ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಬಿ.ಎ.ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಸಮಾರಂಭ ನೇರವೇರಿಸಲಾಯಿತು ಉದ್ಘಾಟಕರಾಗಿ ಪ್ರೊಫೆಸರ್ ರಾಮಕೃಷ್ಣ ಇಳಕಲರವರು ಮಾತನಾಡುತ್ತಾ ಧ್ಯಾನದ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪರಂಪರೆಯ ಸೇವಾ ಮನೋಭಾವದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲ್ಮೇಶ್ವರ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಜಿ.ಎಸ್.ಹಲಸಗಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂದಿನ ಯುವ ವಿದ್ಯಾರ್ಥಿಗಳಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ ಅದಕ್ಕಾಗಿ ಆರೋಗ್ಯವಂತ ಮನಸ್ಸು,ಸದೃಡವಾದ ಗುರಿ,ದುರಭ್ಯಾಸಗಳನ್ನು
ಹೋಗಲಾಡಿಸುವ ಇಚ್ಚಾಶಕ್ತಿಯನ್ನು ನಿಮ್ಮದಾಗಿಸಿಕೊಂಡರೆ ವಿಜ್ಞಾನ ಮತ್ತು ತಂತ್ರಜ್ಞಾನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಂತೆ ಅತ್ಯುನ್ನತ ಮಟ್ಟದ ಹುದ್ದೆಗಳನ್ನು ನಮ್ಮದಾಗಿಸಿಕೊಂಡು ನಾಡಿಗೆ ಸಂಸ್ಥೆಗೆ ಸೇವೆ ಮಾಡುವ ಸೌಭಾಗ್ಯ ನಿಮ್ಮದಾಗಲೆಂದು ಆಶಿಸಿದರು ವಿದ್ಯಾರ್ಥಿಗಳಾದ ಸ್ನೇಹಾ ಸಂಗೊಳ್ಳಿ,ಸುಧಾ ದನದಮನಿ ಕಾರ್ಯಕ್ರಮ ನಿರೂಪಿಸಿದರು ಕುಮಾರ್ ದುಂಡಯ್ಯಾ ಮಾನ್ಯದಮಠ ವಂದಿಸಿದರು ಪ್ರಾಚಾರ್ಯರಾದ ಪ್ರೊ ಜಿ ಆರ್ ವಾಲಿ ಉಪಸ್ಥಿತರಿದ್ದರು.
ವರದಿ:ದಿನೇಶಕುಮಾರ ಅಜಮೇರಾ