ಹುಟ್ಟು ಸಾವುಗಳ ಮಧ್ಯೆ ಬದುಕೊಂದೇ ನಿನ್ನದು
ಆ ಬದುಕಿಗೆ ಭಾವ ಅನುಭವವೂ ನಿನ್ನದಾಗಿರಬೇಕು ವಿನಃ
ಮತ್ಯಾವ ಪ್ರಭಾವಕ್ಕೂ ಅವಕಾಶ ಕೊಡಬೇಡ….!!
ಬದುಕೂ ನಿನ್ನದು ಬವಣೆಯೂ ನಿನ್ನದು
ಬದುಕಿ ಬಾಳುವ ಬಯಕೆಗೆ ಭರವಸೆ ಇರಬೇಕು ವಿನಃ
ಮತ್ಯಾವ ಭಯ ಬೆದರಿಕೆಗೆ ಕಿವಿಗೊಡಬೇಡ….!!
ಸಮಯವೂ ನಿನ್ನದು ಕರ್ಮವೂ ನಿನ್ನದು
ಧರ್ಮ ಅಧರ್ಮಗಳ ಅರಿವಿರಲಿ ವಿನಃ
ಮತ್ಯಾವ ಅಮಾನವೀಯ ಧರ್ಮಕ್ಕೆ ಇಳಿಯಬೇಡ….!!
ನೀತಿಯೂ ನಿನ್ನದು ನಿಯಮವೂ ನಿನ್ನದು
ಪ್ರೀತಿ ಸ್ನೇಹಗಳ ಸಂಭಂದಗಳು ಸೌಖ್ಯವಾಗಿರಬೇಕು ವಿನಃ
ಮತ್ಯಾವ ಜಾತಿ ಭೀತಿಗಳ ಪ್ರೇತದೊಳಗೆ ಮುಳುಗಬೇಡ…..!!
ಮನಸ್ಸು ನಿನ್ನದು ಕನಸ್ಸು ನಿನ್ನದು
ಧನಸ್ಸಿನಂತಹ ಗುರಿಯಿರಲಿ ವಿನಃ
ಮತ್ಯಾವ ಮುನಿಸಿಕೊಳ್ಳುವ ಮನಕೆ ಮರುಗಬೇಡ….!!
ಬದುಕಿಗಾಗಿ ಬಾಳು ಬಾಳಿಗಾಗಿ ಬದುಕು
ಬದುಕಿಗಾಗಿ ಹೊತ್ತ ಭರವಸೆಗಳು ಬಾಡದಂತಿರಬೇಕು ವಿನಃ
ಮತ್ಯಾವ ಬೆಲೆಯಿಲ್ಲದ ಬಯಕೆಗಳಿಗೆ ಬಂಧನವಾಗಬೇಡ….!!
- ಹನುಮಂತ ದಾಸರ ಹೊಗರನಾಳ.
ಮೊ : 9945246234.