ಇಂಡಿ:ಸಾರ್ವಜನಿಕರು ತಮ್ಮ ಆರೋಗ್ಯದ ಜೊತೆಗೆ ದೇಹದ ಅಂಗಾಂಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಳ್ಳಬೇಕು ಅದರಲ್ಲಿ ವಿಶೇಷವಾಗಿ ದಂತಗಳ ಬಗ್ಗೆ ಕಾಳಜಿ ವಹಿಸಿ ಆಹಾರ ಸೇವನೆ ನಂತರ ಹಲ್ಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಆಹಾರ ಕಣಗಳು ಹಲ್ಲುಗಳಲ್ಲಿ ಸಿಲುಕಿ ಕೊಳ್ಳದಂತೆ ಮಾಡಿ ನೀರನ್ನು ಮುಕ್ಕಳಿಸಿ ಬಾಯಿಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ಡಾಕ್ಟರ್ ಹಿರೇಮಠ್ ಅವರು ಸಲಹೆ ನೀಡಿದರು.
ಅವರು ಬಾಗಲಕೋಟ ಬಸವೇಶ್ವರ ವಿದ್ಯಾ ಸಂಸ್ಥೆ ಪಿ ಎಮ್ ನಾಡ ಗೌಡ್ ದಂತ ವೈದ್ಯಕೀಯ ಕಾಲೇಜು ಹಾಗೂ ಪಟ್ಟಣದ ಏಂಜಲ್ಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕ್ರೈಸ್ತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ದಂತ ಪರೀಕ್ಷೆ ಹಾಗೂ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಹಕ್ಕೆ ಅಪಾಯಕಾರಿ ಆಗುವಂತ ಪಾನ್ ಮಸಾಲ ತಂಬಾಕು ಮಿಶ್ರಿತ ಅಡಿಕೆಗಳು ಹಾಗೂ ತಂಪಾದ ಪಾನೀಯ ಗಳು ಸೇವಿಸಬಾರದು ಎಂದು ಡಾಕ್ಟರ್ ಹಿರೇಮಠ್ ಮಕ್ಕಳಿಗೆ ಸಲಹೆ ನೀಡಿದರು.
ದಂತ ವೈದ್ಯಕೀಯ ಕಾಲೇಜಿನ ವೈದ್ಯರು ಮಕ್ಕಳ ದಂತ ಪರೀಕ್ಷೆ ಮಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಡಿ ಇ ಸಂಸ್ಥೆಯ ಅಧ್ಯಕ್ಷ ಸ್ಟಿಫ್ಫನ್ ಶಿರೋಮಣಿ ವಹಿಸಿದ್ದರು ಪ್ರಾ ಐ ಸಿ ಪೂಜಾರ ಹಾಗೂ ಏಂಜಲ್ಸ್ , ಕ್ರೈಸ್ತ ಶಾಲೆಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಉಮ್ರಾನ ಮುಜಾವರ್ ನಡೆಸಿದರೆ ಮಮ್ಮದ್ ಗೌಸ್ ಬಗಲಿ ವಂದಿಸಿದರು.
ವರದಿ:ಅರವಿಂದ್ ಕಾಂಬಳೆ
