ಜೆ.ರಾಯಪ್ಪ ವಕೀಲರು ಮತ್ತು ಅವರ ಅಸೋಸಿಯೇಟ್ಸ್ ಸದಸ್ಯರು ಶನಿವಾರ ವಕೀಲರ ದಿನಾಚರಣೆ ನಿಮಿತ್ತವಾಗಿ ಸದಸ್ಯರೆಲ್ಲರೂ ಸಿಂಧನೂರು ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜೆ.ರಾಯಪ್ಪ ವಕೀಲರು ಮಾತನಾಡಿ ಇಂದು ವಕೀಲರ ದಿನಾಚರಣೆ ಪ್ರಯುಕ್ತ ನಾವುಗಳೆಲ್ಲರೂ ಅಮರ ಶ್ರೀ ಆಲದ ಮರವನ್ನು ವೀಕ್ಷಸಿಸಲು ಬಂದಿದ್ದೇವೆ ಈ ಒಂದು ಶುಭದಿನದಂದು ಅಮರೇಗೌಡ ಮಲ್ಲಾಪೂರ ಅವರ ಪರಿಸರ ಕಾಳಜಿ ಕಾರ್ಯ ಗುರುತಿಸಿ ಅವರಿಗೆ ಅಭಿನಂದನೆಗಳನ್ನು ತಿಳಿಸಲು ಬಂದಿದ್ದೇವೆ. ಸಿಂಧನೂರು ನಗರ ಅತ್ಯಂತ ಬಿಸಿಲು ನಗರವಾಗಿತ್ತು ಆದರೆ ಇಂದು ಅಮರೇಗೌಡ ಮಲ್ಲಾಪೂರ ಅವರ ಮೂಲಕ ಇಂದು ಸಿಂಧನೂರು ಹಸಿರು ನಗರವಾಗಿ ಮಾರ್ಪಾಡುವಾಗಿದೆ ಇದಕ್ಕೆ ಅವರ ಪರಿಶ್ರಮ ಅಪಾರ ಇವರ ಜೊತೆಗೆ ಸದಸ್ಯರು ಕೂಡ ಕೈಜೋಡಿಸಿರುವುದು ತುಂಬಾ ಒಳ್ಳೆಯ ಕಾರ್ಯ. ಪರಿಸರ ಚೆನ್ನಾಗಿ ಇದ್ದರೆ ನಾವು ಚೆನ್ನಾಗಿರುತ್ತೇವೆ ಆರೋಗ್ಯವಾಗಿರುತ್ತೇವೆ ಇಂತಹ ಒಂದು ಪುಣ್ಯ ಕಾರ್ಯದಲ್ಲಿ ಅಮರೇಗೌಡ ಮಲ್ಲಾಪೂರ ಅವರು ತೊಡಗಿರುವುದು ಒಂದು ಉತ್ತಮ ಬೆಳವಣಿಗೆ. ಪರಿಸರವನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಫಣ ತೊಡಬೇಕು.ಇಂತವರಿಗೆ ನಾವು ನೀವುಗಳೆಲ್ಲರೂ ಸಹಕಾರ ನೀಡೋಣ ವನಸಿರಿ ತಂಡ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಶುಭ ಆರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಜೆ.ರಾಯಪ್ಪ ವಕೀಲರು ಮತ್ತು ಅಸೋಸಿಯೇಟ್ಸ್ ಸದಸ್ಯರಾದ ಕೆ.ರವಿ,ವೀರಭದ್ರಗೌಡ,ಜಡಿಯಪ್ಪ ನಾಯಕ ಬಪ್ಪೂರ,ಕೆ.ಲಕ್ಷ್ಮಣ್ಣ ನಾಯಕ, ಸೆಮಿವುಲ್ಲಾ ಪಟೇಲ,ಅಂಬಣ್ಣ ನಾಯಕ ಗೊಬ್ಬರಕಲ್, ಶರಣಪ್ಪ ಉಮಲೂಟಿ, ಯಮನೂರಪ್ಪ ಬೇರ್ಗಿ,ಸಿದ್ರಾಮೇಶ ನಾಯಕ,ಶ್ರೀಮತಿ ಸುವರ್ಣ, ಮಲ್ಲನಗೌಡ ಬಪ್ಪೂರು, ಇನ್ನಿತರರು ಉಪಸ್ಥಿತರಿದ್ದರು.