ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೇವರ್ಗಿ: ಕನ್ನಡ ಸಾಹಿತ್ಯ ಸಮ್ಮೇಳನ

ಜೇವರ್ಗಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಜೇವರ್ಗಿ ವತಿಯಿಂದ ಜೇವರ್ಗಿಯಲ್ಲಿ ಆರನೇಯ ತಾಲ್ಲೂಕ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 03-12 -2022 ರಂದು ಬಹಳ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಜೇವರ್ಗಿ ತಾಲ್ಲೂಕಿನ ಶಾಸಕರಾದ ಸನ್ಮಾನ್ಯ ಡಾಕ್ಟರ್ ಅಜಯ್ ಸಿಂಗ್ ಮಾನ್ಯ ಶಾಸಕರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದ ನಂತರ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧದಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದವರೆಗೆ ಸನ್ಮಾನ್ಯ ಡಾಕ್ಟರ್ ಅಜಯ್ ಸಿಂಗ್ ಮಾನ್ಯ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು ಬೆಂಗಳೂರು ಮತ್ತು ಮೆರವಣಿಗೆಯ ಉದ್ಘಾಟಕರಾದಂತ ಶ್ರೀ ರಾಜಶೇಖರ ಬಿ ಸಾಹೂ ಸೀರಿಯವರು ವಹಿಸಿದರು.
ಸಾಹಿತ್ಯ ಸಮ್ಮೇಮೇಳನದ ತಂಡಗಳಾದ ಕೋಲಾಟ,ಡೊಳ್ಳಿನ ನೃತ್ಯ,ಬಜನಾ ಮೇಳ, ಭೂತೇ ನೃತ್ಯ ,ಕರಡಿ ಮೊಜಲು,ಚೌಡ್ಕಿ ನೃತ್ಯ, ಪುರವಂತಿಕೆ,ಲಂಬಾಣಿ ನೃತ್ಯ ,ಎನ್ ಸಿ ಸಿ ತಂಡ, ಹೋಂ ಗಾರ್ಡ್ ತಂಡ ಇತರರು ಮೆರವಣಿಗೆಯಲ್ಲಿ ಭಾಗವಹಿಸಿದರು ಈ ಸಮ್ಮೇಳನದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಚಲನಚಿತ್ರ ನಟಿಯರು ಹಾಗೂ ಹಾಸ್ಯ ಕಲಾವಿದರಾದ ಮಿಂಚು ಕಾಮಿಡಿ ಕಿಲಾಡಿ ಖ್ಯಾತಿಯ ನಟಿ, ಡಾ. ಪಂಕಜ ಟಿ ಪಿ .