ನನ್ನ ಪ್ರೀತಿಯ ಕೃಷ್ಣಸುಂದರಿ
ನೀನು ನನ್ನ ಬಾಳಿಗೆ ಬಂದೆ ಹುಣ್ಣಿಮೆಯ ರಾತ್ರಿಯಲಿ ಹಾಲು ಚೆಲ್ಲುವ ಚಂದಿರನಂತೆ
ನೀನು ನಗುವಾಗ ಸೂರ್ಯನ ಬಿಸಿಲಿನಂತೆ ಹೊಳೆಯುವೆ ಪಳ ಪಳ
ನಿನ್ನ ಮನಸು ಕೆನೆ ಹಾಲಿನಂತೆ ಶ್ರೇಷ್ಠ
ನೀನು ಸ್ವಲ್ಪ ಕಪ್ಪು ಅದರೂ ಮನಸ್ಸು ಬೆಣ್ಣೆಯಂತೆ ಬಿಳುಪು
ನಿನ್ನ ಮೇಲೆ ನನಗೆ ವಿಶೇಷ ಪ್ರೀತಿ
ನೀನು ತಿರುಗಿಸಬೇಡ ನನ್ನ ನೋಡಿ ಮೂತಿ
ನೀನು ಒಂತರಾ ಮಲೆನಾಡ ಅಡಿಕೆ
ನಾನು ಮೈಸೂರು ವಿಳ್ಯದೆಲೆ
ಹೋಗಬೇಡವೆ ನನ್ನ ಬಿಟ್ಟು ಕೃಷ್ಣಸುಂದರಿ
ನನ್ನ ಪಾಲಿನ ದೇವತೆ ನೀನೆ ಕೃಷ್ಣೆ
ನಿನ್ನ ನನ್ನ ನಡುವೆ ಆಯ್ತು ಪ್ರೀತಿ
ನನ್ನ ಸೇರಲು ನಿನಗೇಕೆ ಭೀತಿ
ನಾನು ಬರಗಾಲದಲಿ ಬರುವ ಮಳೆಯಂತೆ
ನೀನು ಮಳೆಗಾಗಿ ಕಾದಿರುವ ಇಳೆಯಂತೆ
ಬಿಡದೆ ಸುರಿಯುವ ಜಿಟಿ ಜಿಟಿ ಮಳೆಯಂತಾಗಿದೆ ನನ್ನ ಮನಸು
ನನ್ನ ಹೃದಯದ ಮೇಲೆ ಹೆಜ್ಜೆ ಇಟ್ಟು ಕೊಲ್ಲಬೇಡ ಗೆಳತಿ
ನೀನು ದಿನವೆಲ್ಲ ಬಿಸಿನಲ್ಲಿದ್ದರೂ ಬದಲಾಗದ ಬಣ್ಣ
ಬೆಳ್ಳಗಿರುವ ನನಗೆ ಆಗಾಗ ಬಳಿಯಬೇಕು ಸುಣ್ಣಬಣ್ಣ
ನನ್ನೆದೆಯ ಗೂಡಿನಲ್ಲಿ ಜೋಪಾನವಾಗಿ ನೋಡಿ ಕೊಳ್ಳುವೆ ಬಾರೆ ನನ್ನ
ಕೃಷ್ಣ ಸುಂದರಿ
-ನಿನ್ನ ಪ್ರೀತಿಯ
ವಿ. ಶ್ರೀನಿವಾಸ.ವಾಣಿಗರಹಳ್ಳಿ
ದೊಡ್ಡಬಳ್ಳಾಪುರ
