ಮಳೆ ಬಂದು ನಿಂತಾಗ ಹನಿಗಳ ಜೊತೆಗೂಡಿ
ಮನಸ ಹೂವ ಮೇಲೆ ಜಿನುಗುತಿರುವ
ನನ್ನವನೇ
ಆ ಜಾತ್ರೆಯಲಿ ಗದ್ದಲದ ರಾತ್ರಿಯಲಿ
ಮುದ್ದಾದ ಗುರಿಯಿಟ್ಟು ಕಣ್ಣಲ್ಲೇ ಹೊಡೆದವನೇ
ನಾ ಮುಂದೆ ನಡೆವಾಗ ನೀ ಹಿಂದೆ ಬರುವಾಗ
ಕತ್ತಲಲ್ಲೇ ಕೈಬೀಸಿ ನಸುನಕ್ಕು ನಡೆದವನೇ
ಕಣ್ಣ್-ಕಣ್ಣು ಬೆರೆತಾಗ ನಾ ನಿಂತಲ್ಲೇ ನುಲಿದವಳು
ನೀ ದಾರೀಲಿ ನಡೆವಾಗ ನಾ ನಸುನಕ್ಕವಳು
ಊರಾಚೆ ಗುಡಿ ಮುಂದೆ ಕುರಿ ಕಡಿಯುವಾಗ
ದೇವರಿಗೆ ಕೈಮುಗಿದು ನನ್ನ ನೋಡಿ ನಿಂತವನೆ
ಮರುದಿನ ರಾತ್ರಿ ಆರ್ಕೆಸ್ಟ್ರಾದವರಿಗೆ ಹೇಳಿ
ಸಾಲುತಿಲ್ಲವೇ.ಸಾಲುತಿಲ್ಲವೇ…ಹಾಡನ್ನು
ಎರಡು ಬಾರಿ ಹೇಳಿಸಿದ್ದನ್ನ ನಾ ಮರೆಯಲಾರೆ
ನಿಮ್ಮೂರ ಗುಂಪಲ್ಲಿ ಹುಲಿಯಂತೆ ಇರುವವನೇ
ನನ್ನವನೇ
-ರತ್ನಾ,ಹೊನ್ನನಾಯಕನಹಳ್ಳಿ
