ಯೋಜನೆ, ವೃದ್ಧರಿಗೆ ಪಿಂಚಣಿ ಇರುತ್ತದೆ.
60 ವರ್ಷ ಮೇಲ್ಪಟ್ಟ ವೃದ್ಧರಿಗೆ 800ರೂ ಪ್ರತಿ ಮಾಸಿಕ ಸಿಗುತ್ತದೆ.65 ವರ್ಷ ಮೇಲ್ಪಟ್ಟವರಿಗೆ 1200ರು ಪಿಂಚಣಿ ಸಿಗುತ್ತದೆ.ಅಂಗವಿಕಲರಿಗೆ 45% ರವರಿಗೆ 800 ರೂ,75% ರವರಿಗೆ 1400 ರೂ ಮಾಸಿಕ ಸಿಗುತ್ತದೆ. ಸಂದ್ಯಾ ಸುರಕ್ಷಾ ಯೋಜನೆ ಅಡಿ 65 ವರ್ಷ ಮೇಲ್ಪಟ್ಟವರಿಗೆ 1200 ರೂ ಪಿಂಚಣಿ ಸಿಗುತ್ತದೆ.
ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಹನೂರಿನಿಂದ ನಾಗನತ್ತದವರೆಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ರಸ್ತೆಯಲ್ಲಿ ಮಧ್ಯೆ ಇರುವ ಹಳ್ಳವನ್ನ ಸರಿಪಡುಸಿವಂತೆ ಮನವಿ ಮಾಡಿದರು.
ಇದೆ ವೇಳೆ ಪಿಂಚಣಿ ಬಾರದ ವೃದ್ದರಿಂದ 20 ಅರ್ಜಿಗಳನ್ನು ಸ್ವೀಕರಿಸಿದರು.
ಇದೆ ಸಂದರ್ಭದಲ್ಲಿ ಮಾದೇಶ್ ,ಗ್ರಾ.ಪಂ.ಅಧ್ಯಕ್ಷರು ಶ್ರೀಮತಿ ಮಂಜುಳಾ ಪ್ರಭುಸ್ವಾಮಿ,ಗ್ರಾ.ಪಂ ಸದ್ಯಸರು ಜಯಮ್ಮ ಹಾಗೂ ಊರಿನ ಮುಖಂಡರಾದ ಮಾದೇವ,ಗುರುಸ್ವಾಮಿ ಮುಖ್ಯಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.
-ವರದಿ ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.