ಇಂಡಿ:ಭೀಮರಾಯ ಕಟ್ಟಿಯವರು ತಡವಲಗಾ ಗ್ರಾಮದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರು 2023 ಕ್ಕೆ ಇಂಡಿ ಮತಕ್ಷೇತ್ರದ ಶಾಸಕರಾಗಬೇಕೆಂದು,ಇಂಡಿಯ ಅಯ್ಯಪ್ಪ ಸ್ವಾಮಿ ಸನ್ನಿಧಿಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದವರೆಗೆ ಪಾದಯಾತ್ರೆ ಮೂಲಕ ಇಂದು 1.12.22ರಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಹಾಗೂ ನೂರಾರು ಕಾರ್ಯಕರ್ತರು ಅವರನ್ನು ಬಿಳ್ಕೋಡಲಾಯಿತು.ನಂತರ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ ಯಾವ ಜನ್ಮದ ಪುಣ್ಯವೋ ಏನೋ ನಾನು ಶಾಸಕ ಆಗಬೇಕು ಎಂದು ಇಂಡಿ ನಗರದಿಂದ ಸುಮಾರು 1400 ಕಿ.ಮೀ ದೂರದ ಅಯ್ಯಪ್ಪ ಸ್ವಾಮಿ ದೇವಾಲಯದವರೆಗೆ ಪಾದಯಾತ್ರೆ ಮೂಲಕ ನನ್ನ ಗೆಲುವಿಗೆ ಸಂಕಲ್ಪ ಮಡಿದ್ದಾರೆ ಅವರ ಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು,ಮಾಲಾದಾರಿ ಭೀಮರಾಯ ಕಟ್ಟಿ ಮಾತನಾಡಿ 2023ಕ್ಕೆ ಇಂಡಿ ಮತಕ್ಷೇತ್ರದ ಶಾಸಕರಾಗಬೇಕು ಮತಕ್ಷೇತ್ರದ ರಸ್ತೆಗಳು, ಸಮಗ್ರ ನೀರಾವರಿ ಯೋಜನೆ ಅನುಷ್ಠಾನ , ಹಾಗೂ ಬಡವರ ಪರವಾದ ಆಡಳಿತ ಮಾಡಬೇಕು ಎಂದು ಮಾತನಾಡಿದರು,ಇದೆ ಸಂದರ್ಭದಲ್ಲಿ,ಗುರುಸ್ವಾಮಿಗಳಾದ ರಾಯಲ್ ಸ್ವಾಮಿ,ಗುರುಸ್ವಾಮಿ ಕುಪೇಂದ್ರ ಸ್ವಾಮಿ,ಶ್ರೀ ಶೈಲಗೌಡ ಪಾಟೀಲ ಸಿದ್ದು ಡಂಗಾ,ಅಯೂಬ್ ನಾಟೀಕರ,ಸಿದ್ದಪ್ಪ ಗುನ್ನಾಪೂರ,ರಾಜು ಮುಲ್ಲಾ,ನಿಯಾಝ್ ಅಗರಖೇಡ,ಡಾ ರಮೇಶ ರಾಠೋಡ,ಫಜಲು ಮುಲ್ಲಾ,ಸದ್ದಮ ಕೋಟ್ನಾಳ,ಶ್ರೀಶೈಲ ಪೂಜಾರಿ,ಶಾಂತಯ್ಯ ಪತ್ರಿಮಠ,ಮಂಜು ಬಡಿಗೇರ,ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ.ಅರವಿಂದ್ ಕಾಂಬಳೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.