ಖ್ಯಾತ ಚಲನಚಿತ್ರ ನಟಿ, ಶ್ರೀಮತಿ ಲಲಿತಾ ಸುಂಟರಗಾಳಿ ಚಲನಚಿತ್ರ ಹಾಗೂ ರಂಗೋಲಿ ಧಾರವಾಹಿಯ ಖ್ಯಾತ ನಟಿ,ಕು.ನೀಲಾ ಮಜಾ ಟಾಕೀಜ್ ಕಾಮಿಡಿ ಕಿಲಾಡಿಗಳು ಖ್ಯಾತ ನಟಿ ಜೇವರ್ಗಿ, ರಾಜಣ್ಣ ಕುಂಟ ಕೋಣ ಮೂಕ ಜಾಣ ನಾಟಕದ ಖ್ಯಾತ ನಾಟಕದ ಖ್ಯಾತ ಹಾಸ್ಯ ಕಲಾವಿದರು, ಉಲ್ಲಾಸ್ ಗುರುಮಠ್ ಸಾಮಾಜಿಕ ಜಾಲತಾಣದ ಹಾಸ್ಯ ಕಲಾವಿದರು, ಗುಂಡಣ್ಣ ಡಿಗ್ಗಿ ಖ್ಯಾತ ಹಾಸ್ಯ ಕಲಾವಿದರು. ಕಾರ್ಯಕ್ರಮವನ್ನ ಶ್ರೀ ಷಣ್ಮುಖ ಶಿವಯೋಗಿಗಳ ವೇದಿಕೆಯ ಉದ್ಘಾಟನಾ ಸಮಾರಂಭವನ್ನು ದಿವ್ಯ ಸಾನಿಧ್ಯ ಷ.ಬ್ರ. ಶ್ರೀ ಡಾ ಸಿದ್ದರಾಮ ಶಿವಾಚಾರ್ಯರು ತಪೋವನಮಠ ಶಖಾಪೂರ, ಶ್ರೀ ಮ.ನಿ.ಪ್ರ ಡಾಕ್ಟರ್ ಶಿವಾನಂದ ಮಹಾಸ್ವಾಮಿಗಳು ದಾಸೋಹಮಠ ಸೊನ್ನ, ಹಾಗೂ ಜೇವರ್ಗಿ ಪ್ರಣತಿ ಸ್ಮರಣ ಸಂಚಿಕೆ ಬಿಡುಗಡೆ ಸನ್ಮಾನ್ಯ ಡಾಕ್ಟರ್ ಅಜಯ್ ಸಿಂಗ್ ಮಾನ್ಯ ಶಾಸಕರು ಜೇವರಿಗೆ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು ಬೆಂಗಳೂರು.ಉದ್ಘಾಟನೆ ಡಾ. ಶಾಶ್ವತ ಸ್ವಾಮಿ ಮುಕುಂದಮಠ ಸಾಹಿತಿಗಳು. ಜ್ಯೋತಿ ಬೆಳಗಿಸುವರು ಶ್ರೀ ದೊಡ್ಡಪ್ಪಗೌಡ ಪಾಟೀಲ ನರಬೋಳ ಮಾಜಿ ಶಾಸಕರು ಜೇವರ್ಗಿ ಹಾಗೂ ಆಶಯ ನುಡಿ ಶ್ರೀ ವಿಜಯಕುಮಾರ್ ಪಾಟೀಲ್ ತೆಗಲತಿಪ್ಪಿ ಅಧ್ಯಕ್ಷರು ಜಿಲ್ಲಾ ಕನ್ನಡ್ ಸಾಹಿತ್ಯ ಪರಿಷತ್ ಕಲ್ಬುರ್ಗಿ ಶ್ರೀ ಶರಣಗೌಡ ಪಾಟೀಲ್ ಜೈನಾಪುರ ಅವರು ಭಾವಾಂತರಂಗ ಗಜಲ ಸಂಕಲನ ಬಿಡುಗಡೆ ಶ್ರೀ ಶಿವರಾಜ ಪಾಟೀಲ್ ರದ್ದೇವಾಡಗಿ, ಜಿಲ್ಲಾಧ್ಯಕ್ಷರು ಬಿಜೆಪಿ ಗ್ರಾಮೀಣ ಕಲಬುರ್ಗಿ ಆಸೆಯನ್ನು ಶ್ರೀ ವಿಜಯಕುಮಾರ್ ಪಾಟೀಲ್ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲಬುರ್ಗಿ ಸಮ್ಮೇಳನ ಅಧ್ಯಕ್ಷರು ಡಾಕ್ಟರ್ ಕೆ ಎಸ್ ನಾಯಕ್ ನಿವೃತ್ತ ಪ್ರಾಚಾರ್ಯರು