ಅಮರ ಶ್ರೀ ಆಲದ ಮರಕ್ಕೆ ವಾಲ್ಮೀಕಿ ಗುರು ಪೀಠ ಶ್ರೀಗಳ ಭೇಟಿ
ಸಿಂಧನೂರು ನಗರದ ನೀರಾವರಿ ಇಲಾಖೆಯ ಆವರಣದಲ್ಲಿನ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಶಿಡ್ಲಕೋಣ,ಅವಣಿ,ನಿಡಗಲ್ಲು,ಯಯದ್ದಲದೊಡ್ಡಿ ಪೂರ್ಣಾನಂದ ಮಠದ ವಾಲ್ಮೀಕಿ ಗುರುಪೀಠ ಪರಮ ಪೂಜ್ಯ ಸದ್ಗುರು ಶ್ರೀ ಶ್ರೀ ಶ್ರೀ ಸಂಜಯಕುಮಾರನಂದ ಮಹಾಸ್ವಾಮಿಗಳು ಇಂದು ಭೇಟಿ ನೀಡಿ ವೀಕ್ಷಿಸಿದರು
ಪರಮ ಪೂಜ್ಯ ಶ್ರೀಶ್ರೀಶ್ರೀ ಸಂಜಯಕುಮಾರನಂದ ಮಹಾಸ್ವಾಮಿಗಳು ಯದ್ದಲದೊಡ್ಡಿ ಮಾತನಾಡಿ ಮಾನವನಿಗೆ ಬೇಕಾದಂತಹ ಸಸ್ಯಜೀವಿಯೊಂದಿಗೆ ಮೊತ್ತೊಂದು ಜೀವಿಯಾಗಿ ಪರಿಸರ ಪ್ರೇಮಿಯಾಗಿ ಮಾಡುವ ಕೆಲಸ ಲಕ್ಷದಲ್ಲಿ ಒಬ್ಬರು ಮಾಡುವಂತಹ ಸೇವೆ ಈ ಸೇವೆ ಮಾಡು ಭಾಗ್ಯ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರಿಗೆ ಲಭಿಸಿದೆ.ಯಾಕೆಂದರೆ ಇಂದಿನ ಅಧುನಿಕತೆಯಲ್ಲಿ ಕೈಗಾರಿಕೆಗಳು,ಉದ್ದಿಮೆಗಳಿಂದ ಆಗುತ್ತಿರುವ ಪರಿಸರ ಹಾನಿಗೆ ಸಾಕ್ಷ್ಯಭೂತರಾಗಿ ಪರಿಸರವನ್ನು ಹಾಳು ಮಾಡಬಾರದು, ಪರಿಸರವನ್ನು ರಕ್ಷಣೆ ಮಾಡಬೇಕು, ಹಸಿರು ಇದ್ದರೆ ನಮಗೆ ಉಸಿರು, ಹಸಿರು ಇದ್ದರೆ ನಮಗೆ ಜಯ,ಹಸಿರು ಇದ್ದರೆ ನಮಗೆ ಜಲಸಂಪತ್ತು,ಅರಣ್ಯ ಸಂಪತ್ತು ಈ ಎಲ್ಲದಕ್ಕೂ ಸಾಕ್ಷಿಯಾಗಿರುವಂತಹ ಕಾರ್ಯ ಆಗಲಿಕ್ಕೆ ಅರಣ್ಯ ಸಂಪತ್ತು ಎಂದು ಅರಿತುಕೊಂಡಿರುವ ಅಮರೇಗೌಡ ಮಲ್ಲಾಪೂರ ಅವರು ಅದ್ಭುತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಮಹಾಭಾರತ, ರಾಮಾಯಣದ ಸತ್ಯಯುಗದ ಕಾರ್ಯಗಳಲ್ಲಿ ಕಲಿಯುಗದ ಈ ಪ್ರಾಪ್ತವು ತೆಗೆದುಕೊಂಡಾಗ ಅರಣ್ಯಕ್ಕೆ ಎಷ್ಟು ಬೆಲೆ ಇದೆ,ಯಾವ ಅರಣ್ಯಕ್ಕೆ ನೈವಿಶ ಅರಣ್ಯ ಅಂತ ಕರೆಯುತ್ತೇವೆ.ಜಗತ್ತಿನಲ್ಲಿ ಅಲ್ಲದೇ 16ಲೋಕಕಗಳಿಗೆ ಬೇಕಾದಂತಹ ನೈವಿಶ ಅರಣ್ಯ ಹಾಗೂ ಅದರ ಔಷಿಕ ಮತ್ತು ವಿಶ್ವಾಮಿತ್ರರಾಗಲಿ ಎಲ್ಲಾ ಸಪ್ತ ಋಷಿಗಳು ಬದುಕಿ ಬಾಳಿದಂತಹ ಮಹಾನ್ ಹಾಗೂ ಶ್ರೇಷ್ಠ ವ್ಯಕ್ತಿಗಳ ತಪೋಭೂಮಿಯಾಗಿದೆ.ಇಂತಹ ಒಂದು ತಪೋಭೂಮಿಯಾಗಿರು ಭಾರತ ದೇಶದಲ್ಲಿ ನಾವು ಅರಣ್ಯಕ್ಕೆ ಎಷ್ಟು ಬೆಲೆಕೊಡುತ್ತೇವೆ,ವನಸಿರಿಗೆ ಎಷ್ಟು ಬೆಲೆ ಕೊಡುತ್ತೇವೆ,ಅರಣ್ಯ ಸಂಪತ್ತಕ್ಕೆ ಎಷ್ಟು ಬೆಲೆ ಕೊಡುತ್ತಿದ್ದೀವಿ ಎನ್ನುವುದಕ್ಕೆ ಆವತ್ತಿನ ಸಪ್ತ ಋಷಿಗಳಾಗಿರಲಿ,ಮಹಾತ್ಮರಾಗಿರಲಿ,ಸಾಕಷ್ಟು ಸಾಹಿತಿಗಳಾಗಿರಲಿ,ದೇವ ಋಷಿಗಳಾಗಿ ಎಲ್ಲರೂ ಅತೃಮುನಿ ಆದಿಯಾಗಿ, ಭಾರತ ದ್ವಜರಾಜರಾಗಿ ವಿಶ್ವಾಸ ಮಿತ್ರ,ವಶೀಷ್ಠರ ಅಂಗರಸ,ಎಲ್ಲಾ ಮಹಾತ್ಮರು ಕೂಡ ಅರಣ್ಯದಲ್ಲಿ ಬದುಕಿ ಋಷ್ಯಾಶ್ರಮ ತಿಳಿದುಕೊಂಡು ಮಾಡಿದರೆ ಅದು ಅರಣ್ಯದಲ್ಲಿ ಶ್ರವಿಸಿ ಮಾಡಿದಂತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ಅಮರೇಗೌಡ ಮಲ್ಲಾಪೂರ ಅವರಿಗೆ ಸನ್ಮಾನಿಸಿ ಆರ್ಶೀವದಿಸಿದರು .