ಕೊಪ್ಪಳ ದಿ:06-12-2022 ರಂದು ಕುಷ್ಠಗಿ ತಾಲೂಕಿನ ಕ್ಯಾದಿಗುಪ್ಪಾ
ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ
ನಡೆದ *“ಅಮ್ಮನಿಗಾಗಿ ಒಂದು ಪುಸ್ತಕ”* ಅಭಿಯಾನದಲ್ಲಿ ಭಾಗವಹಿಸಿದ ತಾಯಂದಿರು ಹಾಗೂ ಮುದ್ದು ಮಕ್ಕಳಿಗೆ ಅಭಿನಂದನಾ ಪತ್ರ ಕೊಟ್ಟು ಗೌರವಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷರು ಅಭಿವೃದ್ದಿ ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಂಥಾಲಯ ಮೇಲ್ವಿಚಾರಕರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳು ಮಾತನಾಡಿ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಮೊಬೈಲ್ ಮತ್ತು ಟಿವಿಯಿಂದ ದೂರವಿರಿಸಿ ಓದುವ ಹವ್ಯಾಸವನ್ನು ಬೆಳಸಿ ಎಂದರು ನಂತರ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತನಾಡಿ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದು ಹೇಳುವ ಮೂಲಕ ಓದುವ ಮತ್ತು ಬರೆಯುವ ಅಭ್ಯಾಸ ಕಲಿಸಬೇಕೆಂದು ಹೇಳಿದರು.
ಭಾಗವಹಿಸಿದ ತಾಯಂದಿರಿಗೆ ಹಾಗೂ ಮುದ್ದು ಮಕ್ಕಳಿಗೆ ಮ್ಯೂಸಿಕ್ ಚೇರ್ ಮತ್ತು ರಂಗೋಲಿ,ಚಿತ್ರ,ಬಿಡಿಸುವ ಚಟುವಟಿಕೆ ಮಾಡಿಸಲಾಯಿತು ನಂತರ ಗ್ರಾಮ ಪಂಚಾಯತ್ ಅಧ್ಯಕ್ಷರು ಸೂಕ್ತ ಬಹುಮಾನ ವಿತರಣೆ ಮಾಡಿದರು.
-ಕರುನಾಡ ಕಂದ