ಕಲಬುರಗಿ, ಅಧ್ಯಕ್ಷರು ಡಾಕ್ಟರ್ ಎಸ್ ಎ ಪಾಟೀಲ್ ವಿಶ್ರಾಂತಿ ಕುಲಪತಿ ಶ್ರೀ ಎಸ್ ಕೆ ಬಿರಾದ ಅಧ್ಯಕ್ಷರು ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಜೇವರ್ಗಿ ಹಾಗೂ ನಿರೂಪಣೆ ಡಾ. ಧರ್ಮಣ್ಣ ಕೆ ಬಡಿಗೇರ.ಕೇಂದ್ರ ಈ ಕಾರ್ಯಕ್ರಮದಲ್ಲಿ ಮುಂದಿನ ಘಟ್ಟ ಗೋಷ್ಠಿ ಒಂದರದ ನೇತೃತ್ವವನ್ನು ಶ್ರೀ ಷಡಕ್ಷರಿ ವಾಸುದೇವ ಶಿವಯೋಗಿಗಳು ಹಾಗೂ ಅಧ್ಯಕ್ಷತೆಯನ್ನು ಶ್ರೀ ಶ್ರೀನಿವಾಸ ವಸಂತ ಕುಷ್ಟಗಿ ಸಾಹಿತಿಗಳು, ಡಾಕ್ಟರ್ ಕಾವ್ಯಶ್ರೀ ಮಹಾಗಾವ್ಕರ್ ಸಾಹಿತಿಗಳು ಸಾಹಿತ್ಯ ಪರಂಪರೆ ಉಪನ್ಯಾಸ , ನಾಗಮ್ಮ ಹಣಮಂತ್ರಾಯ ಖೇಮಜಿ,ಪ್ರೋ ಸಿ ಎಸ್ ಆನಂದ ಹಾಗೂ ಗೌರವ ಉಪಸ್ಥಿತರಿದ್ದರು.
ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಘೋಷ್ಠಿ ಎರಡರ ಅಧ್ಯಕ್ಷತೆಯನ್ನು ಶ್ರೀ ಶರಣು ಗದ್ದಿಗೆ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ವಿಭಾಗ ಶಹಾಪುರ ಅವರು ವಹಿಸಿ ಕನ್ನಡ ಜಲ,ನೆಲ,ಸಂಸ್ಕೃತಿ ಕಾಪಾಡೋದು ನಮ್ಮೆಲ್ಲರ ಜವಬ್ದಾರಿ ಎಂದು ಹೇಳುತ್ತಾ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಮಧುರವಾದ ಕಂಠದಿಂದ ಹಾಡಿ ಎಲ್ಲಾ ಕನ್ನಡಾಭಿಮಾನಿಗಳ ಮನಸ್ಸು ಸೆಳೆದರು.ಉಪನ್ಯಾಸ ಶ್ರೀ ಸಾಹೇಬಗೌಡ ಬಿರಾದಾರ್ ಶಿಕ್ಷಕರು ಹೆಗ್ಗಣದೊಡ್ಡಿ ಉಪನ್ಯಾಸ ಶ್ರೀ ಮಂಜುನಾಥ ತಳವಾರ್ ಕನ್ನಡ ಪ್ರಾಧ್ಯಾಪಕರು ಕಲಬುರಗಿ ಗೌರವ ಉಪಸ್ಥಿತರಿದ್ದರು ಹಾಗೂ ನಿರೂಪಣೆ ಧನಸಿಂಗ್ ರಾಠೋಡ್ ಜೇವರ್ಗಿ, ಸ್ವಾಗತ ಭಾಷಣ ಕ.ಸಾ.ಪ.ತಾಲ್ಲೂಕು ಉಪಾಧ್ಯಕ್ಷರಾದ ಹನುಮಂತರಾಯ ರಾಂಪುರೆ ಜೇವರ್ಗಿ, ವಂದನಾರ್ಪಣೆ ಭಗವಂತರಾಯ ಮುತ್ತಪ್ಪಗೋಳ.
ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಡಾ. ಗೋವಿಂದರಾಜ್ ಆಲ್ದಾಳ್ ಸಾಹಿತಿಗಳು ಕಲಬುರ್ಗಿ ಉದ್ಘಾಟನೆ ಶ್ರೀ ಅಮೃತ್ ದೊಡ್ಡಮನಿ ಸಾಹಿತಿಗಳು ಕಲಬುರ್ಗಿ , ಆಶಯ ಭಾಷಣ ಶ್ರೀ ಪ್ರಕಾಶ್ ಅಂಗಡಿ ಸಾಹಿತಿಗಳು ಸುರಪೂರ ಗೌರವ ಉಪಸ್ಥಿತಿ ಶ್ರೀ ಬಸವರಾಜ್ ಶಾಸ್ತ್ರಿಗಳು ಹಿರೇಮಠ ಕುಕನೂರ ,ಶ್ರೀ ವೆಂಕಟೇಶ್ ಜನಾದ್ರಿ ಸಾಹಿತಿಗಳು ಹಾಗೂ ಉಪಸ್ಥಿತರಿದ್ದರು. ಇಲ್ಲಿ ಭಾಗವಹಿಸಿರುವ ಅನೇಕ ಕವಿಗಳೆಂದರೆ ಡಾಕ್ಟರ್ ಭೀಮಣ್ಣ ರಾಸಣಗಿ, ಮಹಾಂತ ಸಾಹೂ ಹರವಾಳ್,ಶ್ರೀಮತಿ ಉಮಾದೇವಿ , ಶ್ರೀಮತಿ ಜ್ಯೋತಿ ಪಾಟೀಲ್ ಜೈನಪುರ್ , ಕವಿತಾ , ನಾಗಣ್ಣ ಶಾಬಾದ್ ,ಶ್ರೀಮತಿ ಸಾವಿತ್ರಿ ಕೊಲ್ಲೂರ್, ಶಿವಾನಂದ್ ಕುಂಟೋಜಿ ಮಠ, ಲಕ್ಷ್ಮಣ ಹಿಪ್ಪರಗಿ,ಮಹಾಂತೇಶ ಪಾಟೀಲ್ ಯಾತ್ನೂರ್,ಸಿದ್ರಾಮಯ್ಯ ಮಠ ಕಾರ್ಯಕ್ರಮದಲ್ಲಿ ನಿರೂಪಣೆ ಕವಿತಹಳ್ಳಿ,ಸ್ವಾಗತ ಶಿಕ್ಷಕರು ಸಮ್ಮೇಳನದಲ್ಲಿ
ಸಮಾರೋಪ ಹಾಗೂ ಸನ್ಮಾನ ಸಮಾರಂಭ ದಿವ್ಯ ಸಾನಿಧ್ಯ ಶ್ರೀ ಮ.ನಿ. ಪ್ರ.ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತ ಮಠ ನೆಲೋಗಿ ,ಶ್ರೀ.ಷ.ಬ್ರ ಅಭಿನವ ಗುರುಬಸವ ಶಿವಾಚಾರ್ಯರು ಶ್ರೀ ಗುರುಬಸವೇಶ್ವರ ಮಠ ಅಂಕಲಿಗಿ ತಾಲೂಕ ಜೇವರ್ಗಿ ಅಧ್ಯಕ್ಷತೆ ಶ್ರೀ ಅಲ್ಲಂ ಪ್ರಭು ಪಾಟೀಲ್ ನೆಲೋಗಿ ಮಾಜಿ ವಿಧಾನ ಪರಿಷತ್ ಸದಸ್ಯರು ಕಲಬುರ್ಗಿ ನೇತೃತ್ವ ಡಾಕ್ಟರ್ ಸುರೇಶ್ ಆರ್ ಸಜ್ಜನ್ ಉಪಾಧ್ಯಕ್ಷರು ಡಿ ಸಿ ಸಿ ಬ್ಯಾಂಕ್ ಕಲಬುರ್ಗಿ ಹಾಗೂ ಸಮಾರೋಪ ಭಾಷಣ ಡಾಕ್ಟರ್ ಕರ್ಗೋಳೇಶ್ವರ ವಾಣಿಜ್ಯ ವಿಭಾಗದ ಮುಖ್ಯಸ್ಥರು ಸರಕಾರಿ ಪದವಿ ಪೂರ್ವದ ಕಾಲೇಜ್ ಜೇವರ್ಗಿ ನಿರ್ಣಯ ಮಂಡನೆ ಶ್ರೀ ಚನ್ನಮಲ್ಲಯ್ಯ ಹಿರೇಮಠ, ಗೌರವ ಅಧ್ಯಕ್ಷರು ತಾಲೂಕ ಕ.ಸಾ.ಪ ಜೇವರ್ಗಿ ಅನುಮೋದನೆ ಶ್ರೀ ಕಲ್ಯಾಣ ಕುಮಾರ ಸಂಗಾವಿ ,ಶ್ರೀಹರಿ ಎಸ್ ಕರ್ಕಿಹಳ್ಳಿ ಕಾರ್ಯದರ್ಶಿಗಳು ತಾಲೂಕ ಕಸಾಪ ಜೇವರ್ಗಿ ಮುಖ್ಯ ಅತಿಥಿಗಳು ಹಾಗೂ ಗೌರವ ಉಪಸ್ಥಿತರಿದ್ದರು.