ವಿಶ್ವಕರ್ಮರ ಧೀಮಂತ ನಾಯಕರು,ವಿಧಾನ ಪರಿಷತ್ ಸದಸ್ಯರು ಹಾಗೂ ಅ.ಕ.ವಿ.ಮಹಾಸಭಾ ರಾಜ್ಯಾದ್ಯಕ್ಷರಾದ ಸನ್ಮಾನ್ಯಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಆದೇಶದ ಮೇರೆಗೆ ಮಂಗಳವಾರ ಲಿಂಗಸೂಗೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಅಖಿಲ ವಿಶ್ವಕರ್ಮ ಮಹಾಸಭಾ(ರಿ)ಹಾಗೂ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ(ರಿ )ದ ಹಾಗೂ ತಾಲೂಕು ಘಟಕ ಲಿಂಗಸೂಗೂರು ವತಿಯಿಂದ ವಿಶ್ವಕರ್ಮ ಸಮಾಜಕ್ಕೆ STಮೀಸಲಾತಿಗಾಗಿ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಹಾಗೂ ಧಾರ್ಮಿಕ ಉಪನಯನ ಕಾರ್ಯಕ್ರಮಗಳ ನಿಮಿತ್ಯ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾದ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಮಾರುತಿ ಬಡಿಗೇರ ಮಾತನಾಡಿ ವಿಶ್ವಕರ್ಮ ಸಮಾಜ ಪಂಚ ಕುಲಕಸುಬುಗಳನ್ನು ಮಾಡುತ್ತಾ,ದೇಶದ ರೈತರ ಬೆನ್ನೆಲುಬಾಗಿ ನಿಂತಿದೆ ಇತ್ತೀಚಿನ ದಿನಗಳಲ್ಲಿ ಯಂತ್ರೋಪಕರಣಗಳಿಂದ ಗುಡಿ ಕೈಗಾರಿಕೆಗಳು ಮರೆಮಾಚುತ್ತಿವೆ.ಇದರಿಂದ ಪಂಚ ಕುಲ ಕಸುಬುಗಳನ್ನೇ ನಂಬಿಕೊಂಡು ಬದುಕುತ್ತಿರುವ ವಿಶ್ವಕರ್ಮ ಸಮಾಜ ಬೀದಿಗೆ ಬಂದಂತಾಗಿದೆ ಇದಕ್ಕೆ ನಮ್ಮ ರಾಜ್ಯಾದ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ವಿಶ್ವಕರ್ಮ ಏಳಿಗೆಗಾಗಿ ಶಿಕ್ಷಣ, ಆರ್ಥಿಕತೆ,ರಾಜಕೀಯ ಇತ್ತೀಚಿನ ದಿನಗಳಲ್ಲಿ ಅತಿಮುಖ್ಯವೆಂದು ತಿಳಿದು ವಿಶ್ವಕರ್ಮ ಸಮಾಜವನ್ನು ST ಮೀಸಲಾತಿಗೆ ಒಳಪಡಿಸಲು ರಾಜ್ಯಾದ್ಯಂತ ಸುಮಾರು 745 ಹೋಬಳಿಗಳಲ್ಲಿ ಜನಜಾಗೃತಿ ಸಭೆಗಳನ್ನು ಮಾಡುತ್ತಿದ್ದಾರೆ ಈ ಸಭೆಯಲ್ಲಿ ಲಿಂಗಸುಗೂರು ತಾಲೂಕು ಮಟ್ಟದ ವಿಶ್ವಕರ್ಮ STಮೀಸಲಾತಿ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ವಿಶ್ವಕರ್ಮ ಸಾಮೂಹಿಕ ಉಪನಯನ ಧಾರ್ಮಿಕ ಕಾರ್ಯಕ್ರಮವನ್ನು ಜನವರಿ ಮೊದಲನೇ ವಾರದಲ್ಲಿ ಅತ್ಯಂತ ಅದ್ದೂರಿಯಾಗಿ, ಇಡೀ ಜಿಲ್ಲೆಯ ಸಮಾಜದ ಬಂಧುಗಳನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳಲು ಹಾಗೂಈ ಸಮಾವೇಶವನ್ನು ಶಂಕರರೆಡ್ಡಿ ಕಲ್ಯಾಣ ಮಂಟಪದಲ್ಲಿ ಸಮಾವೇಶ ಮಾಡಲು ನಿರ್ಧಾರಿಸಲಾಯಿತು.ಈ ಸಮಾವೇಶಕ್ಕೆ ರಾಜ್ಯಾದ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ, ಮಹಾಸಭಾ ಯುವ ಘಟಕ ಅಧ್ಯಕ್ಷ ಶ್ರೀನಿವಾಸ್ ಮಳವಳ್ಳಿ,ಜಿಲ್ಲಾ ಮಹಾಸಭಾ ಉಸ್ತುವಾರಿಗಳಾದ ಶ್ರೀ ಲೋಹಿತ್ ಕಲ್ಲೂರ್ ಮಾಜಿ KVCDC ಅಧ್ಯಕ್ಷರು ಹಾಗೂ ಸಮಾಜದ ಪರಮಪೂಜ್ಯ ಸ್ವಾಮೀಜಿಗಳು,ಸಂಸದರು ಶಾಸಕರುಗಳು,ಇತರೆ ರಾಜಕೀಯ ಮುಖಂಡರುಗಳು,ವಿಶ್ವಕರ್ಮ ಸಮಾಜದ ರಾಜ್ಯ ಹಾಗೂ ಜಿಲ್ಲಾ ಮುಖಂಡರುಗಳು ಭಾಗವಹಿಸಲಿದ್ದಾರೆ.ಸಮಾಜದ ಒಳಿತಿಗಾಗಿ,ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ವಿಶ್ವಕರ್ಮ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಮ್ಮ ತಮ್ಮ ತಾಲೂಕುಗಳಲ್ಲಿ ಹೆಚ್ಚಿನ ಪ್ರಚಾರಗೊಳಿಸಿ, ಕಾರ್ಯಕ್ರಮದ ಮಹತ್ವವನ್ನು ತಿಳಿಸಿ ಯಶಸ್ವಿಗೊಳಿಸಲು ಲಿಂಗಸುಗೂರು ಮಹಾಸಭಾದ ಪದಾಧಿಕಾರಿಗಳ ಪರವಾಗಿ ಮನವಿ ಮಾಡಿದರು.