ಈ ಸಮಾರೋಪ ಹಾಗೂ ಸನ್ಮಾನ ಸಮಾರಂಭದಲ್ಲಿ ವಿಶೇಷ ಸನ್ಮಾನಿತರಾದಂತಹ ಶ್ರೀ ಡಿ ವಿ ಪಾಟಿಲ್ ಸಹಾಯಕ ಆಹಾರ ಮತ್ತು ನಾಗರಿಕ ಸರಬರಾಜು ಕಲಬುರಗಿ ,ಶ್ರೀಮತಿ ಕಮಲಾಬಾಯಿ ಮರೆಪ್ಪ ಬಡಿಗೇರ್ ಮಾಜಿ ಅಧ್ಯಕ್ಷರು ಪುರಸಭೆ ಜೇವರ್ಗಿ ಹಾಗೂ ಸದಸ್ಯರು ಜಿಲ್ಲಾ ಪಂಚಾಯತಿ ಕಲಬುರ್ಗಿ ,ವಿವಿಧ ರೀತಿಯ ಪೊಲೀಸ್ ಅಧಿಕಾರಿಗಳು ಮತ್ತು ಪತ್ರಕರ್ತ ವರದಿಗಾರರಿಗೆ ಸನ್ಮಾನಿಸಿದರು ಹಾಗೂ ಭರತನಾಟ್ಯ ಕುಮಾರ್ ಸಮೃದ್ಧಿ ಗುಳೇದಳವರಿಂದ ಮೂಡಿ ಬಂದಿತು. ನಿರೂಪಣೆ ಸುನಂದಾ ಕಲ್ಲಾ ಜೇವರ್ಗಿ,ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಅಜಯ್ ಸಿಂಗ್ ಮಾನ್ಯ ಶಾಸಕರು ಜೇವರ್ಗಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು ಬೆಂಗಳೂರು ಕಾರ್ಯಾಧ್ಯಕ್ಷರು ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಬೋಳ ಮಾಜಿ ಶಾಸಕರು ,ಶ್ರೀ ಕೇದಾರಲಿಂಗಯ್ಯ ಹಿರೇಮಠ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಜೆಡಿಎಸ್ ಸಮಿತಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಶ್ರೀ ಎಸ್ ಕೆ ಬಿರಾದ ಅಧ್ಯಕ್ಷರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಜೇವರ್ಗಿ ಉಪಾಧ್ಯಕ್ಷರುಗಳಾದ ಶ್ರೀ ಅಶೋಕ ಸಾಹೂ ಗೋಗಿ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜಗೌಡ ಪಾಟೀಲ್ ನರಬೋಳ, ವಿಶ್ವರಾಜ ಗುತ್ತೆದಾರ, ರಮೇಶ ಬಿರಾದಾರ ನೇದಲಗಿ, ಧನರಾಜ ರಾಠೋಡ, ನಬಿ ಪಟೇಲ್ ಮೇಟಿ,ಮಲ್ಲಿಕಾರ್ಜುನ್ ಸುಲೇಪೇಟೆ,ಭೀಮು ಗುತ್ತೆದಾರ,ಬಸವರಾಜ ಭಾಗೇವಾಡಿ,ರಾಜು ಮುದ್ದಡಗಿ,ಸಮೀರ್ ಪಟೇಲ್ ಗಿರಣಿ,ಬಸವರಾಜ ದಬಕಿ,ಧರೀಶ ಗುಳಗಿ,ಸಂಗಮೇಶ ಸಂಕಾಲಿ,ಸುರೇಶ ಪಾಟೀಲ್ ನೇದಲಗಿ ಹಾಗೂ ಪಕ್ಷದ ನಾಯಕರು,
ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಲಹಾ ಸಮಿತಿ ಸದಸ್ಯರು, ಹಣಕಾಸು ಸಮಿತಿ ಸದಸ್ಯರು, ಆಹಾರ ಸಮಿತಿ ಸದಸ್ಯರು, ವೇದಿಕೆ ಸಮಿತಿ ಸದಸ್ಯರು ,ಮೆರವಣಿಗೆ ಸಮಿತಿ ಸದಸ್ಯರು, ಪ್ರಚಾರ ಸಮಿತಿ ಸದಸ್ಯರು, ಪುರಸಭೆ ಸದಸ್ಯರುಗಳು, ಸಮ್ಮೇಳನದಲ್ಲಿ ಭಾಗವಹಿಸಿದ ಜೇವರಿಗೆ ಪಟ್ಟಣದ ವೈದ್ಯರು ಹಾಗೂ ಇನ್ನೂ ಹಲವಾರು ಸಮ್ಮೇಳನದಲ್ಲಿ ಭಾಗವಹಿಸಿರುವ ಜೇವರ್ಗಿ ತಾಲ್ಲೂಕಿನ ಅಧಿಕಾರಿಗಳು ಹಾಗೂ ಪ್ರಾಚಾರ್ಯರು,ಸಮ್ಮೇಳನದಲ್ಲಿ ಭಾಗವಹಿಸಿರುವ ಜೇವರ್ಗಿ ಪದವಿ ಪೂರ್ವ ಕಾಲೇಜುಗಳ ಮುಖ್ಯಸ್ಥರು ,ಪ್ರಾಚಾರ್ಯರು ಹಾಗೂ ಶಿಕ್ಷಕರು ಹಾಗೂ ಮಹಾದ್ವಾರಗಳು,ಶ್ರೀ ಕೋಳಕೂರ ಮಹಾದ್ವಾರಗಳು ಆಂದೋಲದ ಶ್ರೀ ಕರುಣೇಶ್ವರ ಮಹಾದ್ವಾರಗಳು, ಸಿದ್ಧಬಸವೇಶ್ವರ ಮಹಾದ್ವಾರಗಳು ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದಂತ ಕವಿಗಳ ಭಾವಚಿತ್ರಗಳು,ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ,ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ,ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ, ಇದರಲ್ಲಿ ಗೌರವ ಸಲಹೆಗಾರರು, ವಿಶೇಷ ಆಹವಾನಿತರು, ಗೌರವಾಧ್ಯಕ್ಷರು ,ಅಧ್ಯಕ್ಷರು ಉಪಾಧ್ಯಕ್ಷರು, ಗೌರವ ಕಾರ್ಯದರ್ಶಿಗಳು, ಗೌರವ ಕೋಶ ಅಧ್ಯಕ್ಷರು, ಮಹಿಳಾ ಪ್ರತಿನಿಧಿಗಳು ,ಸಂಘ ಸಂಸ್ಥೆಯ ಪ್ರತಿನಿಧಿಗಳು, ಪರಿಶಿಷ್ಟ ಪಂಗಡ ಪ್ರತಿನಿಧಿಗಳು ,ಕಾನೂನು ಸಲಹೆಗಾರರು ,ಪತ್ರಿಕಾ ಪ್ರತಿನಿಧಿಗಳು ,ಸಾಹಿತ್ಯ ಸಂಪರ್ಕ ಪ್ರತಿನಿಧಿಗಳು ,ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕದ ವತಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸುಗೊಳಿಸಿದರು ಎಂದು ಕ.ಸಾ.ಪ ತಾಲ್ಲೂಕ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.


ವರದಿ: ಚಂದ್ರಶೇಖರ ಪಾಟೀಲ್ ಗುಡೂರ SN

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