ಈ ಸಭೆಯಲ್ಲಿ ಅ ಕ ವಿ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬ್ರಹ್ಮಗಣೇಶ ವಕೀಲರು,ರಾಜ್ಯ ಕಾರ್ಯದರ್ಶಿ ಸೋಮನಾಥ ಪತ್ತಾರ ಸುಕಾಲಪೇಟೆ, ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಜಿಲ್ಲಾದ್ಯಕ್ಷ ಗಿರೀಶ ಆಚಾರ್ಯ,ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಮು ಗಾಣಧಾಳ್,ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಬಡಿಗೇರ್, ಉದಯಕುಮಾರ ಕಮ್ಮಾರ ಮುದ್ಗಲ್, ಡಾ. ವೆಂಕಟೇಶ್ ಅನ್ವರಿ, ಅ.ಕ.ವಿ.ಮ.ತಾಲೂಕ ಅದ್ಯಕ್ಷ ಅಯ್ಯಪ್ಪ ಗೆಜ್ಜಲಗಟ್ಟ, KVCDC ಜಿಲ್ಲಾ ನಾಮ ನಿರ್ದೇಶಿತ ಸದಸ್ಯ ಎಸ್. ರವೀಂದ್ರಕುಮಾರ, ಮಹಾಸಭಾ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ವಿಜಕುಮಾರ ಬಡಿಗೇರ್ ಮಸ್ಕಿ,ಕಾಳಪ್ಪ ಬಡಿಗೇರ ನಿ. ಶಿಕ್ಷಕರು,ಅಮರೇಶಪ್ಪ ಬಡಿಗೇರ ಲಿಂಗಸೂಗೂರು, ಮಹಾಸಭಾ ಜಿಲ್ಲಾ ಮಹಿಳಾ ಅಧ್ಯಕ್ಷ ಮಂಜುಳಾ ಬಡಿಗೇರ, ಮೌನೇಶ್ವ ನಾಗಲಾಪುರ,ಧರ್ಮಣ್ಣ ಗುಂಜಹಳ್ಳಿ, ಮಂಜುನಾಥ ಬಡಿಗೇರ, ಬಸವರಾಜ ಕಮತಗಿ,ಚನ್ನಪ್ಪ ಹೊಸಳ್ಳಿ, ಗದ್ದೆಪ್ಪ ಬಯ್ಯಪುರ,ವೀರಣ್ಣ ಬಡಿಗೇರ ಹಟ್ಟಿ,ವಿರುಪಾಕ್ಷ ಮುದುಗಲ್ಲು,ಪ್ರಭಾಕರ್ ಮುದುಗಲ್ಲ, ನಾರಾಯಣ ಮುದಗಲ್ಲು, ಕಾಳಪ್ಪ ಮುದಗಲ್ಲು,ಜಗದೀಶ್ ಹಟ್ಟಿ, ಮನೋಹರ, ಮಲ್ಲಿಕಾರ್ಜುನ ಬಡಿಗೇರ, ಮೌನೇಶ ಗೋನವಾರ, ಕಾಳಪ್ಪ ಕಣ್ಣೂರು, ಸುರೇಶ ಸಂಗಾಪುರ, ಬ್ರಹ್ಮಯ್ಯ ಮಾನ್ವಿ,ಸಿದ್ದು ಬಡಿಗೇರ, ಬಾನಮ್ಮ,ಕವಿತಾಳ ಅಮರಗುಂಡಪ್ಪ, ಜಯಶ್ರೀ ಬಡಿಗೇರ್ ಶಿಕ್ಷಕಿ, ಸತೀಶ್ ಪತ್ತಾರ ಮುಂತಾದವರು ಉಪಸ್ಥಿತರಿದ್ದರು.